ಶ್ರೀ ರಾಮಕೃಷ್ಣ ಮಠ ಜ್ಞಾನ, ಸೇವೆಯ ಮೂಲಕ ಜಗತ್ತಿಗೆ ಮಾದರಿಯಾದ ಸಂಸ್ಥೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಮಂಗಳೂರು, ಜೂ.4; ಜ್ಞಾನ ಮತ್ತು ಸೇವೆ ಯ ಮೂಲಕ ಶ್ರೀ ರಾಮಕೃಷ್ಣ ಮಠಗಳು ಜಗತ್ತಿನಾದ್ಯಂತ ನಿರ್ವಹಿಸು ತ್ತಿರುವ ಕಾರ್ಯ ಜಗತ್ತಿಗೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಮೃತ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ದ ಸಮಾರೋಪ ಸಮಾರಂಭ ವನ್ನುದ್ಧೇಶಿಸಿ ಅವರು ಇಂದು ಮಾತನಾಡುತ್ತಿದ್ದರು.
ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮೌಲ್ಯಗಳು ದೂರವಾಗುತ್ತಿವೆ. ಸ್ವಾರ್ಥ ಪರವಾದ ಚಿಂತನೆಯ ಕಾರಣದಿಂದ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಹೆಚ್ಚುತ್ತಿವೆ. ಆಡಳಿತದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯ ಚಟುವಟಿಕೆಗಳಲ್ಲೂ ಸಾಕಷ್ಟು ಸವಾಲುಗಳಿವೆ. ಇಂತಹ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ, ವಿವೇಕಾನಂದರು ಧರ್ಮದ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ತೋರಿದವರು ಇಂದಿಗೂ ನಮಗೆ ಆದರ್ಶ ಪ್ರಾಯರು. ಭಾರತ ದೇಶ ವಿಶ್ವ ಗುರುವಾಗ ಬೇಕಾದರೆ ಶ್ರೀ ರಾಮಕೃಷ್ಣ ಆಶ್ರಮದ ಆದರ್ಶ ಗಳನ್ನು ಅಳವಡಿಸಿ ಕೊಂಡು ಸಾಗಬೇಕಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ದೇಶದಲ್ಲಿ 125 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ರಾಮಕೃಷ್ಣ ಮಠಗಳು ,ದೇಶ ವಿದೇಶಗಳಲ್ಲಿ ತಮ್ಮದೇ ಆದ ರೀತಿಯ ಕೊಡುಗೆ ನೀಡಿವೆ.75 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಜಿಲ್ಲೆಯ ಅಭಿವೃದ್ಧಿ ಗೆ ಮಹತ್ವದ ಕೊಡುಗೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಕಾಗೇರಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ ಆಳ್ವ, ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ, ಎಕಗ ಮ್ಯಾ ನಂದ ಸ್ವಾಮೀಜಿ, ಪಶ್ಚಿಮ ಬಂಗಾಳದ ಬೇಲೂರು ಮಠದ ಉಪಾಧ್ಯಕ್ಷ ರಾದ ಗೌತಮಾನಂದಾಜಿ ಮಹಾರಾಜ್, ವಿಶ್ವಸ್ಥ ರಾದ ಮುಕ್ತಿ ದಾನಂದಜಿ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು.







