ನ್ಯಾಷನಲ್ ಟ್ಯುಟೋರಿಯಲ್‌ನಲ್ಲಿ ಪರಿಸರ ದಿನಾಚರಣೆ

ಮಂಗಳೂರು, ಜೂ.೭: ಶುದ್ಧ ಆಮ್ಲಜನಕಕ್ಕೆ, ಸ್ವಚ್ಛ ಪರಿಸರಕ್ಕೆ, ಮೋಡ ಕಟ್ಟುವಿಕೆಗೆ, ತಂಪು ವಾತಾವರಣಕ್ಕೆ, ಸಾಕಷ್ಟು ಮಳೆಯಾಗುವುದಕ್ಕೆ, ಸಕಲ ಜೀವಜಲ ರಾಶಿಗೆ ಹಸಿರೇ ಮೂಲವಾಗಿದೆ. ಹಾಗಾಗಿ ಗಿಡಮರಗಳನ್ನು ಬೆಳೆಸುವುದರ ಮೂಲಕ ಪರಿಸರ ದಿನಾಚರಣೆಗೆ ಅರ್ಥ ಕಲ್ಪಿಸುವಂತಾಗಬೇಕು ಎಂದು ನ್ಯಾಷನಲ್ ಟ್ಯುಟೋರಿಯಲ್‌ನ ಪ್ರಾಂಶುಪಾಲ ಯು. ಎಚ್.ಖಾಲಿದ್ ಉಜಿರೆ ಹೇಳಿದರು.
ನ್ಯಾಷನಲ್ ಟ್ಯುಟೋರಿಯಲ್‌ನ ಎಸೆಸೆಲ್ಸಿ ತರಗತಿಯ ಪ್ರಾರಂಭೋತ್ಸವದ ಸಂದರ್ಭ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವರ್ಷದ ಮೊದಲ ವಿದ್ಯಾರ್ಥಿ ಅಸ್ಪಾನ್‌ಗೆ ಗಿಡವನ್ನು ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಮ್ಯಾನೇಜರ್ ಅನಿತಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವಿದ್ಯಾ ವಂದಿಸಿದರು.
Next Story





