ಜಾಗತಿಕ ಸಾಮಾಜಿಕ- ಆರ್ಥಿಕ ಸಮಸ್ಯೆಗಳ ಬಗ್ಗೆ ಜಂಟಿ ಕ್ರಮಕ್ಕೆ ನೋಬೆಲ್ ಪುರಸ್ಕೃತರ, ತಜ್ಞರ ಆಗ್ರಹ

ರಿಯಾದ್, ಜೂ.7: ಕೋವಿಡ್ ಸಾಂಕ್ರಾಮಿಕದ ನಿಯಂತ್ರಣಕ್ಕೆ ಒಗ್ಗೂಡಿ ಕಾರ್ಯನಿರ್ವಹಿಸಿದ ರೀತಿಯಲ್ಲಿಯೇ ಜಾಗತಿಕ ಸಾಮಾಜಿಕ-ಆರ್ಥಿಕ ಮತ್ತು ಆರೋಗ್ಯದ ಸವಾಲುಗಳನ್ನು ಎದುರಿಸಲು ಜಂಟಿ ಕ್ರಮ ಕೈಗೊಳ್ಳುವಂತೆ ವಿಶ್ವದ ಮುಖಂಡರು , ಸಂಘಟನೆಗಳು ವ್ಯಕ್ತಿಗಳನ್ನು ನೋಬೆಲ್ ಪ್ರಶಸ್ತಿ ಪುರಸ್ಕೃತರು ಮತ್ತು ತಜ್ಞರು ಆಗ್ರಹಿಸಿದ್ದಾರೆ.
ಸೌದಿ ಅರೆಬಿಯಾದ ಅಲ್ಉಲಾ ನಗರದಲ್ಲಿ ನಡೆದ ‘ನೋಬೆಲ್ ಪುರಸ್ಕೃತರ ಮತ್ತು ಸ್ನೇಹಿತರ 2022 ಹೆಗ್ರಾ ಸಮಾವೇಶ’ ದಲ್ಲಿ ‘ಯುನೈಟಿಂಗ್ ದಿ ವರ್ಲ್ಸ್: ಈಸ್ ಎ ಕಾಮನ್ ಕಾಸ್ ವಿ ಮಿಸ್? ಎಂಬ ವಿಷಯದಲ್ಲಿ ನಡೆದ ಚರ್ಚೆಯಲ್ಲಿ ಈ ಆಗ್ರಹ ವ್ಯಕ್ತವಾಗಿದೆ. ಶಾಂತಿ, ಅರ್ಥಶಾಸ್ತ್ರ, ಸಾಹಿತ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ ಮತ್ತು ಔಷಧ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದವರು, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದು ಜಗತ್ತಿನ ಪ್ರಮುಖ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು ಹಾಗೂ ಮಾನವೀಯತೆಯ ಸ್ಥಿತಿಯನ್ನು ಸುಧಾರಿಸುವ ಬಗ್ಗೆ ಸಲಹೆ ನೀಡಿದರು. ಶೂರಾ ಸಮಿತಿ ಸದಸ್ಯೆ ಮಹಾ ಅಲ್ಸೆನನ್, 2019ರ ಲೋ’ರಿಯಲ್ ಯುನೆಸ್ಕೊ ಫಾರ್ ವುಮೆನ್ ಇನ್ ಸೈಯನ್ಸ್ ಪ್ರಶಸ್ತಿ ಪಡೆದ ಪ್ರೊ. ಕರೇನ್ ಹಾಲ್ಬರ್ಗ್, 2007ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಪ್ರೊ. ಮೋಹನ್ ಮುನಸಿಂಘೆ ಚರ್ಚೆಯಲ್ಲಿ ಭಾಗವಹಿಸಿದ್ದರು.
ಬದಲಾಗುತ್ತಿರುವ ಜಗತ್ತಿನಲ್ಲಿ ವೈಯಕ್ತಿಕ ಸಂವಹನವು ಪರಿಣಾಮಕಾರಿಯಾಗಿದೆ ಮತ್ತು ಪ್ರಪಂಚ ಎದುರಿಸುತ್ತಿರುವ ಸವಾಲುಗಳಿಗೆ ಪ್ರತಿಯಾಗಿ ಜಂಟಿ ಕ್ರಿಯೆಯನ್ನು ಸಶಕ್ತಗೊಳಿಸಲು ಇದನ್ನು ಬಳಸಬಹುದಾಗಿದೆ. ಇಂದು ನಾವು ವಿಭಿನ್ನ ಸಂಸ್ಕೃತಿಗೆ ಸೇರಿದವರಾಗಿದ್ದರೂ ನಮ್ಮ ಸಮಾನರು ಮತ್ತು ನಮ್ಮ ಸಮಸ್ಯೆ, ಕಾರಣ ಒಂದೇ ರೀತಿಯದ್ದಾಗಿದೆ . ನಮಗೆ ಸಾಮಾನ್ಯ ಸಮಸ್ಯೆಗಳಿವೆ ಮತ್ತು ಈ ಸಮಸ್ಯೆಯನ್ನು ನಿಭಾಯಿಸಲು ನಮಗೆ ಮಾರ್ಗ ತಿಳಿದಿದ್ದರೆ ಆ ಜ್ಞಾನವನ್ನು ನಾವು ಇತರರೊಂದಿಗೆ ಹಂಚಿಕೊಳ್ಳಬಹುದು. ಸಂಶೋಧಕರಾಗಿ ನಾವು ಅದನ್ನು ಅಧ್ಯಯನ ನಡೆಸಬೇಕು ಮತ್ತು ಯಾವಾಗಲೂ ಸರಕಾರದ ಪ್ರಭಾವ ಮತ್ತು ಕ್ರಿಯೆಗಳ ಬಗ್ಗೆ ಗಮನ ಹರಿಸುವುದಲ್ಲ ಎಂದು ಅಲ್ಸೆನನ್ ಹೇಳಿದರು.
ಸೌದಿ ಅರೆಬಿಯಾವನ್ನು ಉದಾಹರಿಸಿದ ಅವರು, ಸೌದಿ ಅರೆಬಿಯಾ ಮುಚ್ಚಿದ ದೇಶವಾಗಿದೆ ಮತ್ತು ಅದರ ಜನರು ಹೊರಗಿನವರನ್ನು ಸ್ವಾಗತಿಸುತ್ತಿಲ್ಲ ಎಂದು ಈ ಹಿಂದೆ ಜನರು ಭಾವಿಸುತ್ತಿದ್ದರು. ಆದರೆ ಇಂದು ಪ್ರವಾಸಿಗರು ಅಥವಾ ಕೆಲಸಕ್ಕೆ ಬರುವ ಜನರೊಂದಿಗೆ ಮುಖಾಮುಖಿ ಭೇಟಿ, ವ್ಯವಹಾರ ನಡೆಸುತ್ತಾರೆ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸಂವಹನ ಸಾಧ್ಯವಾಗಿದೆ. ದೇಶಗಳು ಸೌದಿ ಅರೆಬಿಯಾವನ್ನು ವ್ಯಕ್ತಿಗಳ ಮೂಲಕ ಅರಿತುಕೊಂಡಿದ್ದಾರೆ . ಈಗ ನಮ್ಮ ದೇಶದ ಬಗ್ಗೆ, ನಮ್ಮ ಜನರ ಬಗ್ಗೆ ಅವರು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಈಗ ಜನರು ನಮ್ಮನ್ನು ವಿಭಿನ್ನ ದೃಷ್ಟಿಯಲ್ಲಿ ನೋಡುತ್ತಾರೆ ಎಂದರು.
ಸಾಮೂಹಿಕ ಹೊಣೆಗಾರಿಕೆಗೆ ಕೋವಿಡ್-19 ಲಸಿಕೆ ಅತ್ಯುತ್ತಮ ನಿದರ್ಶನವಾಗಿದೆ ಮತ್ತು ಸಾಂಕ್ರಾಮಿಕವನ್ನು ನಿಯಂತ್ರಿಸಲು ವಿಶ್ವವೇ ಒಂದಾಗಿ ಕೆಲಸ ಮಾಡಿದೆ ಎಂದು ಹಾಲ್ಬರ್ಗ್ ಹೇಳಿದರು. ಮುಂದಿನ 14 ತಿಂಗಳುಗಳಲ್ಲಿ ನಾವು ಅಲ್ಉಲಾದಲ್ಲಿ ಕಾರ್ಯಗತಗೊಳಿಸಲಿರುವ ಸ್ಪಷ್ಟವಾದ ಉಪಕ್ರಮಗಳಿಗೆ ನಿರ್ಣಾಯಕ ಫಲಿತಾಂಶಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಲ್ಉಲಾ ರಾಯಲ್ ಕಮಿಷನ್ನ ಗಮ್ಯಸ್ಥಾನ ನಿರ್ವಹಣಾ ವ್ಯವಸ್ಥಾಪಕಿ ಖೊಲೌದ್ ಅಲ್ಮನಿಯಾ ಹೇಳಿದರು.







