ದ.ಕ.ಜಿಲ್ಲೆಯ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಪೊಟ್ಟಣ ವಿತರಣೆ

ಮಂಗಳೂರು : ದ.ಕ.ಜಿಲ್ಲೆಯ ೮ ಕ್ಷಯ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯಲ್ಲಿರುವ ರೋಗಿಗಳಿಗೆ ಕರ್ಣಾಟಕ ಬ್ಯಾಂಕ್ ಮುಖ್ಯ ಆಡಳಿತ ಕಚೇರಿಯ ನೆರವಿನ ೧.೦೫ ಲಕ್ಷ ರೂ. ಮೊತ್ತದ ಪೌಷ್ಠಿಕ ಆಹಾರದ ಪೊಟ್ಟಣವನ್ನು ಮಂಗಳವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಕರ್ಣಾಟಕ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀನಿವಾಸ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲೆಯಲ್ಲಿ 988 ಕ್ಷಯರೋಗಿಗಳಿದ್ದು, ಅದರಲ್ಲಿ ೭೫ ಡಿ.ಆರ್.ಟಿ.ಬಿ.ಮತ್ತು ೨೩ ಮಕ್ಕಳು ಇದ್ದಾರೆ. ಸರಕಾರದ ವತಿಯಿಂದ ಕ್ಷಯರೋಗಿಗಳಿಗೆ ಮಾಸಿಕ ೫೦೦ ರೂ.ಗಳನ್ನು ಚಿಕಿತ್ಸೆ ಮುಗಿಯುವ ತನಕ ನೀಡಲಾಗುತ್ತಿದೆ. ಪೌಷ್ಠಿಕ ಆಹಾರಕ್ಕೆ ಈ ಹಣ ಸಾಕಾಗದಿರುವುದರಿಂದ ಬ್ಯಾಂಕ್ ಮತ್ತಿತರ ಸಂಸ್ಥೆಗಳು ದಾನಿಗಳ ನೆರವಿನಿಂದ ಪೌಷ್ಠಿಕ ಆಹಾರದ ಪೊಟ್ಟಣ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗಳಾದ ಡಾ. ಕಿಶೋರ್ ಕುಮಾರ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಕೆ.ಎಸ್.ದಯಾನಂದ್, ದ.ಕ.ಜಿಲ್ಲಾ ಕ್ಷಯರೋಗ ನಿಯಂತ್ರಾಣ ಧಿಕಾರಿ ಡಾ.ಬದ್ರುದ್ದೀನ್ ಎಂ.ಎನ್. ಉಪಸ್ಥಿತರಿದ್ದರು.