ಮಂಗಳೂರು: ಮಾಂಡ್ ಸೊಭಾಣ್‌ನಿಂದ ತ್ರಿವಳಿ ಕಾರ್ಯಕ್ರಮ

ಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿ ೨೪೬ನೇ ಕಾರ್ಯಕ್ರಮ ಫುಲಾಂ ಪಾಕ್ಳ್ಯೊ ತನ್ನ ಕೊಂಕಣಿ ಕಾರ್ಯಗಳ ಸಹಾಯಾರ್ಥ ಆಯೋಜಿಸಿದ್ದ ತೆಂಕೊ ಅಭಿಯಾನ್ ಧನ ಸಂಗ್ರಹ ಅಭಿಯಾನದ ಡ್ರಾ ಮತ್ತು ಗಾಯಕಿ ಲೋರ್ನಾ ಕೊರ್ಡೆರೊ ಅವರಿಗೆ ಜೀವಮಾನ ಸಾಧನ ಪುರಸ್ಕಾರವು ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಉದ್ಯಮಿ ರೋಹನ್ ಮೊಂತೇರೊ ಮಹೀಂದ್ರಾ ಎಕ್ಸ್‌ಎಲ್‌ಯು ೩೦೦ ಕಾರಿನ ಡ್ರಾ ನಡೆಸಿದರು. ೧೩೦೧ ನಂಬರಿನ ಕೂಪನ್ ಖರೀದಿಸಿದ್ದ ಗೌರವ ಅತಿಥಿಯಾಗಿ ಭಾಗವಹಿಸಿದ ಸಿಎ ಒಲ್ವಿನ್ ರಾಡ್ರಿಗಸ್ ಅದೃಷ್ಟಶಾಲಿಯಾಗಿ ಹೊರಹೊಮ್ಮಿದರು.
ವೇದಿಕೆಯಲ್ಲಿ ರಿಚರ್ಡ್ ರಾಡ್ರಿಗಸ್, ಮೈಕಲ್ ಡಿಸೋಜ, ಮಾರ್ಟೀನ್ ತಾವ್ರೊ, ಲುವಿ ಪಿಂಟೊ, ಕಿಶೋರ್ ಫೆರ್ನಾಂಡಿಸ್, ಸ್ಟ್ಯಾನಿ ಆಲ್ವಾರಿಸ್, ಎಲ್ರೊನ್ ರಾಡ್ರಿಗಸ್ ಉಪಸ್ಥಿತರಿದ್ದರು. ಅರುಣ್‌ರಾಜ್ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.
ಇತ್ತೀಚೆಗೆ ನಿಧನರಾದ ಸಾಹಿತಿ, ಕಲಾವಿದರಾದ ಸಿಜ್ಯೆಸ್ ತಾಕೊಡೆ, ಸುನೀಲ್ ಕ್ರಾಸ್ತಾ ಬಜಾಲ್, ಹ್ಯಾರಿ ಡಿಸೋಜ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ತಿಂಗಳ ವೇದಿಕೆ ಕಾರ್ಯಕ್ರಮಕ್ಕೆ ಉದ್ಯಮಿ ಮಾರ್ಟಿನ್ ಆರಾನ್ಹಾ ಚಾಲನೆ ನೀಡಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ನವ ಕಲಾವಿದರಾದ ಇಶಾನ್ ಫೆರ್ನಾಂಡಿಸ್, ಆವ್ರಿಲ್ ರೆಬೆಲ್ಲೊ, ಒಲಿಂಕಾ ಲೋಬೊ, ಸಲೋನಿ ಸಲ್ಡಾನ್ಹಾ, ಕ್ಯಾಲ್ವಿನಾ ಪಿಂಟೊ, ರೊಯ್ಸ್ಟನ್ ಡಿಸೋಜ, ಕ್ಲಿಯೊನ್ ಡಿಸಿಲ್ವಾ, ಆರ್ವಿನ್ ಸೇಥ್, ಲಯೋನಾ, ರೊನ್ವಿಲ್ ಡಿಸೋಜ, ಐರೆಲ್ ರೇಗೊ, ರೇಹಾ ವಾಸ್, ಲಿಯೊನಾ ಡಿಸೋಜ, ರಿಯಾ ಮೊಂತೇರೊ, ಶೈನಲ್ ಪತ್ರಾವೊ ಹಾಡಿದರು. ಎರಿಕ್ ಓಝಾರಿಯೋ ರಾಗ ಸಂಯೋಜಿಸಿ, ನಿರ್ದೇಶಿಸಿದರು. ರೈನಾ ಸಿಕ್ವೇರಾ ಸಹ ನಿರ್ದೇಶನಗೈದರು.
ಕವಿಗಳಾದ ರೊನಿ ಕ್ರಾಸ್ತಾ, ಟೈಟಸ್ ನೊರೊನ್ಹಾ, ಫ್ಲಾವಿಯಾ ಆಲ್ಬುಕರ್ಕ್, ಫೆಲ್ಸಿ ದೆರೆಬೈಲ್, ಫ್ಲಾವಿಯಾ ಕಾರ್ಕಳ, ಜೊಸ್ಸಿ ಪಿಂಟೊ, ಲವಿ ಗಂಜಿಮಠ, ನವೀನ್ ಪಿರೇರಾ, ಡಾ. ಫ್ಲಾವಿಯಾ ಕ್ಯಾಸ್ತೆಲಿನೊ ಕವಿತೆಗಳನ್ನು ವಾಚಿಸಿದರು.
ಕೊಂಕಣಿ ಗಾಯಕಿ ಗೋವಾದ ಲೊರ್ನಾ ಲೂಯಿ ಕೊರ್ಡೆರೊ ಅವರ ಪರವಾಗಿ ಮಾಂಡ್ ಸೊಭಾಣ್‌ನ ನಾಲ್ಕನೇ ಜೀವಮಾನ ಸಾಧನೆ ಪುರಸ್ಕಾರ ನೀಡಲಾಯಿತು. ರೋಶನ್ ಬೇಳಾ, ಸಂಜಯ್ ರಾಡ್ರಿಗಸ್, ಫ್ಲೊಯ್ಡ್ ಪಿರೇರಾ, ಸಚಿನ್ ಸಿಕ್ವೇರಾ, ಉಮೆಶ್ ಇಡ್ಯಾ, ಸುನೀಲ್ ಕುಮಾರ್, ಪ್ರಜ್ವಲ್ ಪ್ರೊಂತೆರೊ ಸಂಗೀತದಲ್ಲಿ ಸಹಕರಿಸಿದರು.
ಕೊಮಿಡಿ ಕಂಪೆನಿಯ ಸಹವರ್ತಿಗಳಾದ ನೆಲ್ಲು ಪೆರ್ಮನ್ನೂರು, ಮರಿಯಾ ಡಿಸೋಜ ವಾಮಂಜೂರು ಮತ್ತು ಸಂದೀಪ್ ಮಸ್ಕರೇನ್ಹಸ್ ಶಕ್ತಿನಗರ ಕಾರ್ಯಕ್ರಮ ನಿರೂಪಿಸಿದರು.