ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನಲ್ಲಿ ಡೈಮಂಡ್ ಪ್ರಿವೀವ್ ಉತ್ಸವಕ್ಕೆ ಚಾಲನೆ
![ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನಲ್ಲಿ ಡೈಮಂಡ್ ಪ್ರಿವೀವ್ ಉತ್ಸವಕ್ಕೆ ಚಾಲನೆ ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನಲ್ಲಿ ಡೈಮಂಡ್ ಪ್ರಿವೀವ್ ಉತ್ಸವಕ್ಕೆ ಚಾಲನೆ](https://www.varthabharati.in/sites/default/files/images/articles/2022/06/5/337723-1654436341.jpeg)
ಉಡುಪಿ : ನಗರದ ವಿಎಸ್ಟಿ ರಸ್ತೆಯ ವೆಸ್ಟ್ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಜೂ.8ರವರೆಗೆ ಹಮ್ಮಿಕೊಳ್ಳಲಾದ ಡೈಮಂಡ್ ಪ್ರಿವೀವ್ ಉತ್ಸವವನ್ನು ಮಾಂಡವಿ ಬಿಲ್ಡರ್ಸ್ನ ಆಡಳಿತ ನಿರ್ದೇಶಕ ಜೆರ್ರಿ ವಿನ್ಸೆಂಟ್ ಡಯಸ್ ರವಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜೆರಿ ವಿನ್ಸೆಂಟ್ ಡಯಸ್, ಸುಲ್ತಾನ್ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಚಿನ್ನಾಭರಣಗಳನ್ನು ಒದಗಿಸುತ್ತಿದೆ. ಆ ಮೂಲಕ ಸಂಸ್ಥೆ ಹೆಸರುವಾಸಿಯಾಗಿದೆ. ಆದುದರಿಂದ ಈ ಸಂಸ್ಥೆಯೊಂದಿಗೆ ಕೈ ಜೋಡಿಸಿ ಎಲ್ಲರು ಸಹಕಾರ ನೀಡಬೇಕು. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಡೈಮಂಡ್ ಆಭರಣಗಳಾದ ಯು.ಎಸ್. ಸಂಗ್ರಹವನ್ನು ಉಡುಪಿ ಮಣಿಪಾಲ ಇನ್ ಹೊಟೇಲಿನ ಆಡಳಿತ ನಿರ್ದೇಶಕ ಮೌಲಾನ ಇಬ್ರಾಹಿಂ ಗೋವಾ, ತುರ್ಕಿಸ್ ಸಂಗ್ರಹವನ್ನು ಮೋಲಿ ಡಯಸ್, ಇಟಲಿ ಸಂಗ್ರಹವನ್ನು ಗ್ರಾಹಕಿ ಡಾ.ನೇಹಾ ಶಿರ್ವ, ಮಿಡ್ಲ್ ಈಸ್ಟ್ ಸಂಗ್ರಹವನ್ನು ರೂಪದರ್ಶಿ ವೈಭವಿ ಭಂಡಾರಿ ಅನಾವರಣಗೊಳಿಸಿದರು.
ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ವಂದಿಸಿದರು. ಆಯಿಸ್ಲೆ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಲ್ತಾನ್ ಗೋಲ್ಡ್ ವಾಚ್ ವಿಭಾಗದ ಮುಖ್ಯಸ್ಥ ಅಬ್ದುಲ್ ರಶೀದ್ ಮುಲ್ಕಿ, ಸುಲ್ತಾನ್ ಗ್ರೂಪ್ನ ಉಡುಪಿ ಫ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಅಸಿಸ್ಟೆಂಟ್ ಸೇಲ್ ಮೆನೇಜರ್ಗಳಾದ ಮುಹಮ್ಮದ್ ಶಾಮೀಲ್ ಖಾದರ್, ನಝೀರ್ ಅಡ್ಡೂರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಈ ಉತ್ಸವದಲ್ಲಿ ಕ್ಯಾರೆಟ್ ಮೇಲೆ ೭೦೦೦ರೂ. ರಿಯಾಯಿತಿ ನೀಡಲಾಗು ವುದು. ಇದರಲ್ಲಿ ಮೆಟ್ರೋ ಟ್ರೆಂಡ್, ಸೋಲಿಟರಿ, ಸೆಲೆಬ್ರಿಟಿ, ಬ್ರೈಡಲ್, ಲೆಗಸಿ ಪೊಲ್ಕಿ ಡೈಮಂಡ್ಸ್, ಟ್ರೇಡಿಶನಲ್, ತನ್ಮನಿಯಾ, ವ್ಯಾಲೆಂಟೈನ್ಸ್ ಸಂಗ್ರಹ ಮತ್ತು ಲೈಟ್ವೆಯಿಟ್ ಡೈಲಿ ವೇರ್, ಆಫೀಸ್ ವೇರ್ ಹಾಗೂ ಕಾಲೇಜು ವೇರ್ ಸಂಗ್ರಹಗಳಿವೆ ಎಂದು ಮುಹಮ್ಮದ್ ಅಜ್ಮಲ್ ತಿಳಿಸಿದ್ದಾರೆ.