Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹೀಗೊಂದು ಭಯೋತ್ಪಾದನಾ ರಸ್ತೆ!

ಹೀಗೊಂದು ಭಯೋತ್ಪಾದನಾ ರಸ್ತೆ!

ವಾರ್ತಾಭಾರತಿವಾರ್ತಾಭಾರತಿ8 Jun 2022 12:05 AM IST
share
ಹೀಗೊಂದು ಭಯೋತ್ಪಾದನಾ ರಸ್ತೆ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಕರಾವಳಿ ಭಾಗದ ಗ್ರಾಮೀಣ ಪ್ರದೇಶಗಳು ಕಳಪೆ ರಸ್ತೆಗಳಿಗಾಗಿ ಕುಖ್ಯಾತಿಯನ್ನು ಪಡೆದಿವೆ. ಈ ರಸ್ತೆಗಳಲ್ಲಿ ಸಾಗುವ ಮಂದಿ ಸ್ಥಳೀಯ ಜನಪ್ರತಿನಿಧಿಗಳಿಗೆ ಶಾಪವನ್ನು ಹಾಕುತ್ತಾ ಮುಂದೆ ಸಾಗುತ್ತಾರೆ. ಉಡುಪಿ ಜಿಲ್ಲೆಯ ಕಳಪೆ ಮೂಲಭೂತ ಸೌಕರ್ಯಗಳು, ಕಳಪೆ ರಸ್ತೆಗಳಿಂದ ರೋಸಿದ ಅಲ್ಲಿನ ಸ್ಥಳೀಯ ಕೆಲ ಯುವಕರು ಕೊನೆಗೆ ಕಾಡಿನ ದಾರಿ ಹಿಡಿದು ‘ನಕ್ಸಲೀಯರು’ ಎಂದು ಗುರುತಿಸಲ್ಪಟ್ಟಿದ್ದು ಇತಿಹಾಸ. ಕಾರ್ಕಳದಲ್ಲಿ ಕಾಡಿನ ಕಡೆಗೆ ತೆರೆದ ಒಂದು ಅಗೋಚರ ರಸ್ತೆಯ ಮೇಲೆ ಇಲ್ಲಿನ ಕಾನೂನು ವ್ಯವಸ್ಥೆ ಸದಾ ಕಣ್ಣಿಟ್ಟು ಕಾಯುತ್ತಿದೆ. ಇಂತಹ ಕಾರ್ಕಳದಲ್ಲಿ ರಾತ್ರೋರಾತ್ರಿ ಭಯೋತ್ಪಾದನಾ ರಸ್ತೆಯೊಂದು ನಿರ್ಮಾಣಗೊಂಡು ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿದೆ. ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಗಿರಿಗೆ ಹೋಗುವ ಪಂಚಾಯತ್ ರಸ್ತೆಗೆ ‘ನಾಥೂರಾಮ್ ಗೋಡ್ಸೆ ರಸ್ತೆ’ ಎಂದು ದುಷ್ಕರ್ಮಿಗಳು ನಾಮಕರಣ ಮಾಡಿರುವುದು ಮಾಧ್ಯಮಗಳಲ್ಲಿ ರಾರಾಜಿಸಿತು. ಮಳೆಗಾಲದಲ್ಲಿ ತಲೆಯೆತ್ತುವ ವಿಷದ ಅಣಬೆಗಳಿಗೆ ಸ್ಪರ್ಧಿಸುವಂತೆ ಒಂದು ಬೆಳಗ್ಗೆ ನೋಡಿದರೆ ಈ ರಸ್ತೆಯ ಪಕ್ಕ ‘ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ’ ಎಂಬ ನಾಮ ಫಲಕ ತಲೆಯೆತ್ತಿತ್ತು. ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಗ್ರಾಪಂ ಅಧಿಕಾರಿಗಳು ಸೋಮವಾರ ಆ ನಾಮಫಲಕವನ್ನು ತೆರವುಗೊಳಿಸಿದ್ದಾರೆ.

 ನಾಮಫಲಕ ತೆರವಿನೊಂದಿಗೆ ಪ್ರಕರಣವನ್ನು ಮುಗಿಸಲು ಇಲ್ಲಿನ ಜನಪ್ರತಿನಿಧಿಗಳು ಯತ್ನಿಸುತ್ತಿದ್ದಾರಾದರೂ, ಇದು ಕೇವಲ ನಾಮಫಲಕಕ್ಕೆ ಸಂಬಂಧಿಸಿದ ಪ್ರಕರಣ ಅಲ್ಲ. ನಾಮಫಲಕದಲ್ಲಿ ಒಬ್ಬ ನಿರ್ದಿಷ್ಟ ಧಾರ್ಮಿಕ ಮುಖಂಡನ ಅಥವಾ ಯಾವುದೋ ಪಕ್ಷದ ನಾಯಕನ ಹೆಸರಿದ್ದರೆ ಇದು ಹೆಚ್ಚು ಚರ್ಚೆಯಾಗುತ್ತಿರಲಿಲ್ಲ. ಆದರೆ ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ, ಉಗ್ರ ವಾದಿ ಎಂದು ಕುಖ್ಯಾತನಾಗಿದ್ದ, ಮಹಾತ್ಮಾಗಾಂಧೀಜಿಯ ಕಗ್ಗೊಲೆಗಾಗಿ ನೇಣುಗಂಬ ಏರಿದ ದುಷ್ಕರ್ಮಿಯ ಹೆಸರನ್ನು ಈ ನಾಮಫಲಕದಲ್ಲಿ ಬರೆಯಲಾಗಿತ್ತು. ಕಾರ್ಕಳ ತಾಲೂಕಿನ ಬೋಳ ಎನ್ನುವ ಒಂದು ಕುಗ್ರಾಮದಲ್ಲಿ ಈ ಭಯೋತ್ಪಾದಕನ ಹೆಸರನ್ನು ಒಂದು ರಸ್ತೆಗೆ ಇಡಬೇಕಾದರೆ, ಅದರ ಉದ್ದೇಶವೇನು? ಭಾರತ ದೇಶದ ಪಾಲಿನ ಕಳಂಕವೆಂದೇ ಗುರುತಿಸಲ್ಪಡುವ, ಉತ್ತರ ಭಾರತದ ಒಬ್ಬ ದುಷ್ಕರ್ಮಿಯ ಹೆಸರು ಏಕಾಏಕಿ ಕಾರ್ಕಳದ ಗ್ರಾಮೀಣ ಪ್ರದೇಶದ ರಸ್ತೆಯ ನಾಮಫಲಕದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದು ನಿರ್ಲಕ್ಷಿಸುವ ಕೆಲಸ ಖಂಡಿತ ಅಲ್ಲ.

ಯಾಕೆಂದರೆ ಈ ಭಯೋತ್ಪಾದಕನ ಹೆಸರನ್ನು ಸ್ಥಳೀಯ ಗ್ರಾಮಸ್ಥರು ಕೇಳಿದ್ದು ತೀರಾ ಕಡಿಮೆ. ಇದರ ಹಿಂದೆ ಹೊರಗಿನವರ ಕೈವಾಡವೂ ಇರುವಂತಿದೆ. ಇದೇ ಪ್ರದೇಶದಲ್ಲಿ ‘ದುಡಿವ ವರ್ಗಕ್ಕೆ ಜಯವಾಗಲಿ, ಲಾಲ್ ಸಲಾಂ’ ಎಂಬ ನಾಲ್ಕೈದು ಕರಪತ್ರಗಳು ಕಾಣಿಸಿಕೊಂಡರೆ ತಕ್ಷಣವೇ ಪೊಲೀಸ್ ತುಕಡಿಗಳು ಸ್ಥಳಕ್ಕೆ ಆಗಮಿಸಿ ‘ಕೂಂಬಿಂಗ್’ ಆರಂಭಿಸುತ್ತವೆ. ಪತ್ರಿಕೆಗಳು ‘ಕಾರ್ಕಳದಲ್ಲಿ ಕಾಣಿಸಿಕೊಂಡ ನಕ್ಸಲರು’ ಎಂಬ ತಲೆಬರಹ ಹಾಕಿ, ಮುಖಪುಟದಲ್ಲಿ ಸುದ್ದಿಯನ್ನು ಪ್ರಕಟಿಸುತ್ತವೆ. ಹೀಗಿರುವಾಗ, ನಾಥೂರಾಮ್ ಗೋಡ್ಸೆ ಎನ್ನುವ ಭಯೋತ್ಪಾದಕನ ಹೆಸರು ರಸ್ತೆಯ ನಾಮಫಲಕದಲ್ಲಿ ಕಾಣಿಸಿಕೊಂಡಾಗ ಅದರ ಹಿಂದಿರುವವರು ಯಾರು? ಅವರ ಉದ್ದೇಶ ಏನು? ಎನ್ನುವುದನ್ನು ತನಿಖೆ ನಡೆಸಿ, ಶಂಕಿತ ಉಗ್ರರನ್ನು ಬಂಧಿಸುವುದು ಉಡುಪಿ ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಮಾತ್ರವಲ್ಲ, ನಾಡಿನ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಬೆಂಗಳೂರಿನಲ್ಲಿ ಓವರ್ ಬ್ರಿಡ್ಜ್ ಒಂದರ ಮೇಲೆ ಸಾವರ್ಕರ್ ಹೆಸರು ಬರೆದಿರುವುದಕ್ಕಿಂತಲೂ ಗಂಭೀರವಾದುದು ಇದು. ಸಾವರ್ಕರ್‌ಗೆ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಭಾಗಶಃ ಹೆಗ್ಗಳಿಕೆಯಾದರೂ ಇದೆ. ಆ ಬಳಿಕ ಬ್ರಿಟಿಷರಿಗೆ ಪದೇ ಪದೇ ಕ್ಷಮಾಯಾಚನೆ ಪತ್ರ ಬರೆದು, ಬ್ರಿಟಿಷರು ಕೊಟ್ಟ ಪಿಂಚಣಿಯೊಂದಿಗೆ ತಮ್ಮ ಬದುಕು ಸವೆಸಿದವರು. ಗಾಂಧೀಜಿಯ ಕೊಲೆಯ ಸಂಚು ರೂಪಿಸಿದ ಆರೋಪಿಗಳಲ್ಲಿ ಇವರು ಪ್ರಮುಖರಾಗಿದ್ದರೂ, ಸರಿಯಾದ ಸಾಕ್ಷಾಧಾರಗಳಿಲ್ಲದೆ ಬಿಡುಗಡೆಗೊಂಡರು. ಆದರೆ ನಾಥೂರಾಮ್ ಗೋಡ್ಸೆಗೆ ಸ್ವಾತಂತ್ರ ಹೋರಾಟದೊಂದಿಗೆ ಆಗಲಿ, ಜನಸಾಮಾನ್ಯರ ಬದುಕಿನ ಜೊತೆಗಾಗಲಿ, ಯಾವುದೇ ಸಾಮಾಜಿಕ ಹೋರಾಟದ ಜೊತೆಗಾಗಲಿ ಸಂಬಂಧವಿಲ್ಲ. ಆತ ದೇಶಕ್ಕೆ ಪರಿಚಯವಾದದ್ದೇ ಗಾಂಧೀಜಿಯನ್ನು ಕೊಲೆಗೈದ ಬಳಿಕ. ಕಾರ್ಕಳದಂತಹ ಗ್ರಾಮೀಣ ಪ್ರದೇಶಕ್ಕೆ ಆಪ್ತವಾಗುವ ಯಾವ ಸಾಮಾಜಿಕ ಅಥವಾ ರಾಜಕೀಯ ಹೋರಾಟದ ಹಿನ್ನೆಲೆಯೂ ಆತನಿಗಿಲ್ಲ. ‘ಗಾಂಧೀಜಿಯನ್ನು ಕೊಂದ’ ಹೆಗ್ಗಳಿಕೆಗಾಗಿ ನೇಣುಗಂಬವೇರಿದ್ದು ಬಿಟ್ಟರೆ, ಈತನಲ್ಲಿ ಯುವಕರಿಗೆ ಆದರ್ಶವಾಗಬಹುದಾದ ಯಾವ ಗುಣಲಕ್ಷಣಗಳೂ ಇಲ್ಲ. ಹೀಗಿರುವಾಗ, ಈತನ ಹೆಸರಲ್ಲಿ ಏಕಾಏಕಿ ಇಲ್ಲಿ ನ ರಸ್ತೆಯೊಂದಕ್ಕೆ ನಾಮಫಲಕವೊಂದು ಅಳವಡಿಕೆಯಾಗಿರುವುದರ ಹಿಂದೆ ಯಾರಿದ್ದಾರೆ? ಅವರ ಗುರಿಯೇನು? ಎನ್ನುವುದರ ಬಗ್ಗೆ ತನಿಖೆ ನಡೆಯಬೇಕಾಗಿದೆ.

ಈ ಪ್ರಕರಣದಿಂದ, ಗಾಂಧೀಜಿಯ ಕೊಲೆಯನ್ನು ಸಮರ್ಥಿಸುವ ಉಗ್ರಗಾಮಿಗಳು, ಭಯೋತ್ಪಾದಕರು ಕಾರ್ಕಳದಲ್ಲಿ ಅಡಗಿಕೊಂಡಿದ್ದಾರೆ ಎನ್ನುವುದು ಬೆಳಕಿಗೆ ಬರುತ್ತದೆ. ಈ ಉಗ್ರವಾದಿಗಳನ್ನು ಬಂಧಿಸದೇ ಇದ್ದರೆ ಮುಂದೊಂದು ದಿನ, ಗೋಡ್ಸೆಯ ಸಂತಾನಗಳು ಉಡುಪಿ ಮಾತ್ರವಲ್ಲ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಉಗ್ರವಾದಿಗಳ ನೆಲೆಯಾಗಿ ಪರಿವರ್ತಿಸಬಹುದು. ಮಹಾತ್ಮಾ ಗಾಂಧೀಜಿ ರಸ್ತೆಗಳು ‘ಎಂ. ಜಿ. ರಸ್ತೆ’ಗಳಾಗಿ ಜನರಿಂದ ದೂರವಾಗುತ್ತಿರುವ ಹೊತ್ತಿನಲ್ಲೇ, ಗೋಡ್ಸೆ ರಸ್ತೆಯೊಂದನ್ನು ತೆರೆದು, ನಮ್ಮ ಯುವಕರನ್ನು ಆ ರಸ್ತೆಯ ಮೂಲಕ ‘ಕಗ್ಗೊಲೆಗಾರರನ್ನಾಗಿ’ಸುವ ಪ್ರಯತ್ನವೊಂದು ದೇಶಾದ್ಯಂತ ನಡೆಯುತ್ತಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ತರಬೇತಿಗಳು ನಡೆಯುತ್ತಿವೆ ಎನ್ನುವುದು ಮಾಧ್ಯಮಗಳಲ್ಲೂ ವರದಿಯಾಗಿವೆ. ಕೊಡಗು ಇತ್ತೀಚೆಗೆ ಈ ತರಬೇತಿಗಾಗಿ ಸುದ್ದಿಯಾಗಿತ್ತು. ಕಲಬುರ್ಗಿ, ಗೌರಿಲಂಕೇಶ್ ಮೊದಲಾದವರ ಕೊಲೆಗಾರರು ನಾಥೂರಾಂ ಗೋಡ್ಸೆಯ ರಸ್ತೆಯಲ್ಲಿ ತರಬೇತಿಗಳನ್ನು ಪಡೆದು ಬಂದವರು. ನಮ್ಮ ಯುವಕರನ್ನು ದಾರಿತಪ್ಪಿಸುವುದಕ್ಕಾಗಿಯೇ ನಿರ್ಮಾಣಗೊಂಡಿರುವ ರಸ್ತೆಯ ಬಗ್ಗೆ ಸಮಾಜ ಎಚ್ಚರಗೊಳ್ಳಲೇಬೇಕಾಗಿದೆ. ನಾಥೂರಾಮ್ ಗೋಡ್ಸೆ ನಾಮಫಲಕದ ಮೂಲಕ, ಒಂದು ಸಿದ್ಧಾಂತದ ರಸ್ತೆಯನ್ನು ತೆರೆಯುವ ಪ್ರಯತ್ನ ನಡೆಯುತ್ತಿರುವುದರ ಬಗ್ಗೆ ನಾವು ಜಾಗರೂಕರಾಗಿರಬೇಕು.

ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ಬಂಡೆದ್ದು ನಕ್ಸಲ್‌ವಾದದ ರಸ್ತೆ ಹಿಡಿದು ಹೋದ ಯುವಕರಿಗಿಂತಲೂ ನಾಥೂರಾಮ್ ರಸ್ತೆಯಹಿಂಬಾಲಕರು ಅಪಾಯಕಾರಿಗಳು. ಇವರಿಗೆ ದೇಶದ ಪ್ರಜಾಸತ್ತೆ, ಸ್ವಾತಂತ್ರ, ಜನಸಾಮಾನ್ಯರ ಬದುಕಿನ ಬಗ್ಗೆ ಎಳ್ಳಷ್ಟೂ ಆಸಕ್ತಿಯಿಲ್ಲ. ಹಿಂದುತ್ವದ ಹೆಸರಿನಲ್ಲಿ ಪ್ರಜಾಸತ್ತೆಯನ್ನು ಅಪಹರಿಸಿ ದೇಶವನ್ನು ಉಳ್ಳವ ರ ಮತ್ತು ಪುರೋಹಿತರ ಕೈಗೆ ಒಪ್ಪಿಸುವುದು ಈ ಭಯೋತ್ಪಾದಕರ ಗುರಿ. ಗ್ರಾಮೀಣ ಪ್ರದೇಶದ ಅಮಾಯಕ ಯುವಕರ ತಲೆಗೆ ಈ ಭಯೋತ್ಪಾದನೆಯನ್ನು ತುಂಬಿ ಅವರನ್ನು ದುರುಪಯೋಗ ಪಡಿಸಿಕೊಳ್ಳುವ ಶಕ್ತಿಗಳನ್ನು ಗುರುತಿಸಿ ತಕ್ಷಣ ಅವರನ್ನು ಬಂಧಿಸುವುದು ಗೃಹ ಇಲಾಖೆಯ ಕರ್ತವ್ಯವಾಗಿದೆ. ನಾಥೂರಾಂಗೋಡ್ಸೆಯ ರಸ್ತೆ ಕಾಮಗಾರಿಗಳ ಪ್ರಯತ್ನಗಳನ್ನು ವಿಫಲಗೊಳಿಸಿ, ದೇಶಾದ್ಯಂತ ಮಹಾತ್ಮಗಾಂಧಿ ರಸ್ತೆಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮ ಸರಕಾರದ್ದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X