ಕಾಟಿಪಳ್ಳ: ಸ್ವಾಲಿಹ್ ಉಸ್ತಾದರ ಅನುಸ್ಮರಣೆ, ಪುಸ್ತಕ ಬಿಡುಗಡೆ

ಮಂಗಳೂರು : ಪಣಂಬೂರು ಮತ್ತು ಕಾಟಿಪಳ್ಳ ಪ್ರದೇಶಗಳಲ್ಲಿ ನಾಲ್ಕು ದಶಕಗಳ ಸುದೀರ್ಘ ಕಾಲ ಧಾರ್ಮಿಕ, ಲೌಕಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದುಡಿದು ೨೫ ವರ್ಷಗಳ ಹಿಂದೆ ಅಗಲಿದ ಮುಹಮ್ಮದ್ ಸ್ವಾಲಿಹ್ ಉಸ್ತಾದ್ ಕಾಟಿಪಳ್ಳ ಅವರ ಅನುಸ್ಮರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವು ರವಿವಾರ ಜಾಸ್ಮಿನ್ ಮಹಲ್‌ನನಲ್ಲಿ ಜರಗಿತು.
ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಪುಸ್ತಕ ಬಿಡುಗಡೆಗೊಳಿಸಿದರು. ಕೃಷ್ಣಾಪುರ ಖಾಝಿ ಅಲ್ ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕಾಟಿಪಳ್ಳ ಜುಮ್ಮಾ ಮಸೀದಿಯ ಖತೀಬ್ ವಿ.ಯು. ಅಬ್ದುನ್ನಾಸಿರ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು.
ಅಬೂಸುಫ್ಯಾನ್ ಎಚ್.ಐ. ಇಬ್ರಾಹೀಂ ಮದನಿ, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವ ಪಡೀಲ್ ಅನುಸ್ಮರಣಾ ಬಾಷಣ ಮಾಡಿದರು. ಬೊಳ್ಳೂರು ಮಸೀದಿಯ ಖತೀಬ್ ಶೈಖುನಾ ಅಝ್‌ಹರ್ ಫೈಝಿ, ಅಸೈಯದ್ ಇಸ್ಮಾಯಿಲ್ ತಂಙಳ್, ಪಣಂಬೂರು ಮುಸ್ಲಿಂ ಜಮಾತ್ ಅಧ್ಯಕ್ಷ ಅಹ್ಮದ್ ಬಾವ ಅಯ್ಯೂಬ್, ನೂರುಲ್ ಹುದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಹಬೀಬುರ‌್ರಹ್ಮಾನ್ ಮದನಿ, ಇಸ್ಮಾಯಿಲ್, ಪಿಹೆಚ್ ಇದಿನಬ್ಬ, ಪಿಬಿಎ ರಝಾಕ್, ಪಿ.ಎಂ. ಸಲೀಂ ರಫಿ, ಮುಸ್ತಫಾ ದಮ್ಮಾಮ್, ಖಾಲಿದ್ ದಮ್ಮಾಮ್, ಪರ್ವೇಝ್ ಅಲಿ, ಹಾಜಿ ಎಂಜಿ ಮುಹಮ್ಮದ್ ತೋಡಾರ್, ಆದರ್ಶ ಯುವಕ ಮಂಡಲದ ಸುಂದರ್, ಶ್ರೀನಿವಾಸ್, ಅಹ್ಮದ್ ಬಿನ್ ಸ್ವಾಲಿಹ್, ಹಾಜಿ ಪಿ. ಹುಸೈನಬ್ಬ ಪಾಲ್ಗೊಂಡಿದ್ದರು.
ಹುಸೈನ್ ಕಾಟಿಪಳ್ಳ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಹಸನಬ್ಬ ಮೂಡುಬಿದಿರೆ, ಪಿ.ಎಂ. ಝೈನುದ್ದೀನ್, ಅನ್ಸಾರ್ ಕಾಟಿಪಳ್ಳ, ಎಸ್.ಯು. ಅಷ್ಫಾಕ್ ಅಹ್ಮದ್, ಇಶಾಅತ್, ಇಝಾನ್ ಇಸ್ಮಾಈಲ್ ಕವನ ವಾಚಿಸಿದರು. ಸಮದ್ ಕಾಟಿಪಳ್ಳ ಕವಿಗೋಷ್ಠಿಯ ಕಾರ್ಯಕ್ರಮ ನಿರೂಪಿಸಿದರು. ಜಿಎಂ ಕಾಮಿಲ್ ಸಖಾಫಿ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು.
ಪುಸ್ತಕದ ಸಂಪಾದಕ ಅನ್ಸಾರ್ ಕಾಟಿಪಳ್ಳ ಸ್ವಾಗತಿಸಿದರು. ಪಿ.ಎ.ಇಲ್ಯಾಸ್ ಪ್ರಸ್ತಾವನೆಗೈದರು. ಇಸ್ಮಾಯಿಲ್ ಕಾಟಿಪಳ್ಳ ವಂದಿಸಿದರು. ಪಿ.ಎಂ. ಝೈನುದ್ದೀನ್ ಕಾರ್ಯಕ್ರಮ ನಿರೂಪಿಸಿದರು.







