ಮುಂಬೈ ಪೊಲೀಸರಿಂದ ಶೀಘ್ರ ನೂಪುರ್ ಶರ್ಮಾಗೆ ಸಮನ್ಸ್

ಮುಂಬೈ,ಜೂ.6: ಬಿಜೆಪಿಯ ರಾಷ್ಟೀಯ ವಕ್ತಾರ ಹುದ್ದೆಯಿಂದ ಅಮಾನತುಗೊಂಡಿರುವ ನೂಪುರ ಶರ್ಮಾರಿಗೆ ಪ್ರವಾದಿ ಮುಹಮ್ಮದ್ ರ ಕುರಿತು ಅವರ ವಿವಾದಾತ್ಮಕ ಹೇಳಿಕೆಗಳಿಗಾಗಿ ಶೀಘ್ರವೇ ಸಮನ್ಸ್ ಅನ್ನು ಹೊರಡಿಸಲಾಗುವುದು ಎಂದು ಮುಂಬೈ ಪೊಲೀಸ್ ಆಯುಕ್ತ ಸಂಜಯ ಪಾಂಡೆಯವರು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಸುದ್ದಿವಾಹಿನಿಯಲ್ಲಿ ಜ್ಞಾನವಾಪಿ ಮಸೀದಿ ಕುರಿತು ಚರ್ಚೆಯ ಸಂದರ್ಭದಲ್ಲಿ ಪ್ರವಾದಿಯವರ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಶರ್ಮಾರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದೂ ಅವರು ಹೇಳಿದರು.
Next Story