ಮಲ್ಪೆ ಬೀಚ್ | ಸಮುದ್ರದಲ್ಲಿ ಮುಳುಗುತ್ತಿದ್ದ ಆರು ಪ್ರವಾಸಿಗರ ರಕ್ಷಣೆ

ಉಡುಪಿ, ಜೂ.6: ಮಲ್ಪೆ ಬೀಚ್ ಸಮುದ್ರದಲ್ಲಿ ಮುಳುಗುತ್ತಿದ್ದ ಆರು ಮಂದಿ ಪ್ರವಾಸಿಗರನ್ನು ಜೀವರಕ್ಷಕ ದಳದವರು ರಕ್ಷಿಸಿರುವ ಬಗ್ಗೆ ವರದಿಯಾಗಿದೆ
ರವಿವಾರ ಉತ್ತರಾಖಂಡ್ ಉತ್ತರ ಕರ್ನಾಟಕ ಮೂಲದ ಇಬ್ಬರು ಹಾಗೂ ಸೋಮವಾರ ಬೆಳಗ್ಗೆ ವಿಜಯಪುರದ ನಾಲ್ವರು ಪ್ರವಾಸಿಗರನ್ನು ರಕ್ಷಿಸಲಾಗಿದೆ.
ಪ್ರವಾಸಕ್ಕೆ ಬಂದಿದ್ದ ಇವರು ಸಮುದ್ರದ ನೀರಿನಲ್ಲಿ ಆಡುತ್ತಿದ್ದಾಗ ಅಬ್ಬರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಕೂಡಲೇ ಜೀವರಕ್ಷಕ ದಳದವರು ಅವರನ್ನು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ. ಈ ಪೈಕಿ ಇಬ್ಬರು ಅಸ್ವಸ್ಥಗೊಂಡಿದ್ದರು ಎಂದು ತಿಳಿದುಬಂದಿದೆ
ಸದ್ಯ ಮಲ್ಪೆ ಬೀಚ್ ನಲ್ಲಿ ಸಮುದ್ರಕ್ಕೆ ಇಳಿಯುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದರೂ ಇದನ್ನು ಲೆಕ್ಕಿಸದೇ ಪ್ರವಾಸಿಗರು ನೀರಿಗೆ ಇಳಿಯುವುದು ಕಂಡುಬಂದಿದೆ. ಆದುದರಿಂದ ಇಂದಿನಿಂದ ಪ್ರವಾಸಿಗರು ಬೀಚ್ ಗೆ ಇಳಿಯದಂತೆ ತಡೆಬೇಲಿ ಹಾಕಲಾಗುವುದು ಎಂದು ಬೀಚ್ ಉಸ್ತುವಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
Next Story