ಕಾರ್ಕಳ | ಪಡುಗಿರಿ ರಸ್ತೆಗೆ ಗೋಡ್ಸೆ ನಾಮಫಲಕ ಅಳವಡಿಕೆ: ಪ್ರಕರಣ ದಾಖಲು

ಕಾರ್ಕಳ : ಬೋಳ ಗ್ರಾಪಂ ವ್ಯಾಪ್ತಿಯ ಪಡುಗಿರಿ ಪಂಚಾಯತ್ ರಸ್ತೆಗೆ ಆಳವಡಿಸಲಾಗಿದ್ದ ವಿವಾದಾತ್ಮಕ ನಾಥೂರಾಮ್ ಗೋಡ್ಸೆ ನಾಮಫಲಕಕ್ಕೆ ಸಂಬಂಧಿಸಿ ಗ್ರಾಪಂ ಪಿಡಿಓ ರಾಜೇಂದ್ರ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾದಾತ್ಮಕ ನಾಮಫಲಕ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಿಡಿಓ ಹಾಗೂ ಪೊಲೀಸರು ನಾಮಫಲಕ ವನ್ನು ತೆರವುಗೊಳಿಸಿದ್ದರು.
ಈ ನಾಮಫಲಕವನ್ನು ಅಳವಡಿಸಿರುವ ಕಿಡಿಗೇಡಿ ಗಳನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.
Next Story