Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪಠ್ಯ ಪರಿಷ್ಕರಣಾ ಸಮಿತಿ...

ಪಠ್ಯ ಪರಿಷ್ಕರಣಾ ಸಮಿತಿ ವಿಸರ್ಜಿಸಿರುವುದನ್ನು ಶುಚಿಗೊಳಿಸುವ ಹೊಣೆ ಯಾರದ್ದು?

ವಾರ್ತಾಭಾರತಿವಾರ್ತಾಭಾರತಿ6 Jun 2022 12:05 AM IST
share
ಪಠ್ಯ ಪರಿಷ್ಕರಣಾ ಸಮಿತಿ ವಿಸರ್ಜಿಸಿರುವುದನ್ನು ಶುಚಿಗೊಳಿಸುವ ಹೊಣೆ ಯಾರದ್ದು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಿಧಾನಸೌಧ ಆವರಣಕ್ಕೆ ಬೆಳ್ಳಂಬೆಳಗೆ ನುಗ್ಗಿದ ದುಷ್ಕರ್ಮಿಯೊಬ್ಬ 'ಬೆಳಗಿನ ವಿಸರ್ಜನೆ ಅಥವಾ ಶೌಚಕರ್ಮಕ್ಕೆ' ತೊಡಗುತ್ತಾನೆ ಎಂದಿಟ್ಟುಕೊಳ್ಳಿ. ಸುತ್ತಲಿನ ಪರಿಸರದ ಜನರೆಲ್ಲ ಮೂಗು ಮುಚ್ಚಿಕೊಂಡು ಅದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದಾಗ ಮುಖ್ಯಮಂತ್ರಿಗೆ ಎಚ್ಚರಿಕೆಯಾಗುತ್ತದೆ. ಬಂದವರೇ, ಕುಳಿತು ವಿಸರ್ಜಿಸುತ್ತಿದ್ದವನನ್ನು ''ನೀವಿನ್ನು ತೆರಳಬಹುದು' ಎಂದು ಘನ ಮರ್ಯಾದೆಯಿಂದ ಕಳುಹಿಸಿಕೊಡುತ್ತಾರೆ. ಆದರೆ ಆತ ವಿಸರ್ಜಿಸಿ ಹೋದ ಕಲ್ಮಶಗಳು ಅಲ್ಲೇ ಇದ್ದು ದುರ್ವಾಸನೆ ಬೀರುತ್ತಿರುತ್ತವೆ. ಮುಖ್ಯಮಂತ್ರಿಯವರು 'ತನ್ನ ಕರ್ತವ್ಯ ಮುಗಿಯಿತು' ಎಂದು ಆತ ಮಾಡಿರುವ ಮಾಲಿನ್ಯವನ್ನು ಕಂಡೂ ಕಾಣದಂತೆ ವರ್ತಿಸಿ ಅದರ ಜೊತೆಗೇ ಸದನ ಕಲಾಪ ಆರಂಭಿಸುತ್ತಾರೆ. ಈಗ ಆವರಣದಲ್ಲಿ ದುರ್ವಾಸನೆ ಬೀರುತ್ತಿರುವ ಮಾಲಿನ್ಯವನ್ನು ಶುಚಿಗೊಳಿಸುವ ಹೊಣೆ ಯಾರದ್ದು ಎನ್ನುವ ಪ್ರಶ್ನೆ ಏಳುತ್ತದೆ. ಆದರೆ ಅದಕ್ಕೆ ಮುಖ್ಯಮಂತ್ರಿ ಯಾವ ರೀತಿಯಲ್ಲೂ ಸ್ಪಂದಿಸುವುದಿಲ್ಲ. ಆ ವಿಸರ್ಜನೆಯನ್ನು ಅವರು ಪ್ರಸಾದವೆಂಬಂತೆ ಸ್ವೀಕರಿಸಿದ್ದಾರೆ ಎಂದು ಜನರು ಭಾವಿಸಬೇಕಾಗುತ್ತದೆ. ಅಥವಾ ಅವರ ಮೂಗು ಸ್ಪಂದಿಸುವ ಗುಣವನ್ನೇ ಕಳೆದುಕೊಂಡಿರಬೇಕು.

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯೊಂದನ್ನು ರಚಿಸಿ, ಪಠ್ಯ ಮತ್ತು ಶಿಕ್ಷಣದ ಕುರಿತಂತೆ ಪ್ರಾಥಮಿಕ ಜ್ಞಾನವೂ ಇಲ್ಲದಾತನನ್ನು ಅದಕ್ಕೆ ಮುಖ್ಯಸ್ಥನನ್ನಾಗಿ ನೇಮಿಸಿ ಅನಗತ್ಯ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡ ಸರಕಾರ ಇದೀಗ ಆ 'ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ'ಯನ್ನು ವಿಸರ್ಜಿಸಿದೆ. ಜೊತೆಗೆ ಪರಿಷ್ಕರಣೆಗೆ ಒಳಪಟ್ಟ ಬಸವಣ್ಣರ ಪಾಠದಲ್ಲಿ ಸಣ್ಣ ಪುಟ್ಟ ಇನ್ನೊಂದು ಪರಿಷ್ಕರಣೆಗೆ ಸಿದ್ಧ ಎಂದು ಸ್ಪಷ್ಟ ಪಡಿಸಿದೆ. ಹಾಗೆಯೇ, ಹೆಡಗೆವಾರ್ ಪಾಠ ಇದರಲ್ಲಿರಲಿದೆ ಎಂದೂ ಹೇಳಿಕೆಯನ್ನೂ ಅವರು ನೀಡಿದ್ದಾರೆ. ಒಟ್ಟಿನಲ್ಲಿ, ಸಮಿತಿಯನ್ನು ವಿಸರ್ಜಿಸಿದರೂ, ಸಮಿತಿಯ ಅಧ್ಯಕ್ಷ ಪಠ್ಯ ಪುಸ್ತಕದೊಳಗೆ ಮಾಡಿರುವ ವಿಸರ್ಜನೆಯನ್ನು ಮಾತ್ರ ವಿಸರ್ಜಿಸಲು ಸಿದ್ಧವಿಲ್ಲ ಎಂದು ಸರಕಾರ ಪರೋಕ್ಷವಾಗಿ ತಿಳಿಸಿದೆ. ಅಂದರೆ ಆ ವಿಸರ್ಜನೆಯನ್ನೇ ಪ್ರಸಾದವೆಂಬಂತೆ ಸ್ವೀಕರಿಸಿರುವ ಸರಕಾರ, ಅವುಗಳನ್ನು ಈ ನಾಡಿನ ವಿದ್ಯಾರ್ಥಿಗಳಿಗೆ ಹಂಚುವುದಕ್ಕೆ ಹೊರಟಿದೆ. ಇದನ್ನು ತಡೆಯದೇ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಈ ಪಠ್ಯವನ್ನು ಓದಿ ಮಾನಸಿಕ ಆರೋಗ್ಯವನ್ನು ಕೆಡಿಸಿಕೊಳ್ಳಲಿದ್ದಾರೆ. ಈಗಾಗಲೇ ನಾಡಿನ ಜನತೆ ಒಂದಾಗಿ, ಸಮಿತಿಯನ್ನು ವಿಸರ್ಜಿಸುವುದರ ಜೊತೆಗೆ, ಪಠ್ಯದಲ್ಲಿ ಸಮಿತಿಯು ವಿಸರ್ಜಿಸಿ ಹೋಗಿರುವ ಮಾಲಿನ್ಯವನ್ನು ಶುಚಿಗೊಳಿಸಿ, ಹಳೆಯ ಪಠ್ಯವನ್ನೇ ಮುಂದುವರಿಸುವುದಕ್ಕೆ ಒತ್ತಾಯಿಸುತ್ತಿದ್ದಾರೆ. ಸರಕಾರ ಈ ಬಗ್ಗೆ ಇನ್ನೂ ಸ್ಪಷ್ಟ ನಿಲುವೊಂದಕ್ಕೆ ಬಂದಿಲ್ಲ.

ಮುಖ್ಯವಾಗಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರ ಆಯ್ಕೆಯಲ್ಲಿ ಶಿಕ್ಷಣ ಸಚಿವರನ್ನು ಯಾರೋ ದಾರಿ ತಪ್ಪಿಸಿದ್ದಾರೆ. ಈತನನ್ನು 'ಐಐಟಿ ಪ್ರೊಫೆಸರ್' ಎಂದು ನಂಬಿಸಿ ಆ ಸ್ಥಾನಕ್ಕೆ ತಂದುಕೂರಿಸಿದ್ದಾರೆ. ಪರಿಷ್ಕರಣೆಯ ಹೆಸರಲ್ಲಿ ಪಠ್ಯದೊಳಗೆ ಸುಳ್ಳುಗಳು ಮತ್ತು ತಪ್ಪುಗಳು ತುಂಬಿ ತುಳುಕುತ್ತಿದ್ದಂತೆಯೇ ನಾಡಿನ ಶಿಕ್ಷಣ ತಜ್ಞರು, ಲೇಖಕರು, ಪೋಷಕರು ಇದರ ವಿರುದ್ಧ ಪ್ರತಿಭಟನೆ ನಡೆಸಿದರು. ವಿರೋಧ ಪಕ್ಷಗಳು ಸಮಿತಿಯ ಅಧ್ಯಕ್ಷನ ವಿದ್ಯಾರ್ಹತೆಯ ಬಗ್ಗೆ ಪ್ರಶ್ನಿಸಿದಾಗ ಶಿಕ್ಷಣ ಸಚಿವರು ''ಆತ ಐಐಟಿ ಪ್ರೊಫೆಸರ್'' ಎಂದು ಘಂಟಾಘೋಷವಾಗಿ ಹೇಳಿದರು. ಆದರೆ ಆತ ಯಾವ ಕಾಲೇಜಿನಲ್ಲೂ ಪ್ರೊಫೆಸರ್ ಆಗಿರಲಿಲ್ಲ. ಅದನ್ನು ಸ್ವತಃ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾನೆ. ಜೊತೆಗೆ ಈ ನಾಡಿನ ಬಾವುಟವನ್ನು, ನಾಡಗೀತೆಯನ್ನು, ಹಿರಿಯ ಕವಿಗಳು, ಲೇಖಕರನ್ನು ಅತ್ಯಂತ ಹೀನಾಯವಾಗಿ ನಿಂದಿಸಿದ ಚರಿತ್ರೆ ಆತನಿಗಿತ್ತು. ಅಂಬೇಡ್ಕರ್‌ರನ್ನು ವ್ಯಂಗ್ಯವಾಡಿದ ಹಿರಿಮೆಯೂ ಈತನಿಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಕುರಿತಂತೆ 'ಅಶ್ಲೀಲ ಸ್ಟೇಟಸ್'ಗಳನ್ನು ಹಂಚಿದ ಹೆಗ್ಗಳಿಯೂ ಕೂಡ. ಹೀಗೆ ಈತನ 'ಅರ್ಹತೆ' ಹೊರಬೀಳುತ್ತಿದ್ದಂತೆಯೇ ಈತ ವಿಸರ್ಜಿಸಿದ ಪಠ್ಯ ಪುಸ್ತಕಗಳ ಜೊತೆ ಜೊತೆಗೇ ಈತನನ್ನು, ಈತನ ಸಮಿತಿಯನ್ನು ವಿಸರ್ಜಿಸುವುದು ಶಿಕ್ಷಣ ಸಚಿವರ ಹೊಣೆಗಾರಿಕೆಯಾಗಿತ್ತು. ಆದರೆ ಸಮಿತಿಯನ್ನು ವಿಸರ್ಜಿಸಿ, ಸಮಿತಿಯು ವಿಸರ್ಜಿಸಿದ ಮಾಲಿನ್ಯವನ್ನು ಮಾತ್ರ ಮಡಿಲಲ್ಲಿ ಕಟ್ಟಿಕೊಂಡು ಓಡಾಡುತ್ತಿರುವ ಸರಕಾರ ಈ ಮೂಲಕ ಇಡೀ ಶಿಕ್ಷಣ ಕ್ಷೇತ್ರವನ್ನು ಗಬ್ಬೆಬ್ಬಿಸುವುದಕ್ಕೆ ಹೊರಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದು ಕೇವಲ ಪ್ರಾಥಮಿಕ ಅಥವಾ ಪ್ರೌಢ ಶಾಲಾ ಶಿಕ್ಷಣದ ವಿದ್ಯಾರ್ಥಿಗಳ ಸಮಸ್ಯೆ ಅಷ್ಟೇ ಅಲ್ಲ. ಈತ ಯಾವುದೇ ಇತಿಹಾಸ ಮತ್ತು ವಿಜ್ಞಾನದ ಸಂಶೋಧನೆಗಳು ಅಧಿಕೃತವಾಗಿ ಮಾನ್ಯ ಮಾಡದ ಹಲವು ವಿಷಯಗಳನ್ನು ಇಲ್ಲಿ ತುರುಕಿದ್ದಾನೆ. ಉದಾಹರಣೆಗೆ ಸಿಂಧೂ ಕಣಿವೆ ನಾಗರಿಕತೆಯನ್ನು 'ಸರಸ್ವತಿ- ಸಿಂಧೂ ಕಣಿವೆ ನಾಗರಿಕತೆ' ಎಂದು ಈತ ಪಠ್ಯದಲ್ಲಿ ಕರೆಯುತ್ತಾನೆ. ವೈದಿಕ ಸಂಸ್ಕೃತಿಗಿಂತಲೂ ಪುರಾತನವಾದ ಹರಪ್ಪ ಸಂಸ್ಕೃತಿಯನ್ನು ವೈದಿಕ ಸಂಸ್ಕೃತಿಗೆ ಜೋಡಿಸುತ್ತಾನೆ. ಯಾವ ಇತಿಹಾಸ ಕೃತಿಯನ್ನು ಆಧರಿಸಿ ಈ ಪರಿಷ್ಕರಣೆಯನ್ನು ಮಾಡಿದ್ದಾನೆ ಎನ್ನುವುದರ ಯಾವ ಮಾಹಿತಿಯೂ ನಮಗೆ ದೊರಕುವುದಿಲ್ಲ. ತನ್ನ ಸಂಶೋಧನೆಗೆ ಬೇಕಾದ ಆಕರಗಳು ಎಲ್ಲಿಂದ ದೊರಕಿದವು ಎನ್ನುವುದನ್ನಾದರೂ ಈತ ನಾಡಿನ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ.ಯಾವುದೇ ಅಧಿಕೃತ ಇತಿಹಾಸ ಕೃತಿಗಳು ಮಾನ್ಯ ಮಾಡದ, ಕೇವಲ ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯದಲ್ಲಿ ಚಾಲ್ತಿಯಲ್ಲಿರುವ ಮಾಹಿತಿಯನ್ನು 'ಪಠ್ಯ ಪುಸ್ತಕ'ದೊಳಗೆ ತುರುಕಿದರೆ, ವಿದ್ಯಾರ್ಥಿಗಳ ಸ್ಥಿತಿಯೇನಾಗಬೇಕು?. ನಾಳೆ ಕಾಲೇಜು ತಲುಪಿದಾಗ, ತಾವು ಪ್ರಾಥಮಿಕ ಶಾಲೆಯಲ್ಲಿ ಕಲಿತಿರುವುದನ್ನು ಸ್ಮರಿಸಿಕೊಂಡು, ಅದನ್ನು ಪುನರುಲ್ಲೇಖಿಸಿದರೆ ಅವರು ನಗೆಪಾಟಲಿಗೀಡಾಗಬೇಕಾಗುತ್ತದೆ ಮತ್ತು ಬಸವಣ್ಣ, ಗುರುನಾನಕ್ ಮೊದಲಾದವರ ಕುರಿತಂತೆ 'ಬ್ರಾಹ್ಮಣರ ದೃಷ್ಟಿಕೋನ'ವನ್ನೇ ಪಠ್ಯದೊಳಗೆ ತುರುಕಿ ಇದೀಗ 'ಬ್ರಾಹ್ಮಣರನ್ನು ಗುರಿ ಮಾಡಲಾಗುತ್ತಿದೆ' ಎಂದು ಮಾಧ್ಯಮಗಳಲ್ಲಿ ಈತ ಅಲವತ್ತುಕೊಳ್ಳುತ್ತಿದ್ದಾನೆ. ಬಸವಣ್ಣನ ಬಗ್ಗೆ ಲಿಂಗಾಯತ ಧರ್ಮೀಯರೊಂದಿಗೆ ಚರ್ಚಿಸಿ, ಲಿಂಗಾಯತ ಧರ್ಮದ ಬಗ್ಗೆ ಬಂದಿರುವ ಅಪಾರ ಶೋಧನೆಗಳನ್ನು ಅಧ್ಯಯನ ಮಾಡಿ ಬಳಿಕ ಅವುಗಳನ್ನು ಪಠ್ಯದೊಳಗೆ ಸೇರಿಸಬೇಕು. ಆದರೆ ಈತ ಬಸವಣ್ಣನಿಗೆ ಜನಿವಾರ ತೊಡಿಸಿ ಆತನನ್ನು ಶೈವ ಪಂಥವನ್ನು ಅಭಿವೃದ್ಧಿ ಪಡಿಸಿದವನು ಎಂಬರ್ಥ ಬರುವಂತೆ ಪಠ್ಯದಲ್ಲಿ ಸೇರಿಸಿದ್ದಾನೆ.

ಇದೇ ಸಂದರ್ಭದಲ್ಲಿ ಸಿಖ್ ಧರ್ಮವನ್ನು ಸ್ಥಾಪಿಸಿದ ಗುರುನಾನಕರ ಕುರಿತಂತೆಯೂ ಇಂತಹದೇ ತಪ್ಪು ಮಾಹಿತಿಗಳನ್ನು ಆತ ಹರಡಿದ್ದಾನೆ. ಇಲ್ಲಿ ಆತ ತುರುಕಿರುವುದು ಸುಳ್ಳುಗಳನ್ನು ಅಲ್ಲ. ತನ್ನ ಬ್ರಾಹ್ಮಣ ಸಮುದಾಯದ ದೃಷ್ಟಿಕೋನವನ್ನು ಆತ ತುರುಕಿದ್ದಾನೆ. ಬರೇ ಧರ್ಮಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗಷ್ಟೇ ಇಲ್ಲಿ ಅನ್ಯಾಯವಾಗಿಲ್ಲ, ಬ್ರಾಹ್ಮಣೇತರ ಮಹಾನ್ ಸಾಹಿತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಈತ ವ್ಯಂಗ್ಯವಾಡಿದ್ದಾನೆ. ಇದರ ಜೊತೆ ಜೊತೆಗೆ ತಪ್ಪುಗಳಂತೂ ನೂರಾರಿವೆ. ಮೂರನೇ ಮತ್ತು ನಾಲ್ಕನೇ ತರಗತಿಗೆ ಒಂದೇ ಪದ್ಯವನ್ನು ಅಳವಡಿಸಿದ ಮೂರ್ಖ ಈತ. 'ತಾನು ಮೂರ್ಖ' ಎನ್ನುವುದನ್ನು ಈತ ಈಗಾಗಲೇ ಮಾಧ್ಯಮಗಳ ಮೂಲಕ ಒಪ್ಪಿಕೊಂಡಿದ್ದಾನೆ. ಇಷ್ಟಾದರೂ ಈ ಮೂರ್ಖನ 'ವಿಸರ್ಜನೆ'ಯನ್ನು ಶುಚಿಗೊಳಿಸಿ, ವಿದ್ಯಾರ್ಥಿಗಳನ್ನು ಮಾಲಿನ್ಯದಿಂದ ರಕ್ಷಿಸುವುದಕ್ಕೆ ಸರಕಾರ ಮುಂದಾಗಿಲ್ಲ. ಧಾರ್ಮಿಕ ಮೂಲಭೂತವಾದಿ ಹೆಡಗೆವಾರ್ ಬರೆದಿರುವ ಲೇಖನ ಸಹ್ಯವಾದರೆ ಮುಂದಿನ ದಿನಗಳಲ್ಲಿ ಪಂಜಾಬ್ ಸರಕಾರ 'ಭಿಂದ್ರನ್ ವಾಲೆ'ಯನ್ನು ಸೇರಿಸುತ್ತದೆ. ಕಾಶ್ಮೀರದ ಸರಕಾರ 'ಅಫ್ಝಲ್ ಗುರು' ಬರೆದ ಲೇಖನವನ್ನು ಸೇರಿಸಿದರೆ ಅದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಜೊತೆಗೆ ಮುಂದೊಂದು ದಿನ 'ನಾನು ಗಾಂಧಿಯನ್ನು ಯಾಕೆ ಕೊಂದೆ' ಎಂಬ ಗೋಡ್ಸೆಯ ಪಾಠವೂ ಪಠ್ಯದೊಳಗೆ ಸೇರಬಹುದು. ಆದುದರಿಂದ, ತಕ್ಷಣ ನಮ್ಮ ಶಿಕ್ಷಣ ಕ್ಷೇತ್ರವನ್ನು ಧಾರ್ಮಿಕ ಹಾಗೂ ರಾಜಕೀಯ ಉಗ್ರವಾದಿಗಳ ಮಾಲಿನ್ಯಗಳಿಂದ ಶುಚಿಗೊಳಿಸಿ, ವಿದ್ಯಾರ್ಥಿಗಳನ್ನು ರಕ್ಷಿಸಬೇಕಾಗಿದೆ. ಬ್ರಾಹ್ಮಣ್ಯದ ದೃಷ್ಟಿಕೋನದಲ್ಲಿ ಪರಿಷ್ಕರಿಸಲ್ಪಟ್ಟ ಪಠ್ಯಗಳನ್ನು ಮತ್ತೆ ಸಂವಿಧಾನದ ದೃಷ್ಟಿಕೋನವನ್ನಿಟ್ಟು ಸರಿಪಡಿಸಿ ವಿದ್ಯಾರ್ಥಿಗಳಿಗೆ ಒದಗಿಸಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X