ಪ್ರವೇಶ ನಿಷೇಧ; ಮುಸ್ಲಿಂ ಲೀಗ್ ಖಂಡನೆ
ಬೆಳ್ತಂಗಡಿ: ತಾಲೂಕಿನ ಸೌತಡ್ಕದ ಪುಣ್ಯಕ್ಷೇತ್ರ ಪರಿಸರಕ್ಕೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಿ ಫಲಕ ಹಾಕಿರುವ ವಿರುದ್ಧ ಸರಕಾರವು ಕೂಡಲೇ ಕಠಿನ ಕ್ರಮ ಜರುಗಿಸಬೇಕೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ಅಧ್ಯಕ್ಷ ಕೆ.ಎಂ.ಫಯಾಝ್ ಆಗ್ರಹಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣವ್ಯಯಿಸಿ ಸಾರ್ವಜನಿಕರಿಗಾಗಿ ನಡೆಸುವ ಸರಕಾರ ನಾಡಿನ ಜನರಿಗೆ ಶಾಂತಿ - ನೆಮ್ಮದಿಯ ಬದುಕು ಸಾಧಿಸಲು ಅನುವು ಮಾಡಿಕೊಡಬೇಕಾದದ್ದು ಆಧ್ಯಕರ್ತವ್ಯ. ಆ ಕರ್ತವ್ಯ ನಿಭಾಯಿಸಲು ಸಂಪೂರ್ಣ ವಿಫಲವಾಗಿರುವ ಸರಕಾರ ತೊಲಗಿದರೆ ಮಾತ್ರ ಜನರಿಗೆ ನೆಮ್ಮದಿಯೆಂದು ಫಯಾಝ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story