ಕಾಟಿಪಳ್ಳ ರಿಲಯನ್ಸ್ ಓವರ್‌ಸೀಸ್ ಸ್ಥಾಪನೆ

ಮಂಗಳೂರು : ಸುಮಾರು ೩೬ ವರ್ಷಗಳಿಂದ ಕಾಟಿಪಳ್ಳದ ರಿಲಯನ್ಸ್ ಯೂತ್ ಅಸೊಸಿಯೇಶನ್ (ರಿ) ಸಂಘಟನೆಯು ಶಿಕ್ಷಣ, ಆರೋಗ್ಯ, ಕ್ರೀಡೆ, ಸಾಹಿತ್ಯ ಕ್ಷೇತ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಸರದ ಜನರ ಗಮನ ಸೆಳೆದಿತ್ತು. ಇದರ ಅನೇಕ ಸದಸ್ಯರು ಕೊಲ್ಲಿರಾಷ್ಟ್ರದಲ್ಲಿ ಉನ್ನತ ಹುದ್ದೆ ಯಲ್ಲಿದ್ದು ತಮ್ಮ ಸಮಾಜ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಸೌದಿಯ ಎಲ್ಲಾ ಸದಸ್ಯರನ್ನು ಇತ್ತೀಚೆಗೆ ಒಂದೆಡೆ ಸೇರಿಸಿ ರಿಲಯನ್ಸ್ ಸಮ್ಮಿಲನ ಕಾರ್ಯಕ್ರಮವನ್ನು ನಡೆಸಲಾಯಿತು.
ಅಲ್ಲದೆ ಸೌದಿಯಲ್ಲಿಯೂ ರಿಲಯನ್ಸ್ ಓವರ್‌ಸೀಸ್ ಎಂಬ ಹೆಸರಿನಲ್ಲಿ ಸಮಿತಿಯನ್ನು ರಚಿಸಲಾಯಿತು. ಸುಮಾರು ೬೫ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಎಸ್.ಕೆ ಇಮ್ತಿಯಾಝ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಹೈಲ್ ಇಕ್ಬಾಲ್, ಕಾರ್ಯದರ್ಶಿಯಾಗಿ ಮೊಹ್ಸೀನ್, ಜೊತೆ ಕಾರ್ಯದರ್ಶಿಯಾಗಿ ಅಶ್ಫಾಕ್, ಕೋಶಾಧಿಕಾರಿಯಾಗಿ ಆಸೀಫ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಝಯಾನ್, ಸಾಹಿಲ್, ಹಫೀಫ್, ತಮೀಮ್, ಸರ್ಫರಾಝ್, ನೌಶಾನ್, ಮೆಹ್ರಾಝ್, ತೌಸೀಫ್, ಮಿಯಂದಾದ್, ಸೈಫುಲ್ಲಾ ಮುಹ್ಯುದ್ದೀನ್ ಆಯ್ಕೆಯಾದರು.