ತರಕಾರಿ ಸೊಪ್ಪಿನ ದರ ಏರಿಕೆ: ‘ಮೆನು’ ಬದಲಿಸಿದ ಕೆಎಫ್ಸಿ

KFC
ಸಿಡ್ನಿ, ಜೂ.7: ಕರಿದ ಕೋಳಿಖಾದ್ಯ ಮಾರಾಟದ ಖ್ಯಾತ ಸಂಸ್ಥೆ ಕೆಎಫ್ಸಿ ಇದೀಗ ಆಸ್ಟ್ರೇಲಿಯಾದಲ್ಲಿ ತನ್ನ ಬರ್ಗರ್ನ ಕಚ್ಛಾವಸ್ತುಗಳಲ್ಲಿ ಬದಲಾವಣೆ ತರುವ ಅನಿವಾರ್ಯತೆ ಒದಗಿದೆ. ಬರ್ಗರ್ ನಲ್ಲಿ ತರಕಾರಿ ಸೊಪ್ಪುಗಳ ಬದಲು ಕ್ಯಾಬೇಜ್ ಅನ್ನು ಬಳಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ ಮತ್ತು ಪ್ರವಾಹದ ಸ್ಥಿತಿ ಉಂಟಾಗಿರುವುದು ಇದಕ್ಕೆ ಕಾರಣ. ಪ್ರವಾಹದಿಂದ ತರಕಾರಿ ಸೊಪ್ಪಿನ ಬೆಳೆ ಸಂಪೂರ್ಣ ನಾಶವಾಗಿದೆ. ಇತ್ತೀಚಿನ ದಿನಗಳಲ್ಲಿ ತರಕಾರಿ ಸೊಪ್ಪಿನ ದರದಲ್ಲಿ 300%ದಷ್ಟು ಏರಿಕೆಯಾಗಿದೆ. ಆದ್ದರಿಂದ ಈಗ ಸೊಪ್ಪಿನ ಜತೆಗೆ ಕ್ಯಾಬೇಜನ್ನು ಬಳಸುತ್ತಿದ್ದೇವೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
ಉಕ್ರೇನ್ ಮೇಲಿನ ರಶ್ಯದ ಆಕ್ರಮಣವೂ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ರಶ್ಯದಿಂದ ರಸಗೊಬ್ಬರಗಳ ಪೂರೈಕೆ ನಿಂತು ಹೋಗಿರುವುದರಿಂದ ತರಕಾರಿ ಸೊಪ್ಪುಗಳ ಕೊರತೆಯಾಗಿದೆ ಎಂದು ಮೂಲಗಳು ಹೇಳಿವೆ.
Next Story





