ಪ್ರವಾದಿ ನಿಂದನೆಗೆ ಜಂಇಯ್ಯತುಲ್ ಖುತ್ಬಾ ಖಂಡನೆ
ಮಂಗಳೂರು : ದೇಶವನ್ನು ಆಡಳಿತ ನಡೆಸುವ ಪಕ್ಷದ ಅಧಿಕೃತ ವಕ್ತಾರರೊಬ್ಬರು ಜಗತ್ತಿನ ಕೋಟ್ಯಂತರ ಜನರಿಂದ ಗೌರವಿಸಲ್ಪಡುವ ಪ್ರವಾದಿಯವರನ್ನು ಅವಹೇಳನ ಮಾಡುವ ಮೂಲಕ ದೇಶದ ಮಾನವನ್ನು ಕೆಡಿಸಿದ ಕೃತ್ಯ ಖಂಡನೀಯ ಎಂದು ದ.ಕ ಜಿಲ್ಲಾ ಜಂಇಯ್ಯತುಲ್ ಖುತ್ಬಾ ಹೇಳಿಕೆಯಲ್ಲಿ ತಿಳಿಸಿದೆ.
ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಹರಾಜು ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ, ಕಾರ್ಯದರ್ಶಿ ರಶೀದ್ ರಹ್ಮಾನಿ ಪರ್ಲಡ್ಕ ಆಗ್ರಹಿಸಿದ್ದಾರೆ.
Next Story