ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜೊತೆಗಿನ ಭೋಜನಕೂಟ ರದ್ದುಪಡಿಸಿದ ಕತರ್ ಉಪ ಆಡಳಿತಾಧಿಕಾರಿ
ದೋಹಾ: ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕತರ್ ಪ್ರವಾಸದಲ್ಲಿದ್ದು, ಇಂದು ಮಧ್ಯಾಹ್ನ ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ, ಕತರ್ ಉಪ ಆಡಳಿತಾಧಿಕಾರಿ ಜೊತೆಗಿನ ಭೋಜನಕೂಟವನ್ನು ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
"ಕೋವಿಡ್ ಹರಡುವ ಭೀತಿ" ಇರುವ ಕಾರಣ ಭೋಜನ ಕೂಟವನ್ನು ರದ್ದುಪಡಿಸಲಾಗಿದೆ ಎಂದು ವೆಂಕಯ್ಯನಾಯ್ಡುರವರು ದೋಹಾಗೆ ಆಗಮಿಸುವ ಮೊದಲೇ ಅವರಿಗೆ ತಿಳಿಸಲಾಗಿದೆ ಎಂದು ಕತರ್ ನ ಅಧಿಕಾರಿಗಳು ಹೇಳಿದ್ದಾಗಿ ಮೂಲಗಳು ಮಾಹಿತಿ ನೀಡಿವೆ ಎಂದು thehindu ಸಂಪಾದಕಿ ಸುಹಾಸಿನಿ ಹೈದರ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಬಿಜೆಪಿ ನಾಯಕರಿಂದ ಪ್ರವಾದಿ ನಿಂದನೆ ಪ್ರಕರಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಕತರ್, ಕುವೈಟ್ ಮತ್ತು ಇರಾನ್ ಆಡಳಿತವು ರಾಯಭಾರಿ ಕಚೇರಿಗೆ ಸಮನ್ಸ್ ನೀಡಿರುವ ಸುದ್ದಿಗಳ ಬೆನ್ನಲ್ಲೇ ಈ ಬೆಳವಣಿಗೆ ವ್ಯಾಪಕ ಚರ್ಚೆಗೊಳಗಾಗಿದೆ.
Sources: Dinner to be hosted by Deputy Emir of Qatar for Vice President Venkaiah Naidu was cancelled. Decision was conveyed prior to Mr. Naidu's arrival in Doha, after Qatari officials said thr Dy Emir had suspected exposure to someone who tested Covid positive.
— Suhasini Haidar (@suhasinih) June 5, 2022