ಮರು ಮೌಲ್ಯಮಾಪನ; ಎಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಕೊಣಾಜೆಯ ಶಾಝಿನ್ ರಝಾಕ್

ಕೊಣಾಜೆ: ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶಾಝಿನ್ ಅಬ್ದುಲ್ ರಝಾಕ್ ಎಸೆಸೆಲ್ಸಿ ಫಲಿತಾಂಶದ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಪಡೆದಿದಾರೆ.
623 ಅಂಕ ಪಡೆದಿದ್ದ ಶಾಝಿನ್ ಅಬ್ದುಲ್ ರಝಾಕ್ ಮರು ಮೌಲ್ಯಮಾಪನದಲ್ಲಿ ಮತ್ತೆರಡು ಅಂಕಗಳನ್ನು ಪಡೆಯುವುದರೊಂದಿಗೆ 625ರಲ್ಲಿ 625 ಅಂಕವನ್ನು ಪಡೆದು ಶಾಲೆಯ ಇತಿಹಾಸದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಯಾಗಿ ಗುರುತಿಸಿದ್ದಾನೆ.
ವಿಜ್ಞಾನ ಪತ್ರಿಕೆಯಲ್ಲಿ 98 ದೊರೆತಿದ್ದರೆ ಉಳಿದ್ದೆಲ್ಲಾ ವಿಷಯದಲ್ಲಿ ಪೂರ್ಣ ಅಂಕ ಪಡೆದಿದ್ದು, ಮತ್ತೆ ಮರು ಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯದಲ್ಲೂ ಪೂರ್ಣ ಅಂಕ ಲಭಿಸಿದೆ. ಇದೀಗ ವಿಶ್ವಮಂಗಳ ಶಾಲಾ ಇತಿಹಾಸದಲ್ಲಿ 625 ರಲ್ಲಿ 625 ಅಂಕ ಪಡೆದ ಪ್ರಥಮ ವಿದ್ಯಾರ್ಥಿಯಾಗಿ ಗುರುತಿಸಿದ್ದಾನೆ.
ಈತ ಬೊಳಂತೂರು ಗ್ರಾಮದ ಡಾ. ಬಿರಾನ್ ಮೊಯ್ದಿನ್ ಹಾಗೂ ಶಾಹಿದಾ ಬಿರಾನ್ ಅವರ ಪುತ್ರ.
Next Story