ಪ್ಯಾರಾ ಶೂಟಿಂಗ್ ವಿಶ್ವಕಪ್ನಲ್ಲಿ ಚಿನ್ನ ಗೆದ್ದ ಕರ್ನಾಟಕದ ಶ್ರೀಹರ್ಷ ದೇವರಡ್ಡಿ ರಾಮಕೃಷ್ಣ

ಶ್ರೀಹರ್ಷ ದೇವರಡ್ಡಿ ರಾಮಕೃಷ್ಣ (Photo: Twitter/@Media_SAI)
ಪ್ಯಾರಿಸ್: ಶ್ರೀಹರ್ಷ ದೇವರಡ್ಡಿ ರಾಮಕೃಷ್ಣ ಅವರು 'ಚಾಟೆರೊಕ್ಸ್ ಪ್ಯಾರಾ ಶೂಟಿಂಗ್ ವಿಶ್ವಕಪ್' ನಲ್ಲಿ 10 ಮೀಟರ್ ಏರ್ ರೈಫಲ್ ಎಸ್ಎಚ್ 2 ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಆ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೆ ಕೋಟಾ ಗಳಿಸಿದ ಎರಡನೇ ಭಾರತೀಯ ಪ್ಯಾರಾ ಶೂಟರ್ ಆಗಿ ಹೊರಹೊಮ್ಮಿದ್ದಾರೆ.
253.1 ಅಂಕ ಗಳಿಸಿದ ರಾಮಕೃಷ್ಣ ಚಿನ್ನದ ಪದಕ ಗೆದ್ದರೆ, ಸ್ಲೋವಾಕಿಯಾದ ಫ್ರಾನ್ಸೆಕ್ ಟಿರ್ಸೆಕ್ 252.6 ಅಂಕಗಳೊಂದಿಗೆ ಬೆಳ್ಳಿ ಮತ್ತು ಟಂಗುಯ್ ಡಿ ಲಾ ಫಾರೆಸ್ಟ್ 230.3 ಅಂಕದೊಂದಿಗೆ ಕಂಚು ಪಡೆದಿದ್ದಾರೆ.
ಕರ್ನಾಟಕ ಮೂಲದವರಾಗಿರುವ ಶ್ರೀ ಹರ್ಷ ಅವರ ಸಾಧನೆಗೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದು, ʼಪ್ಯಾರಾ ಶೂಟಿಂಗ್ ವಿಶ್ವಕಪ್́ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಕರ್ನಾಟಕದ ನಮ್ಮವರೇ ಆದ ಶ್ರೀಹರ್ಷ ದೇವರಡ್ಡಿ ಅವರಿಗೆ ಅಭಿನಂದನೆಗಳು. ನಾನು ಅವರ ಬಗ್ಗೆ ಹೆಮ್ಮೆಪಡುತ್ತೇನೆ ಮತ್ತು ಅವನ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ. ಅವರು ನಮ್ಮ ಯುವ ಕ್ರೀಡಾ ಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ.” ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
Congratulations to our own Sriharsha Devaraddi from Karnataka for winning gold in R4 - Mixed 10m Air Rifle Standing SH2 in #Chateauroux2022 World Cup. I am proud of him & wish him good luck for his future. He is an inspiration for our young sports persons. https://t.co/8R9V7xZq9X
— Basavaraj S Bommai (@BSBommai) June 8, 2022