ಮಂಗಳೂರು: ಹಸಿರು ಭಾರತಕ್ಕಾಗಿ ವಿಮಾನ ನಿಲ್ದಾಣದಲ್ಲಿ ವಿಶೇಷ ಕಾರ್ಯಕ್ರಮ

ಮಂಗಳೂರು: ವಿಶ್ವ ಪರಿಸರ ದಿನದಂದು, ಭಾರತದಲ್ಲಿ ಏಳು ಪ್ರಮುಖ ವಿಮಾನ ನಿಲ್ದಾಣಗಳು ಹಸಿರು ಪರಿಸರ ನಿರ್ಮಾಣಕ್ಕಾಗಿ ಜನರನ್ನು ಪ್ರೇರೇಪಿಸಲು ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದೆ.
ಮಂಗಳೂರು, ಮುಂಬೈ, ಅಹ್ಮದಾಬಾದ್, ತಿರುವನಂತಪುರಂ, ಲಕ್ನೋ, ಜೈಪುರ ಮತ್ತು ಗುವಾಹಟಿಗೆ ಪ್ರಯಾಣಿಸುವ ಪ್ರಯಾಣಿಕರ ಸರಕು, ಸಾಮಗ್ರಿಗಳಿಗೆ ಸಾಮಾನ್ಯ ಕಾಗದದ ಟ್ಯಾಗ್‌ಗಳನ್ನು ವಿತರಿಸಲಾಗುತ್ತಿತ್ತು. ವಿಶ್ವ ಪರಿಸರ ದಿನದಂದು ಇಂತಹ ಟ್ಯಾಗ್ ಗಳ ಬದಲು ಸಸ್ಯಗಳ ಬೀಜಗಳಿಂದ ತುಂಬಿರುವ ಟ್ಯಾಗ್ ಗಳನ್ನು ಈ ಏಳು ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಕರಿಗೆ ವಿತರಿಸುವ ವಿಶೇಷ ಕಾರ್ಯಕ್ರಮ ನಡೆಸಿದೆ.