ಸುಹಾಸ್‌ಗೆ ಪಿಎಚ್‌ಡಿ ಪದವಿ

ಉಡುಪಿ : ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸುಹಾಸ್ ಮಂಡಿಸಿದ ‘ಎ ಸ್ಟಡಿ ಆನ್ ಡಿಸೈನ್ ಆಂಡ್ ಅನಾಲಿಸಿಸ್ ಆಫ್ ಸರ್‌ವೈವಲ್ ಪ್ರೊಬ್ಯಾಬಿಲಿಟಿ ಮಾಡೆಲ್ಸ್’ ಮಹಾಪ್ರಬಂಧಕ್ಕೆ ಕರ್ನಾಟಕ ವಿವಿ ಡಾಕ್ಟರ್ ಆಪ್ ಪಿಎಚ್‌ಡಿ ಪದವಿ ನೀಡಿದೆ.
ಕೆವಿವಿಯ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾದ ಡಾ.ಎಸ್.ಬಿ. ಮುನೋಲಿ ಮಾರ್ಗದರ್ಶಕರಾಗಿದ್ದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಡುಪಿಯ ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಒಳಕಾಡು ಸಂಯುಕ್ತ ಹಿರಿಯ ಪ್ರಾಥಮಿಕ ಶಾಲೆ, ಪದವಿ ಪೂರ್ವ ಹಾಗೂ ಬಿಎಸ್‌ಸಿ ಪದವಿಯನ್ನು ಎಂಜಿಎಂ ಕಾಲೇಜು ಉಡುಪಿ ಮತ್ತು ಸಂಖ್ಯಾಶಾಸ್ತ್ರದಲ್ಲಿ ಎಂಎಸ್‌ಸಿ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಪಡೆದಿದ್ದರು. ಇವರು ಕಮಲಾಕ್ಷಿ ಹಾಗೂ ಪ್ರಾಣೇಶ್ ದಂಪತಿ ಪುತ್ರ ಹಾಗೂ ಉಡುಪಿ ಕರಂಬಳ್ಳಿಯ ಪ್ರಸಿದ್ದ ಕೀರ್ತನ ಕಾರರಾದ ದಿ.ಆರ್.ಶ್ರೀಶದಾಸ್ ಇವರ ಮೊಮ್ಮಗ.
Next Story