Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೋದಿ ಸರಕಾರದ ಕಾಶ್ಮೀರ ನೀತಿ ಯಶಸ್ವಿಯೋ,...

ಮೋದಿ ಸರಕಾರದ ಕಾಶ್ಮೀರ ನೀತಿ ಯಶಸ್ವಿಯೋ, ವೈಫಲ್ಯವೋ? ಅಥವಾ ಅದೇ ಹಳೆಯ ಗೊಂದಲದ ನಡೆಯೋ?

ಶೇಖರ ಗುಪ್ತಶೇಖರ ಗುಪ್ತ7 Jun 2022 10:13 AM IST
share
ಮೋದಿ ಸರಕಾರದ ಕಾಶ್ಮೀರ ನೀತಿ  ಯಶಸ್ವಿಯೋ, ವೈಫಲ್ಯವೋ?  ಅಥವಾ ಅದೇ ಹಳೆಯ ಗೊಂದಲದ ನಡೆಯೋ?

ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ದೊಡ್ಡ ರಾಷ್ಟ್ರೀಯ ಭದ್ರತಾ ಸವಾಲಿಗೆ ಏಕಪಕ್ಷೀಯ ರಾಜಕೀಯ ಬಣ್ಣಗಳ ಮೂಲಕ ಮರುಬಣ್ಣ ನೀಡಿರುವುದಕ್ಕೆ ಸರಕಾರ ತೆರುತ್ತಿರುವ ಬೆಲೆ ಇದಾಗಿದೆ. 2014ರವರೆಗೆ ಭಾರತವು ಕಾಶ್ಮೀರವನ್ನು ನಿಭಾಯಿಸಿದ ರೀತಿಯು ಗೊಂದಲಕಾರಿಯಾಗಿತ್ತು ಎಂದು ನೀವು ಹೇಳಿದರೆ, ನಂತರದ ಎಂಟು ವರ್ಷಗಳೂ ಬಹುತೇಕ ಹಾಗೇ ಇದ್ದವು ಎಂಬುದನ್ನೂ ನೀವು ಹೇಳಬೇಕಾಗಿದೆ. ಕಾಶ್ಮೀರದ ಹಿಂದಿನ ಪರಿಸ್ಥಿತಿಯೇ ಬದಲಾವಣೆಯೊಂದಿಗೆ ಮುಂದುವರಿದಿದೆ ಎಂದು ನಾನು ಹೇಳಬಯಸುತ್ತೇನೆ.

ಮೋದಿ ಸರಕಾರ ಇತ್ತೀಚೆಗೆ ತನ್ನ ಎರಡನೇ ಅವಧಿಯ ಮೂರನೇ ವರ್ಷವನ್ನು ಪೂರೈಸಿತು. ಈ ಸಂದರ್ಭದಲ್ಲಿ ತನ್ನ ‘ಸಾಧನೆಗಳು ಮತ್ತು ಯಶಸ್ಸುಗಳನ್ನು’ ಅದು ದೊಡ್ಡ ದನಿಯಲ್ಲಿ ಹೇಳಿಕೊಂಡಿತು. ಹಾಗಾಗಿ, ಅದರ ಕಾಶ್ಮೀರ ನೀತಿಯು ಯಶಸ್ವಿಯೇ, ವಿಫಲವೇ ಅಥವಾ ಯಥಾ ಸ್ಥಿತಿಯೇ ಎನ್ನುವುದನ್ನು ಕೇಳಲು ಇದು ಸಕಾಲವಾಗಿದೆ. ಕಾಶ್ಮೀರದ ವಿಷಯದಲ್ಲಿ ಹಿಂದಿನ ಭಾರತೀಯ ಸರಕಾರಗಳು ಗೊಂದಲದ ನೀತಿಯನ್ನು ಅನುಸರಿಸುತ್ತಾ ಬಂದಿವೆ ಎಂಬುದಾಗಿ ಬಿಜೆಪಿಯು ಆರೋಪಿಸುತ್ತಾ ಬಂದಿರುವುದರಿಂದ ಈ ಪ್ರಶ್ನೆಯನ್ನು ಕೇಳುವುದು ಉಚಿತ ಎಂದು ಭಾವಿಸುತ್ತೇವೆ.

ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರು ಹೊರಗಿನವರನ್ನು ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಕೊಲ್ಲುತ್ತಿದ್ದಾರೆ. ಇದನ್ನು ಗಮನದಲ್ಲಿರಿಸಿ ಹೇಳುವುದಾದರೆ, ಮೋದಿ ಸರಕಾರದ ನೀತಿ ವಿಫಲವಾಗಿದೆ ಎಂದು ಹೇಳಬೇಕಾಗುತ್ತದೆ.

ಆದರೆ, ಮೂರು ಕಾರಣಗಳಿಗಾಗಿ ಇಂತಹ ನಿರ್ಧಾರಕ್ಕೆ ಬರುವುದರಿಂದ ಹಿಂದೆ ಸರಿಯುತ್ತೇವೆ. ಮೊದಲನೆಯದು, ಘಟನೆಗಳನ್ನು ಆಧರಿಸಿ ನೀತಿ ಪರಾಮರ್ಶೆ ಮಾಡುವಂತಿಲ್ಲ. ಎರಡನೆಯದು, ಕಾಶ್ಮೀರ ಕಣಿವೆಯಲ್ಲಿನ ಹಿಂಸಾಚಾರವನ್ನು ಅದರ ಭೌಗೋಳಿಕ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ. ಪ್ರಸಕ್ತ ಪರಿಸ್ಥಿತಿಯನ್ನು ನೋಡಿ, ‘ಪ್ರಳಯವಾಗುತ್ತಿದೆ’ ಮತ್ತು ‘1990 ಮರುಕಳಿಸಿದೆ’ ಎಂಬುದಾಗಿ ಘೋಷಿಸಲು ನಾವು ಟಿವಿ ವಾಹಿನಿಗಳಲ್ಲ. ನಾವು ಕಾಯುತ್ತೇವೆ ಮತ್ತು ಮೂರನೆಯದಾಗಿ, ಸಾಂವಿಧಾನಿಕ ಸ್ಥಾನಮಾನಕ್ಕೆ ಸಂಬಂಧಿಸಿದ 2019 ಆಗಸ್ಟ್ 5ರ ನಿರ್ಧಾರದೊಂದಿಗೆ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗಿದೆ ಎಂಬುದಾಗಿ ಯಾರಾದರೂ ಭಾವಿಸಿದರೆ, ಅವರು ಕಾಶ್ಮೀರ 101ನ್ನು ಮತ್ತೊಮ್ಮೆ ಓದಬೇಕು.

ಕಾಶ್ಮೀರಕ್ಕೆ ಸಂಬಂಧಿಸಿದ ಸಾಂವಿಧಾನಿಕ ಬದಲಾವಣೆಗಳನ್ನು ಬಿಜೆಪಿ/ಆರೆಸ್ಸೆಸ್ ನಿಷ್ಠರು ಸಂಭ್ರಮಿಸಿದರು. ತಮ್ಮ ಪ್ರಮುಖ ಸೈದ್ಧಾಂತಿಕ ಗುರಿಯೊಂದು ಈಡೇರಿದೆ ಎಂಬುದಾಗಿ ಭಾವಿಸಿದರು. ನೀವು ನನ್ನ ಲೇಖನಗಳನ್ನು ಓದುತ್ತಿರುವಿರಾದರೆ, ನೀವು ನನಗೆ ನೆನಪಿಸಬಹುದು- ಕಾಶ್ಮೀರ ಕುರಿತ ಆ ನಿರ್ಧಾರವನ್ನು ನೀವು ಕೂಡ ದಿಟ್ಟತನದ ಮತ್ತು ಧನಾತ್ಮಕ ನಿರ್ಧಾರ ಎಂಬುದಾಗಿ ಶ್ಲಾಘಿಸಿದ್ದೀರಿ ಎಂದು. ನನ್ನ ಈ ವಾರದ ವಾದದ ಜೊತೆಗೇ, ನನ್ನ ಹಿಂದಿನ ನಿಲುವಿಗೆ ಯಾಕೆ ಬದ್ಧವಾಗಿದ್ದೇನೆ ಎಂಬುದಾಗಿಯೂ ನಾನು ವಿವರಿಸುತ್ತೇನೆ ಮತ್ತು ಆ ಬದಲಾವಣೆಯ ಮಿತಿಗಳೇನು ಎಂಬುದನ್ನೂ ಹೇಳುತ್ತೇನೆ.

ಕಣಿವೆಯಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದ ಅಂಕಿ-ಸಂಖ್ಯೆಗಳು ಪರ-ವಿರೋಧ ಎರಡೂ ವಾದಗಳಿಗೂ ಪೂರಕವಾಗಿವೆ. ಗುರಿಯಿಟ್ಟು ನಡೆಸಿದ ಒಟ್ಟು ನಾಗರಿಕ ಹತ್ಯೆಗಳ ಬಗ್ಗೆ ಹೇಳುವುದಾದರೆ, ಈವರೆಗೆ 29 ಮಂದಿಯನ್ನು ಕೊಲ್ಲಲಾಗಿದೆ. ಇದಕ್ಕಾಗಿ 2021 ಅಕ್ಟೋಬರ್ 5ನ್ನು ಆರಂಭಿಕ ದಿನಾಂಕವೆಂಬುದಾಗಿ ಪರಿಗಣಿಸಲಾಗಿದೆ. ಅಂದು ಔಷಧಿ ಅಂಗಡಿಯೊಂದರ ಫಾರ್ಮಾಸಿಸ್ಟ್ ಎಮ್.ಎಲ್. ಬಿಂದ್ರೂ ಎಂಬವರನ್ನು ಕೊಲ್ಲಲಾಗಿತ್ತು. ನಾವು ಈಗಾಗಲೇ ಹೇಳಿರುವಂತೆ, ಕಣಿವೆಯಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಹೇಳುವುದಾದರೆ, ಈ ಸಂಖ್ಯೆಗೆ ಹೆಚ್ಚಿನ ಮಹತ್ವವೇನೂ ಇಲ್ಲ. ಅದು ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ.

ವಾಸ್ತವವಾಗಿ, ಸೌತ್ ಏಶ್ಯ ಟೆರರಿಸಮ್ ಪೋರ್ಟಲ್ (ಎಸ್‌ಎಟಿಪಿ)ನಲ್ಲಿರುವ ಅಂಕಿಅಂಶಗಳನ್ನು ಗಮನಿಸುವುದಾದರೆ, ಕಾಶ್ಮೀರ ಕಣಿವೆಯಲ್ಲಿ 2010ರಿಂದ ಸ್ಥಿರವಾಗಿ ಉಳಿದಿರುವ ಒಂದು ವಿಷಯವನ್ನು ಗಮನಿಸಬಹುದಾಗಿದೆ. ಅದೆಂದರೆ, ನಾಗರಿಕರ ಹತ್ಯೆಗಳ ಸಂಖ್ಯೆ. ನರೇಂದ್ರ ಮೋದಿ ಬರುವುದಕ್ಕಿಂತ ಹಿಂದಿನ ನಾಲ್ಕು ವರ್ಷಗಳೂ ಇದರಲ್ಲಿ ಸೇರಿವೆ. ಈ ಅವಧಿಯಲ್ಲಿ ನಾಗರಿಕರ ಹತ್ಯೆಗಳ ಸಂಖ್ಯೆ ವರ್ಷಕ್ಕೆ 19ರಿಂದ 34ರ ನಡುವೆ ಇದೆ. 2018ನ್ನು ಹೊರತುಪಡಿಸಿ, ಮೋದಿ ಸರಕಾರದ ಎರಡು ಅವಧಿಗಳಲ್ಲೂ ಈ ಸಂಖ್ಯೆಯು ಇದೇ ವ್ಯಾಪ್ತಿಯಲ್ಲಿದೆ. 2018ರಲ್ಲಿ ಮಾತ್ರ ನಾಗರಿಕರ ಹತ್ಯೆಗಳ ಸಂಖ್ಯೆ 86ಕ್ಕೆ ಏರಿತ್ತು. 2018ನ್ನು ಹೊರತುಪಡಿಸಿದ ವರ್ಷಗಳಲ್ಲಿ ಹತ್ಯೆಗಳ ಸಂಖ್ಯೆಯಲ್ಲಿ ಏರಿಕೆಯೂ ಆಗಿಲ್ಲ, ಇಳಿಕೆಯೂ ಆಗಿಲ್ಲ. ಕಾಶ್ಮೀರ ಕಣಿವೆಯ ಪರಿಸ್ಥಿತಿಯು 2014 ಮೇ ತಿಂಗಳಿಗಿಂತ ಮೊದಲು ನರಕವಾಗಿದ್ದರೆ, ಅದು ಈಗ ಸ್ವರ್ಗವಾಗಿಯೇನೂ ಇಲ್ಲ. ಅಥವಾ 2014ರ ಮೇ ತಿಂಗಳ ಬಳಿಕ ಕಾಶ್ಮೀರದ ಪರಿಸ್ಥಿತಿಯು ನರಕವಾಗಿದ್ದರೆ, ಅದಕ್ಕಿಂತ ಮೊದಲು ಸ್ವರ್ಗವಾಗಿಯೇನೂ ಇರಲಿಲ್ಲ.

ನೀವು ಮೋದಿ/ಬಿಜೆಪಿ ಬೆಂಬಲಿಗರಾಗಿದ್ದರೆ, ಕಣಿವೆಯಲ್ಲಿ ಅದೇ ಹಳೆಯ ಕತೆ ಮುಂದುವರಿಯುತ್ತಿರುವುದರಿಂದ ನೀವು ನಿರಾಶರಾಗಿಲ್ಲವೇ? ಎದೆಯ ಮೇಲೆ ಕೈಯಿಟ್ಟು ಹೇಳಿ. 2014ರ ಚುನಾವಣೆಗಾಗಿ ಮೋದಿ ಮತ್ತು ಅವರ ಪಕ್ಷವು ಪ್ರಚಾರ ನಡೆಸುತ್ತಿದ್ದಾಗ, ಕಾಶ್ಮೀರಕ್ಕೆ ಸಂಬಂಧಿಸಿ ಕಠಿಣ ನಿಲುವು ತೆಗೆದುಕೊಳ್ಳುವ ಮತ್ತು ಹಿಂದಿನ ಗೊಂದಲಗಳಿಗೆ ತೆರೆಯೆಳೆಯುವ ಭರವಸೆಯನ್ನು ಅವರು ನೀಡಿದ್ದರು.

ಕಾಶ್ಮೀರ ಪಂಡಿತರ ಪಾಡು ಮತ್ತು 1990ರಲ್ಲಿ ಜಾತ್ಯತೀತ ಪಕ್ಷಗಳು ಅವರನ್ನು ಹೇಗೆ ಕೈಬಿಟ್ಟವು ಎನ್ನುವುದನ್ನು ದುರ್ಬಲ ಸರಕಾರಕ್ಕೆ ಉದಾಹರಣೆಯಾಗಿ ನೀಡಲಾಯಿತು. ನಿಮ್ಮ ಕತೆ ಮುಗಿಯಿತು ಎನ್ನುವುದನ್ನು ಮೋದಿ ಸರಕಾರವು ಭಯೋತ್ಪಾದಕರಿಗೆ- ಅವರು ಭಾರತೀಯರಾಗಿರಲಿ, ಪಾಕಿಸ್ತಾನಿಯರಾಗಿರಲಿ- ತೋರಿಸುತ್ತದೆ ಎಂಬುದಾಗಿ ಹೇಳಲಾಗಿತ್ತು. ಆ ಬಳಿಕ ವರ್ಷಗಳೇ ಕಳೆದವು. ನಮಗೇನೂ ಹೀಗೆ ಅನಿಸುವುದಿಲ್ಲ ಎನ್ನುವುದನ್ನು ಭಯೋತ್ಪಾದಕರು ತೋರಿಸಿದ್ದಾರೆ.

‘ದ ಕಾಶ್ಮೀರ ಫೈಲ್ಸ್’ ಚಿತ್ರವನ್ನು ದೇಶಾದ್ಯಂತ ಅದ್ದೂರಿಯಿಂದ ಸಂಭ್ರಮಿಸಲಾಯಿತು. ‘‘ಕಾಶ್ಮೀರಿ ಪಂಡಿತರ ಹತ್ಯೆಗಳು ನಡೆದವು ಮತ್ತು 1990ರಲ್ಲಿ ಜನಾಂಗೀಯ ಹತ್ಯೆ ನಡೆಯಿತು. ಯಾಕೆಂದರೆ ಆ ಸಂದರ್ಭದಲ್ಲಿ ಭಾರತದಲ್ಲಿ ದುರ್ಬಲ ಮತ್ತು ಹೇಡಿ ಸರಕಾರವಿತ್ತು’’ ಎಂಬುದಾಗಿ ಈ ಚಿತ್ರವು ಪ್ರತಿಪಾದಿಸುತ್ತದೆ. ಈ ಚಿತ್ರವನ್ನು ಬಿಜೆಪಿ ಅಭೂತಪೂರ್ವ ರೀತಿಯಲ್ಲಿ ಪೋಷಿಸಿತು.

ಈಗ ಮತ್ತದೇ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಭಯೋತ್ಪಾದಕರು ಪುನರಾರಂಭಿಸಿದ್ದಾರೆ ಹಾಗೂ ಇನ್ನೊಂದು ಸಮರವನ್ನು ಆರಂಭಿಸಿದ್ದಾರೆ. ಹಾಗಾದರೆ, ಈಗಿನ ಸರಕಾರವನ್ನು ನೀವು ಏನೆಂದು ಕರೆಯುತ್ತೀರಿ?

ಪ್ರವಾಸಿಗರು ಮತ್ತು ಅಮರನಾಥ ಯಾತ್ರಿಕರ ಸಂಖ್ಯೆಗಳ ಬಗ್ಗೆ ನಾವು ಗೊಂದಲಕ್ಕೊಳಗಾಗುವುದು ಬೇಡ. ಈ ಎರಡು ವಿಷಯಗಳಲ್ಲಿ ಕಣಿವೆಯಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ಉತ್ತಮ ಬೆಳವಣಿಗೆಗಳು ಸಂಭವಿಸಿವೆ. ಹೊರಗಿನವರು ಕಣಿವೆಯಲ್ಲಿ ಸುರಕ್ಷಿತವಾಗಿ ಕೆಲಸ ಮಾಡುವಂತೆ ಮಾಡಲು ಮತ್ತು ಪಂಡಿತರು ತಮ್ಮ ತಾಯ್ನಿಡಿಗೆ ಸುರಕ್ಷಿತವಾಗಿ ಮರಳುವಂತೆ ಮಾಡಲು ನಿಮಗೆ ಸಾಧ್ಯವಿದೆಯೇ ಎನ್ನುವುದು ಪ್ರಶ್ನೆಯಾಗಿದೆ. ಇದು ಯಾವುದೂ ಸಾಧ್ಯವಾಗಿಲ್ಲ.

ನೀವು ಮೋದಿ ಸರಕಾರದ ಕಟ್ಟಾ ಅಭಿಮಾನಿಯಾದರೆ ಹಾಗೂ ಇದ್ದುದನ್ನು ಇದ್ದ ಹಾಗೆ ಹೇಳಿರುವುದಕ್ಕೆ ನನ್ನ ವಿರುದ್ಧ ಆಕ್ರೋಶಗೊಂಡಿದ್ದರೆ, ನೀವು ನನಗೊಂದು ಪ್ರಶ್ನೆಯನ್ನು ಕೇಳಬಹುದು: ‘‘ನೆಹರೂ-ಗಾಂಧಿ-ಅಬ್ದುಲ್ಲಾ-ಮುಫ್ತಿ ಕುಟುಂಬಗಳು ಹಾಗೂ ಪಾಕಿಸ್ತಾನ ಮತ್ತು ಇಸ್ಲಾಮಿಕ್ ಮೂಲಭೂತವಾದವು 70 ವರ್ಷಗಳಲ್ಲಿ ಹದಗೆಡಿಸಿದ ಪರಿಸ್ಥಿತಿಯೊಂದನ್ನು ಮೋದಿ ಸಂಪೂರ್ಣವಾಗಿ ಸಾಮಾನ್ಯೀಕರಿಸಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಅದಕ್ಕೆ ಸಮಯ ತಗಲುತ್ತದೆ’’. ನೀವು ತಾಳ್ಮೆಯಿಂದಿರಬೇಕು. ಇದು ನನ್ನ ನಿಲುವು ಕೂಡ ಆಗಿದೆ.

ಸ್ವತಂತ್ರ ಭಾರತದ ನಿಜವಾದ ಇತಿಹಾಸವು 2014ರ ಬೇಸಿಗೆಯಲ್ಲಷ್ಟೇ ಆರಂಭವಾಯಿತು ಎಂಬ ನಂಬಿಕೆಯೇ ಈ ಸಮಸ್ಯೆಗೆ ಮೂಲವಾಗಿದೆ. ಅದಕ್ಕಿಂತ ಮೊದಲು ಈ ದೇಶದಲ್ಲಿ ನಡೆದದ್ದೆಲ್ಲ ರಾಷ್ಟ್ರೀಯ ಹಿತಾಸಕ್ತಿ ಯೊಂದಿಗೆ ರಾಜಿ ಮಾಡಿಕೊಂಡದ್ದು. ಈ ಭಾವನೆ ನಿಮ್ಮಲ್ಲಿದ್ದರೆ, ಕಾಶ್ಮೀರ ಸೇರಿದಂತೆ ಎಲ್ಲದರಲ್ಲೂ ಇತಿಹಾಸ ಹೊಸದಾಗಿ ಆರಂಭಗೊಳ್ಳಬೇಕು ಎಂಬುದಾಗಿ ನೀವು ನಿರೀಕ್ಷಿಸುತ್ತೀರಿ. ಉರಿ, ಬಾಲಾಕೋಟ್, 370ನೇ ವಿಧಿ, ದ ಕಾಶ್ಮೀರ್ ಫೈಲ್ಸ್‌ಗಳಲ್ಲಿ ನೀವು ಸಂಭ್ರಮಾಚರಣೆ ಮಾಡುತ್ತೀರಿ.

ಬಳಿಕ, ಪತ್ರಿಕೆಗಳಲ್ಲಿ ದೈನಂದಿನ ಸುದ್ದಿಗಳು ಒಂದೇ ರೀತಿಯಾಗಿರುತ್ತವೆ. ಹಿಂದೂಗಳ, ಅದರಲ್ಲೂ ಮುಖ್ಯವಾಗಿ ಪಂಡಿತರ ಹತ್ಯೆಗಳು. ಟಿವಿ ಸೇನಾನಿಗಳು ಹಿಂದಿನಂತೆಯೇ ಆಕ್ರೋಶಿತರಾಗುತ್ತಾರೆ. ಪಾಕಿಸ್ತಾನಕ್ಕೆ ಪಾಠ ಕಲಿಸಿ, ಅಪವಿತ್ರ ಜಿಹಾದಿ ಮನೋಸ್ಥಿತಿಯ ವಿರುದ್ಧ ಪವಿತ್ರ ಯುದ್ಧ ಆರಂಭಿಸಿ ಎಂಬುದಾಗಿ ಕಿರುಚಾಡುತ್ತಾರೆ.

ಈಗ ನಿಮ್ಮ ಪ್ರಶ್ನೆಯನ್ನು ನಿಮಗೆ ತಿರುಗಿಸಿ ಕೇಳುವುದು ನನ್ನ ಸರದಿ. ನಿಮಗೆ ಬೇಕಾದ ಸರಕಾರವನ್ನು ನೀವು ಆರಿಸಿದ್ದೀರಿ ಎಂಬ ಒಂದೇ ಕಾರಣಕ್ಕೆ, ಪ್ರಬಲ ಸೇನೆಗಳಿರುವ ಮತ್ತು ಪರಸ್ಪರ ಸಂಪೂರ್ಣ ಅಪನಂಬಿಕೆ ಹೊಂದಿರುವ ಎರಡು ಪರಮಾಣುಶಕ್ತ ದೇಶಗಳ ನಡುವಿನ ಈ ಗಂಭೀರ ವಿವಾದವು ಇತ್ಯರ್ಥಗೊಳ್ಳಬೇಕೇಂದು ನೀವು ನಿರೀಕ್ಷಿಸುವಿರೇ? ಕಾಶ್ಮೀರ ವಿವಾದ ಇತ್ಯರ್ಥಕ್ಕೆ ತಾಳ್ಮೆ, ವಾಸ್ತವಿಕತೆಯ ಜ್ಞಾನ ಮತ್ತು ಸ್ವಲ್ಪ ವಿನಯ ಬೇಕು. ಯಾವುದೇ ದೊಡ್ಡ ಸುದ್ದಿ, ಇನ್ನೊಂದು ಭಯಾನಕ ಭಯೋತ್ಪಾದಕ ದಾಳಿ (ಹಾಗೆ ಆಗುವುದು ಬೇಡ)ಯೂ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವುದಿಲ್ಲ. ಯಾವುದೇ ದೊಡ್ಡ ಸುದ್ದಿ, 2019 ಆಗಸ್ಟ್ 5ರ ನಿರ್ಧಾರಗಳಿಗೆ ಸಂಬಂಧಿಸಿದ ಸುದ್ದಿಯಾದರೂ ಬಿಕ್ಕಟ್ಟನ್ನು ಕೊನೆಗೊಳಿಸುವುದಿಲ್ಲ.

ಸಂವಿಧಾನದ 370ನೇ ವಿಧಿಯ ಕುರಿತ ನಿರ್ಧಾರವನ್ನು ಶ್ಲಾಘಿಸುವುದು ಮತ್ತು ಜೊತೆ ಜೊತೆಗೇ ಕಣಿವೆಯಲ್ಲಿನ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲ ಎಂದು ಹೇಳುವುದು- ಈ ವೈರುಧ್ಯವನ್ನು ಈಗ ನಾವೀಗ ನಿವಾರಿಸೋಣ. ಆ ಸಾಂವಿಧಾನಿಕ ನಿರ್ಧಾರವನ್ನು ಉನ್ನತ ರಾಜಕೀಯ-ತಂತ್ರಗಾರಿಕೆಯ ಆಧಾರದಲ್ಲಿ ತೆಗೆದುಕೊಳ್ಳಲಾಗಿತ್ತು. ಅದು ವಾಸ್ತವಿಕ ಸ್ಥಿತಿಯನ್ನು ಆಧರಿಸಿದ ತಂತ್ರಗಾರಿಕೆ ಆಗಿರಲಿಲ್ಲ. ಆ ಸಾಂವಿಧಾನಿಕ ನಿರ್ಧಾರವು ಭಯೋತ್ಪಾದನೆ, ಹಿಂಸೆ, ಪರಕೀಯತೆ ಮತ್ತು ಕಣಿವೆಯಲ್ಲಿನ ‘ಜಿಹಾದ್’ನ್ನು ಕೊನೆಗೊಳಿಸುತ್ತದೆ ಎಂದು ನಿರೀಕ್ಷಿಸುವುದು ಆಶಯವಷ್ಟೆ.

ಆ ಸಾಂವಿಧಾನಿಕ ಬದಲಾವಣೆಯು ‘ಧೀರ ನೂತನ ಬೆಳಗು’ ಮತ್ತು ‘ಅಂಧಕಾರದ ಕೊನೆ’ ಎಂಬುದಾಗಿ ಮಾಡಲಾದ ಅತಿರಂಜಿತ ಪ್ರಚಾರಕ್ಕೆ ಮೋದಿ ಸರಕಾರ ಮತ್ತು ಬಿಜೆಪಿಯನ್ನೇ ದೂರಬೇಕು ಎಂದು ನೀವು ಹೇಳಬಹುದು. ಆದರೆ ಅವರು ರಾಜಕಾರಣಿಗಳು. ಅತಿ ಸಣ್ಣ ಸೂಚನೆ ಸಿಕ್ಕಿದರೂ ವಿಜಯವನ್ನು ಘೋಷಿಸಿಬಿಡುತ್ತಾರೆ. ಹಾಗಾಗಿ, ಈಗ ಅವರ ಪಡಿಪಾಟಲು ಕೂಡ ದೊಡ್ಡದಾಗಿಯೇ ಇದೆ. ಗೃಹ ಸಚಿವ, ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಬಿಕ್ಕಟ್ಟು ನಿರ್ವಹಣಾ ಸಭೆಗಳನ್ನು ನಡೆಸುತ್ತಿದ್ದಾರೆ. ಪ್ರಸಕ್ತ ಬಹುತೇಕ ಅರ್ಧ ವರ್ಷದಲ್ಲಿ ಮೃತಪಟ್ಟಿರುವ ಒಟ್ಟು ನಾಗರಿಕರ ಸಂಖ್ಯೆ 19 ಆಗಿರುವಾಗ ಈ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ. 19 ಹೆಚ್ಚೇ ಸರಿ. ಆದರೆ, ಇದು ಕಾಶ್ಮೀರ.

ರಾಜಕೀಯ-ತಂತ್ರಗಾರಿಕೆಯ ಆಧಾರದಲ್ಲಿ, ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ನಿರ್ಧಾರವನ್ನು ಹೇಗೆ ನೋಡಬಹುದು? ಭಾರತದಲ್ಲಿ ಕಾಶ್ಮೀರವು ವಿಶೇಷ ಸ್ಥಾನಮಾನವನ್ನು ಹೊಂದಿರುವವರೆಗೆ, ಹೊರಜಗತ್ತು, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನವು, ಇಡೀ ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನದ ಬಗ್ಗೆ ಮಾತುಕತೆ ಸಾಧ್ಯವಿದೆ ಎಂಬ ಭಾವನೆಯನ್ನು ಹೊಂದಿತ್ತು.

ಆದರೆ 2019 ಆಗಸ್ಟ್ 5ರ ನಿರ್ಧಾರವು ಅದನ್ನು ಬದಲಿಸಿತು. ಅಂದಿನಿಂದ ಭಾರತದ ಸಂದೇಶ ಹೀಗಿದೆ: ‘‘ಜಮ್ಮು ಮತ್ತು ಕಾಶ್ಮೀರವು ಇತರ ಯಾವುದೇ ರಾಜ್ಯದಂತೆ ಭಾರತದ ಒಂದು ಭಾಗ. ನಾವು ಮಾತುಕತೆಗಳಿಗೆ ಮುಕ್ತವಾಗಿರುವೆವಾದರೂ, ಮಾತುಕತೆ ನಡೆಯಬೇಕಾಗಿರುವುದು ನಾವು ಪಾಕ್ ಆಕ್ರಮಿತ ಕಾಶ್ಮೀರ ಎಂಬುದಾಗಿ ಕರೆಯುವ ಹಾಗೂ ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಭೂಭಾಗದ ಬಗ್ಗೆ.’’ ವಿಶ್ವಸಂಸ್ಥೆ ಸೇರಿದಂತೆ ಜಗತ್ತು ಭಾರತದ ಈ ನಿರ್ಧಾರವನ್ನು ಆಗಿಹೋದ ಘಟನೆ ಎಂಬುದಾಗಿ ಸ್ವೀಕರಿಸಿರುವುದು ಮೋದಿ ಸರಕಾರದ ಯಶಸ್ಸು. ಹಾಗಾಗಿಯೇ ಆ ನಿರ್ಧಾರವನ್ನು ನಾವು ದಿಟ್ಟ ನಿರ್ಧಾರ ಎಂಬುದಾಗಿ ಹೇಳಿದೆವು.

ಇನ್ನೊಂದು ಕಡೆ, ಇದನ್ನು ಪಾಕಿಸ್ತಾನಿಯರೂ ಅರ್ಥಮಾಡಿಕೊಂಡಿ ದ್ದಾರೆ. ಪಾಕಿಸ್ತಾನವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವಾಗ ಕಾಶ್ಮೀರಕ್ಕೆ ಸಂಬಂಧಿಸಿದ ಬೆಳವಣಿಗೆಗಳು ನಡೆದಿವೆ. ಅದಕ್ಕೆ ಇಮ್ರಾನ್ ಖಾನ್ ಸರಕಾರ ತೀವ್ರ ಪ್ರತಿಕ್ರಿಯೆಗಳನ್ನು ನೀಡಿತು. ಆಗ ತಾನು ಹೊಂದಿದ್ದ ಅಂತರ್‌ರಾಷ್ಟ್ರೀಯ ಬೆಂಬಲವನ್ನು ಪಾಕಿಸ್ತಾನ ಬಳಸಿಕೊಂಡಿತು. ಲಡಾಖ್‌ನಲ್ಲಿ ಚೀನಾವು ಅತಿಕ್ರಮಣ ಮಾಡಲು ಇದೂ ಒಂದು ಕಾರಣವಾಗಿತ್ತು. ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನವೂ ಒಂದು ಪಕ್ಷ ಎನ್ನುವುದನ್ನು ಸಾಧಿಸಿ ತೋರಿಸುವುದು ಚೀನಾದ ಉದ್ದೇಶವಾಗಿತ್ತು.

ಪಾಕಿಸ್ತಾನಕ್ಕಿದ್ದ ಇನ್ನೊಂದು ಆಯ್ಕೆ, ಅದೇ ಹಳೆಯದು- ಕಣಿವೆಯಲ್ಲಿ ಭಯೋತ್ಪಾದನೆಯನ್ನು ಮತ್ತೆ ಆರಂಭಿಸುವುದು. ಅದರ ಫಲಿತಾಂಶಗಳನ್ನು ನಾವೀಗ ನೋಡುತ್ತಿದ್ದೇವೆ.

ರಾಜ್ಯದ ಸ್ಥಾನಮಾನವನ್ನು ಬದಲಾಯಿಸುವಲ್ಲಿ ಮೋದಿ ಸರಕಾರದ ಕಾಶ್ಮೀರ ನೀತಿ ಯಶಸ್ವಿಯಾಗಿದೆ. ಆದರೆ, ಸರಕಾರವು ಅದರ ಬಗ್ಗೆ ವಿಪರೀತ ಪ್ರಚಾರ ಮಾಡಿದ ಕಾರಣಕ್ಕಾಗಿ, ಅದು ಈಗ ವಿಫಲವೆಂಬಂತೆ ಕಾಣುತ್ತಿದೆ. ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ದೊಡ್ಡ ರಾಷ್ಟ್ರೀಯ ಭದ್ರತಾ ಸವಾಲಿಗೆ ಏಕಪಕ್ಷೀಯ ರಾಜಕೀಯ ಬಣ್ಣಗಳ ಮೂಲಕ ಮರುಬಣ್ಣ ನೀಡಿರುವುದಕ್ಕೆ ಅದು ತೆರುತ್ತಿರುವ ಬೆಲೆ ಇದಾಗಿದೆ. 2014ರವರೆಗೆ ಭಾರತವು ಕಾಶ್ಮೀರವನ್ನು ನಿಭಾಯಿಸಿದ ರೀತಿಯು ಗೊಂದಲಕಾರಿಯಾಗಿತ್ತು ಎಂದು ನೀವು ಹೇಳಿದರೆ, ನಂತರದ ಎಂಟು ವರ್ಷಗಳೂ ಬಹುತೇಕ ಹಾಗೇ ಇದ್ದವು ಎಂಬುದನ್ನೂ ನೀವು ಹೇಳಬೇಕಾಗಿದೆ. ಕಾಶ್ಮೀರದ ಹಿಂದಿನ ಪರಿಸ್ಥಿತಿಯೇ ಬದಲಾವಣೆಯೊಂದಿಗೆ ಮುಂದುವರಿದಿದೆ ಎಂದು ನಾನು ಹೇಳಬಯಸುತ್ತೇನೆ.

ಕೃಪೆ: ThePrint

share
ಶೇಖರ ಗುಪ್ತ
ಶೇಖರ ಗುಪ್ತ
Next Story
X