ಬೆಳ್ತಂಗಡಿ | ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ; ಟಿ.ಎಚ್.ಓ, ವೈದ್ಯರಿಗೆ ತರಾಟೆ

ಬೆಳ್ತಂಗಡಿ, ಜೂ.6: ಬೆಳ್ತಂಗಡಿಯ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಇಂದು ಬೆಳಗ್ಗೆ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಲೋಕಾಯುಕ್ತಕ್ಕೆ ಸಾರ್ವಜನಿಕರ ದೂರು ಬಂದಿರುವ ಹಿನ್ನಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ನಂತರ ಟಿ.ಎಚ್.ಓ. ಕಲಾಮಧು ಮತ್ತು ಕರ್ತವ್ಯ ನಿರತ ವೈದ್ಯರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೈದ್ಯರು ಕರ್ತವ್ಯ ಹಾಜರಾಗುತ್ತಿಲ್ಲ ಎಂಬ ಹಲವು ದೂರುಗಳು ಲೋಕಾಯಕ್ತ ಕಚೇರಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಲೋಕಾಯಕ್ತ ಎಸ್ಪಿ ಕುಮಾರಸ್ವಾಮಿ , ಡಿವೈಎಸ್ಪಿ ಕಲಾವತಿ , ಡಿವೈಎಸ್ಪಿ ಚೇಲುವರಾಜ್ , ಇನ್ ಸ್ಪೆಕ್ಟರ್ ಅಮಾನುಲ್ಲಾ, ಸಿಬ್ಬಂದಿ ಗಾಯತ್ರಿ, ಚಾಲಕರಾದ ನವೀನ್, ದೊಡ್ಡಣ್ಣ, ಮಹೇಶ್ ಇದ್ದರು.
Next Story