Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎವರೆಸ್ಟ್ ಶಿಖರವನ್ನೇರಿದ್ದಾಗಿ ಸುಳ್ಳು...

ಎವರೆಸ್ಟ್ ಶಿಖರವನ್ನೇರಿದ್ದಾಗಿ ಸುಳ್ಳು ಪ್ರತಿಪಾದಿಸಿದ್ದಕ್ಕಾಗಿ ನಿಷೇಧಿಸಲ್ಪಟ್ಟ ಆರು ವರ್ಷಗಳ ಬಳಿಕ ಅದನ್ನು ಸಾಧಿಸಿದ

ವಾರ್ತಾಭಾರತಿವಾರ್ತಾಭಾರತಿ4 Jun 2022 11:09 PM IST
share
ಎವರೆಸ್ಟ್ ಶಿಖರವನ್ನೇರಿದ್ದಾಗಿ ಸುಳ್ಳು ಪ್ರತಿಪಾದಿಸಿದ್ದಕ್ಕಾಗಿ ನಿಷೇಧಿಸಲ್ಪಟ್ಟ ಆರು ವರ್ಷಗಳ ಬಳಿಕ ಅದನ್ನು ಸಾಧಿಸಿದ

ಕಠ್ಮಂಡು,ಜೂ.4: ಈ ಹಿಂದೆ ವಿಶ್ವದ ಅತ್ಯಂತ ಎತ್ತರದ ಪರ್ವತ ಶಿಖರ ಎವರೆಸ್ಟ್‌ನ್ನು ಹತ್ತಿದ್ದಾಗಿ ಸುಳ್ಳು ಪ್ರತಿಪಾದಿಸಿದ್ದ ಆರೋಪದಲ್ಲಿ ಪರ್ವತಾರೋಹಣದಿಂದ ನಿಷೇಧಿಸಲ್ಪಟ್ಟಿದ್ದ ಭಾರತೀಯ ಪರ್ವತಾರೋಹಿ ನರೇಂದರ್ ಸಿಂಗ್ ಯಾದವ ಆರು ವರ್ಷಗಳ ಬಳಿಕ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ.

ಮೇ 2016ರಲ್ಲಿ 29,032 (8,849 ಮೀ.) ಅಡಿ ಎತ್ತರದ ಎವರೆಸ್ಟ್ ಶಿಖರವನ್ನು ತಾನು ತಲುಪಿದ್ದಾಗಿ 26ರ ಹರೆಯದ ಯಾದವ ಹೇಳಿಕೊಂಡಿದ್ದರು. ಆದರೆ ಅವರು ಶಿಖರದಲ್ಲಿದ್ದ ಚಿತ್ರಗಳನ್ನು ಡಿಜಿಟಲ್ ವಿಧಾನದಲ್ಲಿ ಮಾರ್ಪಡಿಸಲಾಗಿತ್ತು ಎನ್ನುವುದು ನಂತರ ಬೆಳಕಿಗೆ ಬಂದಿತ್ತು ಮತ್ತು ನೇಪಾಳ ಸರಕಾರವು ಅವರ ಸಾಧನೆಗೆ ಮಾನ್ಯತೆಯನ್ನು ಹಿಂದೆಗೆದುಕೊಂಡಿತ್ತು.

ಯಾದವ ಮತ್ತು ಇತರ ಇಬ್ಬರು ಪರ್ವತಾರೋಹಿಗಳಿಗೆ ಆರು ವರ್ಷಗಳ ನಿಷೇಧವನ್ನು ವಿಧಿಸಲಾಗಿತ್ತು. ನಿಷೇಧ ಅಂತ್ಯಗೊಂಡ ಬೆನ್ನಲ್ಲೇ ಯಾದವ ಎವರೆಸ್ಟ್ ಶಿಖರವನ್ನು ಹತ್ತಿದ ಸಾಧನೆಯನ್ನು ಮಾಡಿದ್ದಾರೆ. 'ಎವರೆಸ್ಟ್ ನಮ್ಮೆಲ್ಲರ ಕನಸಾಗಿದೆ,ಆದರೆ ನನ್ನ ಪಾಲಿಗೆ ಎವರೆಸ್ಟ್ ಜೀವನವಾಗಿದೆ 'ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯಾದವ ತಿಳಿಸಿದರು.

'ನನ್ನ ವಿರುದ್ಧ ಬಹಳಷ್ಟು ಆರೋಪಗಳಿದ್ದವು,ಹೀಗಾಗಿ ನಾನು ನನ್ನನ್ನು ಸಾಬೀತುಗೊಳಿಸಬೇಕಿತ್ತು ಮತ್ತು ಎವರೆಸ್ಟ್‌ನ್ನು ಹತ್ತಬೇಕಿತ್ತು 'ಎಂದರು.

ತಾನು ಶಿಖರವನ್ನು ಹತ್ತಿದ್ದೆ,ಆದರೆ 2020ರಲ್ಲಿ ಭಾರತದ ಪ್ರತಿಷ್ಠಿತ ತೆನ್ಜಿಂಗ್ ನೋರ್ಗೆ ಪ್ರಶಸ್ತಿಗೆ ತನ್ನನ್ನು ನಾಮಕರಣ ಮಾಡಿದ ಬಳಿಕ ತಂಡದ ನಾಯಕ ಚಿತ್ರಗಳನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಎಂದರು.

ಬಳಿಕ ಪ್ರಶಸ್ತಿಯನ್ನು ತಡೆಹಿಡಿಯಲಾಗಿತ್ತು. ಇದು ತನಗೆ ಮತ್ತು ತನ್ನ ಕುಟುಂಬಕ್ಕೆ ತೀವ್ರ ನೋವನ್ನುಂಟು ಮಾಡಿತ್ತು ಎಂದು ಯಾದವ ಹೇಳಿದರು.

ಮೇ 20ರಂದು ಯಾದವ ಮೇಲಿನ ನಿಷೇಧ ಅಂತ್ಯಗೊಂಡಿತ್ತು ಮತ್ತು ಏಳು ದಿನಗಳ ಬಳಿಕ ಅವರು ಎವರೆಸ್ಟ್ ಶಿಖರದ ತುದಿಯಲ್ಲಿದ್ದರು. ಈ ಸಲ ತನ್ನ ಸಾಧನೆಗೆ ಪುರಾವೆಯಾಗಿ ಬಹಳಷ್ಟು ಫೋಟೊಗಳು ಮತ್ತು ವೀಡಿಯೊಗಳೊಂದಿಗೆ ಅವರು ಸಜ್ಜಾಗಿದ್ದರು.

ನೇಪಾಳ ಪ್ರವಾಸೋದ್ಯಮ ಇಲಾಖೆಯು ಬುಧವಾರ ಯಾದವಗೆ ಪ್ರಮಾಣಪತ್ರವನ್ನು ಪ್ರದಾನಿಸಿದೆ.

ಯಾವುದೇ ವಿವಾದಕ್ಕೆಡೆಯಾಗದಂತೆ ಮಾಮೂಲಾಗಿ ಓರ್ವ ಮಾರ್ಗದರ್ಶಿಯ ಬದಲು ಇಬ್ಬರು ಮಾರ್ಗದರ್ಶಿಗಳನ್ನು ಯಾದವ ಜೊತೆಯಲ್ಲಿ ಕಳುಹಿಸಲಾಗಿತ್ತು ಎಂದು ಪರ್ವತಾರೋಹಣ ಸಂಘಟಕ ಸಂಸ್ಥೆ ಪಯನಿಯರ್ ಅಡ್ವೆಂಚರ್‌ನ ಮಾರ್ಗದರ್ಶಿ ಪೆಂಬಾ ರೀಟಾ ಶೆರ್ಪಾ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X