'ತಮಿಳುನಾಡಿನಲ್ಲಿ ಅರಳಿದ ಕಮಲ' ಎಂದು ತೆಲಂಗಾಣದ ಬಿಎಸ್ಪಿ ಧ್ವಜ ಎಡಿಟ್ ಮಾಡಿ ನಗೆಪಾಟಲಿಗೀಡಾದ ಬಿಜೆಪಿ

ಬೆಂಗಳೂರು: ಕೆಲವು ಯುವಕರು ವಿದ್ಯುತ್ ಕಂಬಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾಕುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ತಮಿಳುನಾಡಿನ ಚಿತ್ರ ಎಂದು ಪ್ರತಿಪಾದಿಸಿ ಹಂಚಲಾಗುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿ ಹೆಜ್ಜೆಗುರುತು ಮೂಡಿಸುತ್ತಿದೆ ಎಂಬರ್ಥದ ಹಲವಾರು ಪೋಸ್ಟ್ ಗಳು ಈ ಚಿತ್ರದೊಂದಿಗೆ ವೈರಲ್ ಆಗಿತ್ತು. ಆದರೆ, ಇದು ತಮಿಳುನಾಡಿನ ಚಿತ್ರ ಅಲ್ಲ ಎಂದು Altnews.in ವರದಿ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಈ ಚಿತ್ರವನ್ನು ಟ್ವೀಟ್ ಮಾಡಿ ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಬಿಜೆಪಿ ಹಿಮಾಚಲ ವಕ್ತಾರ ಪ್ರಜ್ವಲ್ ಬಸ್ತಾ ಕೂಡ ಈ ಚಿತ್ರವನ್ನು ಟ್ವೀಟ್ ಮಾಡಿದ್ದು, ತಮಿಳುನಾಡು ಕೇಸರಿಮಯವಾಗುವತ್ತ ಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವೂ ಅದೇ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಕೂಡಾ ವೈರಲ್ ಆಗಿದೆ.
ಸತ್ಯ ಪರಿಶೀಲನೆ
ವೈರಲ್ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಇದು ಎಡಿಟ್ ಮಾಡಿದ ಚಿತ್ರ ಎಂದು ಹೇಳಿದ್ದಾರೆ. ಮೂಲ ಚಿತ್ರವು BSP ಧ್ವಜವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ altnews ಇದರ ಸತ್ಯ ಪರಿಶೀಲನೆ ಮಾಡಿದ್ದು, ಇದರ ಮೂಲ ಚಿತ್ರವು ತೆಲಂಗಾಣದ ಬಿಎಸ್‌ಪಿ ನಾಯಕಿ ಶಿರಿಶಾ ಸ್ವೆರೋ ಅಕಿನಪಲ್ಲಿ ಅವರ ಟ್ವೀಟ್ ನಲ್ಲಿ ಕಂಡುಬಂದಿದೆ.
ಮೇ 31 ರ ಈ ಟ್ವೀಟ್‌ನಲ್ಲಿ, ಅವರು ಇದೇ ರೀತಿಯ ಚಿತ್ರವನ್ನು ಹಂಚಿಕೊಂಡಿದ್ದರು. ಆದರೆ ಆ ಚಿತ್ರದಲ್ಲಿ ಬಿಎಸ್ಪಿ ಧ್ವಜ ಇದೆಯೇ ಹೊರತು ಬಿಜೆಪಿದ್ದಲ್ಲ. ಈ ಚಿತ್ರದೊಂದಿಗೆ ಅವರು “ನಮ್ಮ ಸಹೋದರರು ಏಣಿಯಂತೆ ಹತ್ತಿ ಜನರ ಹೃದಯದ ಮೇಲೆ ನೀಲಿ ಧ್ವಜವನ್ನು ಹಾರಿಸಿದರು” ಎಂದು ಬರೆದಿದ್ದಾರೆ.
ಇದೇ ಚಿತ್ರವನ್ನು ಎಡಿಟ್ ಮಾಡಲಾಗಿದ್ದು, ಬಿಎಸ್‌ಪಿ ಬಾವುಟ ಇರುವಲ್ಲಿ ಬಿಜೆಪಿ ಬಾವುಟವನ್ನು ಸೇರಿಸಲಾಗಿದೆ. ಅದನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ.
ಈ ಚಿತ್ರದ ಹಿನ್ನೆಲೆಯನ್ನು ಇಂಡಿಯಾ ಟುಡೆ ಕೂಡಾ ಪರಿಶೀಳನೆ ನಡೆಸಿದ್ದು, ವೈರಲ್ ಚಿತ್ರದ ಮೂಲ ಫೋಟೋ BSP ಧ್ವಜವನ್ನು ಹೊಂದಿದೆ ಎಂದು ಅದು ತನ್ನ ಫ್ಯಾಕ್ಟ್ ಚೆಕ್ ವರದಿಯಲ್ಲಿ ಹೇಳಿದೆ.
Lotus is blooming in Tamil Nadu pic.twitter.com/gN4bFDmjsd
— C T Ravi ಸಿ ಟಿ ರವಿ (@CTRavi_BJP) June 7, 2022
Lotus is blooming in Tamil Nadu
— Prajwal Busta (@PrajwalBusta) June 7, 2022
तमिलनाडु भगवामय होने की तरफ अग्रसर
संगठन गढ़े चलो, सुपंथ पर बढ़े चलो। pic.twitter.com/buwVPRtJIF
సంకల్పం గొప్పగా ఉన్నప్పుడు పరికరాలతో పని లేదు.
— Shirisha Swaero Akinapally (@ShirishaSwaero) May 31, 2022
మా అన్నతమ్ముళ్లే నిచ్చెనగా మారి బహుజనుల గుండెచప్పుడు నీలి జెండాను ఎగురవేశారు.
ఇలాంటి లక్షలాదిమంది యువకులు తెలంగాణలో బహుజన రాజ్య స్థాపన కోసం @RSPraveenSwaero గారి అడుగుజాడల్లో నడుస్తున్నారు.@Mayawati @AnandAkash_BSP @ramjigautambsp pic.twitter.com/gkLh8FnnBz







