Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆಧಾರ್ ಸಂಖ್ಯೆಯ ಮಾಹಿತಿಯ ಅವಾಂತರ

ಆಧಾರ್ ಸಂಖ್ಯೆಯ ಮಾಹಿತಿಯ ಅವಾಂತರ

ವಾರ್ತಾಭಾರತಿವಾರ್ತಾಭಾರತಿ7 Jun 2022 12:05 AM IST
share
ಆಧಾರ್ ಸಂಖ್ಯೆಯ ಮಾಹಿತಿಯ ಅವಾಂತರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಆಧಾರ್ ಸಂಖ್ಯೆಯನ್ನು ಹೊಂದಿರುವ ಮಾಹಿತಿಯ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಇತ್ತೀಚೆಗೆ ನೀಡಿದ ಪತ್ರಿಕಾ ಹೇಳಿಕೆ ಮತ್ತು ನಂತರ ನೀಡಿದ ಇನ್ನೊಂದು ಪತ್ರಿಕಾ ಹೇಳಿಕೆಗಳು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿವೆ. ಮೊದಲು ‘‘ಆಧಾರ್ ಸಂಖ್ಯೆಯನ್ನು ಹೊಂದಿರುವ ನಕಲು ಪ್ರತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಅದು ದುರ್ಬಳಕೆ ಆಗುವ ಸಾಧ್ಯತೆ ಇರುತ್ತದೆ’’ ಎಂದು ಹೇಳಿಕೆ ನೀಡಲಾಗಿತ್ತು. ಇದಾಗಿ ಒಂದೆರಡು ದಿನಗಳು ಕಳೆದು ಜನಸಾಮಾನ್ಯರಲ್ಲಿ ಈ ಬಗ್ಗೆ ಕಳವಳ ಉಂಟಾದ ನಂತರ ಹೇಳಿಕೆಯೊಂದನ್ನು ನೀಡಿದ ಕೇಂದ್ರ ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಯುಐಡಿಎಐ ಹಿಂದೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿರುವುದಾಗಿ ಹೇಳಿ ‘‘ಸಹಜ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಸಾಕು ಆತಂಕಪಡಬೇಕಿಲ್ಲ’’ ಎಂದು ಹೇಳಿತು. ಆಧಾರ್‌ಗೆ ಸಂಬಂಧಿಸಿದ ಈ ಎರಡು ಹೇಳಿಕೆಗಳಿಂದ ಆಧಾರ್ ಹೆಸರಿನಲ್ಲಿ ಸಂಗ್ರಹಿಸಲಾಗಿರುವ ಪ್ರಜೆಗಳ ಮಾಹಿತಿಯ ಭದ್ರತೆಯ ಬಗ್ಗೆ ಮತ್ತೆ ಆತಂಕದ ಪ್ರಶ್ನೆಗಳು ಸಹಜವಾಗಿ ಉದ್ಭವಿಸಿವೆ. ಜನರ ಮೇಲೆ ಕಣ್ಗಾವಲು ಇರಿಸಲು ಈ ಆಧಾರ್ ಸಂಖ್ಯೆಯ ಮಾಹಿತಿಯನ್ನು ಬಳಸಿಕೊಳ್ಳಬಹುದೇ? ಎಂಬ ಸಂದೇಹ ಸಹಜವಾಗಿ ಮೂಡಿದೆ. ಯುಐಡಿಎಐ ಹೇಳಿಕೆ ನೀಡುವ ಮೊದಲೇ ಲಕ್ಷಾಂತರ ಮಂದಿಯ ಆಧಾರ್ ಸಂಖ್ಯೆಯ ಮಾಹಿತಿಗಳು ಸೋರಿಕೆಯಾಗಿವೆ.

ಸರಕಾರಿ, ಖಾಸಗಿ ವಾಹನ ರಿಸರ್ವೇಶನ್, ಹೊಟೇಲ್, ಲಾಡ್ಜಿಂಗ್, ಸಿನೆಮಾ ಟಾಕೀಸ್‌ಗಳಲ್ಲಿ ಕೂಡ ಆಧಾರ್ ಸಂಖ್ಯೆ ಬಳಕೆಯಾಗಿದೆ. ಸಂಬಂಧಪಟ್ಟ ಪ್ರಾಧಿಕಾರದ ಎಚ್ಚರಿಕೆ ಬರುವ ಮೊದಲೇ ಸಾರ್ವಜನಿಕ ಕಂಪ್ಯೂಟರ್ ಮೂಲಕ ಇ-ಆಧಾರ್ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಂಡ ಸಾವಿರಾರು ಉದಾಹರಣೆಗಳಿವೆ. ಹೀಗಾಗಿ ಮೊದಲಿನ ಪ್ರಕಟನೆಯಿಂದ ಗಾಬರಿಯಾಗಿದ್ದ ಜನಸಾಮಾನ್ಯರು, ಸಂಬಂಧಿಸಿದ ಸಚಿವಾಲಯ ನೀಡಿರುವ ಎರಡನೇ ಸ್ಪಷ್ಟೀಕರಣದಿಂದ ಇನ್ನಷ್ಟು ದಿಗಿಲುಗೊಂಡಿದ್ದಾರೆ.

ಆಧಾರ್ ಸಂಖ್ಯೆಗೆ ನೀಡಿರುವ ಮಾಹಿತಿಯ ಸುರಕ್ಷತೆಯ ಬಗ್ಗೆ ಹಿಂದಿನಿಂದಲೂ ಸಾರ್ವಜನಿಕರಲ್ಲಿ ಸಂದೇಹಗಳಿವೆ. ಆದರೆ ಈ ಮಾಹಿತಿ ಸಂಪೂರ್ಣ ಸುರಕ್ಷಿತ, ಅದನ್ನು ಪ್ರಜೆಗಳ ಮೇಲೆ ಕಣ್ಗಾವಲು ಇರಿಸಲು ಇಲ್ಲವೇ ವಾಣಿಜ್ಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಲು ಅವಕಾಶವೇ ಇಲ್ಲ ಎಂದು ಸರಕಾರ ಆರಂಭದಿಂದಲೂ ಸ್ಪಷ್ಟೀಕರಣ ನೀಡುತ್ತಲೇ ಬಂದಿದೆ.ವಾಸ್ತವಾಂಶ ಹೀಗಿರುವಾಗ ಜನರಲ್ಲಿ ಆತಂಕ ಮೂಡಿಸುವ ಒಂದು ಹೇಳಿಕೆಯನ್ನು ನೀಡಿ ನಂತರ ಆತಂಕಪಡದಿರಲು ಇನ್ನೊಂದು ಸ್ಪಷ್ಟೀಕರಣ ನೀಡಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿ ಸಾರ್ವಜನಿಕರಲ್ಲಿ ಉದ್ಭವವಾಗಿದೆ.ಇದನ್ನು ನಿವಾರಿಸುವುದು ಒಂದು ಹೇಳಿಕೆಯಿಂದ ಸಾಧ್ಯವಾಗುವುದಿಲ್ಲ.

ಭಾರತದಂತಹ ಅನಕ್ಷರಸ್ಥರ ಸಂಖ್ಯೆ ಇನ್ನೂ ಸಾಕಷ್ಟಿರುವ ದೇಶದಲ್ಲಿ ಜನಸಾಮಾನ್ಯರು ಇಂತಹ ಸೂಕ್ಷ್ಮ ವಿಷಯದಲ್ಲಿ ಹೇಗೆ ಜಾಗ್ರತೆ ವಹಿಸಬೇಕು? ಸ್ವಂತ ಕಂಪ್ಯೂಟರ್ ಹೊಂದಿಲ್ಲದವರು ಆಧಾರ್ ಗುರುತಿನ ಚೀಟಿಯನ್ನು ತಮ್ಮ ಅವಶ್ಯಕತೆಗಾಗಿ ಎಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು? ಆಧಾರ್ ಸಂಖ್ಯೆಯನ್ನು ಗುರುತಿನ ಚೀಟಿಗಾಗಿ ಬಳಸಿಕೊಳ್ಳುವಂತಿಲ್ಲ. ಸರಕಾರದ ಸೌಲಭ್ಯಗಳನ್ನು ಪಡೆಯಲು ಮಾತ್ರ ಬಳಸಿಕೊಳ್ಳಬಹುದು ಎಂದು ಸರಕಾರ ಹೇಳುತ್ತಲೇ ಬಂತು. ಆದರೆ ವಾಸ್ತವವಾಗಿ ಹೊಟೇಲೊಂದರಲ್ಲಿ ಕೊಠಡಿ ಪಡೆಯಲು, ಬಸ್, ರೈಲು ರಿಸರ್ವೇಶನ್‌ಗೆ ಹಾಗೂ ಇತರ ಖಾಸಗಿ ಕಂಪೆನಿಗಳ ಕೆಲಸಕ್ಕಾಗಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಕೇಳುತ್ತಿವೆ. ಮತದಾರರ ಗುರುತಿನ ಚೀಟಿಯನ್ನು ತೋರಿಸಿದರೂ ಒಪ್ಪಿಕೊಳ್ಳುವುದಿಲ್ಲ. ಇಂತಹವುಗಳಿಂದ ದುರ್ಬಳಕೆ ಆಗುವುದಿಲ್ಲ ಎಂದು ಗ್ಯಾರಂಟಿ ಕೊಡುವವರಾರು?

ಸರಕಾರ ಏನೇ ಹೇಳಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುವ ಈ ವ್ಯವಸ್ಥೆಯಲ್ಲಿ ಆಧಾರ್ ಸಂಖ್ಯೆಯ ದುರ್ಬಳಕೆಯನ್ನು ತಡೆಯುವುದು ಅಷ್ಟು ಸುಲಭವಲ್ಲ. ಕೆಲವು ವರ್ಷಗಳ ಹಿಂದೆ 500ರೂ. ಪಾವತಿ ಮಾಡಿದರೆ ಲಕ್ಷಾಂತರ ಸಂಖ್ಯೆಯಲ್ಲಿ ಆಧಾರ್ ಸಂಖ್ಯೆ ಮತ್ತು ವೈಯಕ್ತಿಕ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ವರದಿಯಾಗಿತ್ತು. ಆಧಾರ್ ಸಂಖ್ಯೆಯೊಂದಿಗೆ ಜೋಡಿಸಿದ ಬಯೋಮೆಟ್ರಿಕ್ ವಿವರಗಳನ್ನು ನಿಷ್ಕ್ರಿಯಗೊಳಿಸಬೇಕೆಂದು ತೆಲಂಗಾಣ ಪೊಲೀಸರು ಇತ್ತೀಚೆಗೆ ಕೆಲವರಿಗೆ ಸೂಚಿಸಿದ್ದನ್ನು ಗಮನಿಸಬಹುದು. ಹೀಗಾಗಿ ಆಧಾರ್ ಸಂಖ್ಯೆಯ ಮಾಹಿತಿ ಸುರಕ್ಷಿತವಾಗಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.
ಭಾರತದ ಪ್ರಜೆಗಳ ಬೃಹತ್ ಪ್ರಮಾಣದ ಮಾಹಿತಿ ಈಗ ಸರಕಾರದ ಬಳಿ ಇದೆ. ಹೀಗಾಗಿ ಈ ಮಾಹಿತಿ ದುರುಪಯೋಗ ಆಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. ನಾಗರಿಕರ ಖಾಸಗಿತನವನ್ನು ರಕ್ಷಿಸಲು ಈ ದೇಶದಲ್ಲಿ ಯಾವುದೇ ಕಾನೂನು ಇಲ್ಲ. ಇದರಿಂದ ಸಾರ್ವಜನಿಕರ ಮಾಹಿತಿ ದುರ್ಬಳಕೆಯ ಅಪಾಯ ತಪ್ಪಿದ್ದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಪ್ರಜೆಗಳ ಮಾಹಿತಿ ದುರುಪಯೋಗ ಆಗಬಾರದು. ಇದನ್ನೇ ಬಳಸಿಕೊಂಡು ಪ್ರಭುತ್ವದ ಸೂತ್ರ ಹಿಡಿದವರು ಭಿನ್ನಮತದ ಕತ್ತು ಹಿಸುಕುವ ಅಪಾಯ ಇಲ್ಲದಿಲ್ಲ.
ಜನತಂತ್ರದ ಸಕಲ ಅಂಗಾಂಗಗಳು ದುರ್ಬಲವಾಗುತ್ತಿರುವ ಈ ದಿನಗಳಲ್ಲಿ ಆಧಾರ್ ಸಂಖ್ಯೆಯ ಮಾಹಿತಿಯ ಸುರಕ್ಷತೆ ಬಗ್ಗೆ ಪ್ರಜೆಗಳ ಆತಂಕ ಸಹಜವಾಗಿದೆ. ಅಧಿಕಾರದಲ್ಲಿ ಇರುವವರು ಪ್ರಜೆಗಳಲ್ಲಿ ವಿಶ್ವಾಸ ಮೂಡಿಸುವಂತಹ, ಸುರಕ್ಷತೆ ಬಗ್ಗೆ ಸಂದೇಹ ಬರದಂತಹ ಕ್ರಮಗಳನ್ನು ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ.

ಇಂತಹ ಪ್ರಶ್ನೆಯಲ್ಲಿ ಸರಕಾರವನ್ನು ನಂಬಿ ಕುಳಿತರೆ ಸಾಲದು. ನಾಗರಿಕ ಹಕ್ಕುಗಳ ಸಂಘಟನೆಗಳು, ರಾಜಕೀಯ ಪಕ್ಷಗಳು ಎಚ್ಚರ ವಹಿಸಿ ಆಧಾರ್ ಸಂಖ್ಯೆಯ ಮಾಹಿತಿ ಯಾವುದೇ ಸಂದರ್ಭದಲ್ಲೂ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X