ದಲಿತ ನಾಯಕ ‘ಸಂವಿಧಾನ ಶಿಲ್ಪಿ' ಆದರೆಂಬ ಅಸಹನೆಯೇ?: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು, ಜೂ. 5: ‘ಮರುಪರಿಷ್ಕರಣೆ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನೀಡಿರುವ ‘ಸಂವಿಧಾನ ಶಿಲ್ಪಿ' ಎಂಬ ಬಿರುದನ್ನು ಪಠ್ಯದಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ರವಿವಾರ ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದಲಿತೋದ್ಧಾರಕರ ರೀತಿ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಗರ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಸಮಾನತೆಗಾಗಿ ಹಗಲಿರುಳು ದುಡಿದು ಈ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ನೀಡಿದ ಬಾಬಾಸಾಹೇಬರನ್ನು ‘ಸಂವಿಧಾನ ಶಿಲ್ಪಿ' ಎನ್ನಲು ಅಂಜಿಕೆ ಅಳುಕು ಇವರಿಗೆ' ಎಂದು ವಾಗ್ದಾಳಿ ನಡೆಸಿದೆ.
ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯ ಹಾಗೂ ಇದೀಗ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮರು ಪರಿಷ್ಕರಣೆ ಮಾಡಿರುವ ಪಠ್ಯವನ್ನು ಟ್ವಿಟ್ಟರ್‍ನಲ್ಲಿ ಒಟ್ಟಿಗೆ ಪ್ರಕಟಿಸಿರುವ ಕಾಂಗ್ರೆಸ್, ‘ದಲಿತ ನಾಯಕ ಸಂವಿಧಾನ ಶಿಲ್ಪಿ ಆದರೆಂಬ ಅಸಹನೆಯೇ ಈ ಬಿಜೆಪಿಯವರಿಗೆ?' ಎಂದು ಖಾರವಾಗಿ ಪ್ರಶ್ನಿಸಿದೆ.
ದಲಿತೋದ್ಧಾರಕರ ರೀತಿ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಗರ ಅಸಲಿ ಮುಖವಾಡ ಕಳಚಿ ಬಿದ್ದಿದೆ.
— Karnataka Congress (@INCKarnataka) June 4, 2022
ಸಮಾನತೆಗಾಗಿ ಹಗಲಿರುಳು ದುಡಿದು ಈ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ನೀಡಿದ ಬಾಬಾಸಾಹೇಬರನ್ನು ಸಂವಿಧಾನಶಿಲ್ಪಿ ಎನ್ನಲು ಅಂಜಿಕೆ ಅಳುಕು ಇವರಿಗೆ.
ದಲಿತ ನಾಯಕ ಸಂವಿಧಾನ ಶಿಲ್ಪಿ ಆದರೆಂಬ ಅಸಹನೆಯೇ ಈ ಬಿಜೆಪಿಯವರಿಗೆ? #ದಲಿತವಿರೋಧಿಬಿಜೆಪಿ pic.twitter.com/2Mkk0R7s0e







