ಬಾಂಗ್ಲಾದೇಶ: ಕಂಟೈನರ್ ಡಿಪೋದಲ್ಲಿ ಬೆಂಕಿ, 16 ಮಂದಿ ಸಾವು, 450 ಕ್ಕೂ ಹೆಚ್ಚು ಜನರಿಗೆ ಗಾಯ
Photo:PTI
ಢಾಕಾ: ಬಾಂಗ್ಲಾದೇಶದ ಚಿತ್ತಗಾಂಗ್ನ ಸೀತಾಕುಂಡ ಉಪಝಿಲಾದಲ್ಲಿರುವ ಖಾಸಗಿ ಕಂಟೈನರ್ ಡಿಪೋದಲ್ಲಿ ಶನಿವಾರ ರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮವಾಗಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಹಾಗೂ 450 ಜನರು ಗಾಯಗೊಂಡಿದ್ದಾರೆ.
ಉಪಝಿಲಾದ ಕಡಮ್ರಸುಲ್ ಪ್ರದೇಶದ ಬಿಎಂ ಕಂಟೈನರ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಪ್ರಾಥಮಿಕ ತನಿಖೆಯ ಪ್ರಕಾರ, ಕಂಟೈನರ್ ಡಿಪೋದಲ್ಲಿ ರಾಸಾಯನಿಕಗಳಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ ಎಂದು ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್) ಪೊಲೀಸ್ ಔಟ್ಪೋಸ್ಟ್ ಸಬ್-ಇನ್ಸ್ಪೆಕ್ಟರ್ (ಎಸ್ಐ), ನೂರುಲ್ ಆಲಂ ಅವರು ಹೇಳಿದ್ದಾರೆ.
ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಮುನ್ನವೇ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಬೆಂಕಿ ಮತ್ತಷ್ಟು ವ್ಯಾಪಿಸಿತು ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
Next Story