ಉತ್ತರಾಖಂಡ: ಬಸ್ ಕಣಿವೆಗೆ ಉರುಳಿ 25 ಮಂದಿ ಸಾವು

ಹೊಸದಿಲ್ಲಿ, ಜೂ. 5: ಯಾತ್ರಿಗಳ ಬಸ್ಸೊಂದು ಉತ್ತರಾಖಂಡದ ದಮ್ಟಾ ಬಳಿ ರವಿವಾರ ಕಣಿವೆಗೆ ಉರುಳಿ ಬಿದ್ದ ಪರಿಣಾಮ 22 ಮಂದಿ ಸಾವನ್ನಪ್ಪಿದ್ದಾರೆ. ಯಮುನೋತ್ರಿ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ ದಮ್ಟಾದಲ್ಲಿ ಯಮುನೋತ್ರಿಯ ರಾಷ್ಟ್ರೀಯ ಹೆದ್ದಾರಿಯ ಬಳಿ ಕಣಿವೆಗೆ ಉರುಳಿ ಬಿತ್ತು. ಇದರ ಪರಿಣಾಮ 22 ಮಂದಿ ಸಾವನ್ನಪ್ಪಿದ್ದಾರೆ. ಈ ಬಸ್ ಮಧ್ಯಪ್ರದೇಶದ ಯಾತ್ರಿಗಳನ್ನು ಯಮುನೋತ್ರಿಗೆ ಕರೆದೊಯ್ಯುತ್ತಿತ್ತು. ಮೃತಪಟ್ಟವರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
Next Story





