ಪ್ಯಾರಾ ಶೂಟಿಂಗ್ ವಿಶ್ವಕಪ್: ವಿಶ್ವ ದಾಖಲೆಯೊಂದಿಗೆ ಚಿನ್ನ ಜಯಿಸಿದ ಅವನಿ ಲೇಖರ

ಹೊಸದಿಲ್ಲಿ, ಜೂ.7: ಫ್ರಾನ್ಸ್‌ನಲ್ಲಿ ಮಂಗಳವಾರ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 10 ಮೀ.ಏರ್ ರೈಫಲ್ ಸ್ಟಾಂಡಿಂಗ್ ಎಸ್‌ಎಚ್1ರಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೇಖರ ವಿಶ್ವ ದಾಖಲೆಯ ಸ್ಕೋರ್ (250.6)ನೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
20ರ ಹರೆಯದ ಶೂಟರ್ ತನ್ನದೇ ವಿಶ್ವ ದಾಖಲೆ ಸ್ಕೋರ್(249.6)ಅನ್ನು ಮುರಿದರು. ಈ ಮೂಲಕ 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡರು.
ಪೊಲ್ಯಾಂಡ್‌ನ ಎಮಿಲಿಯಾ (247.6)ಹಾಗೂ ಸ್ವೀಡನ್‌ನ ಅನ್ನಾ ನೊರ್ಮಾನ್(225.6)ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಲೇಖರ ಕಳೆದ ವರ್ಷ ಆಗಸ್ಟ್‌ನಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಎಚ್‌ಎಸ್1 ವಿಭಾಗದಲ್ಲಿ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. ಆ ನಂತರ ಮಹಿಳೆಯರ 50 ಮೀ.ರೈಫಲ್ 3 ಪೊಸಿಶನ್ಸ್ ಎಚ್‌ಎಸ್1 ಇವೆಂಟ್‌ನಲ್ಲಿ ಕಂಚು ಜಯಿಸಿದರು.
Next Story