ಹವಾಮಾನ ವೈಪರೀತ್ಯದ ಮುಂದಿನ ಬಲಿಪಶು ʼಟೊಮೆಟೊ ಕೆಚಪ್ʼ: ಅಧ್ಯಯನ ವರದಿ
"ಜಾಗತಿಕ ಮಟ್ಟದಲ್ಲಿ ಟೊಮೆಟೊ ಕೃಷಿಯ ಮೇಲೆ ಪರಿಣಾಮ"

IMAGE CREDIT: istockphoto.com
ಕೋಪನ್ಹೇಗನ್, ಜೂ.8: ಹವಾಮಾನ ವೈಪರೀತ್ಯ ಸಮಸ್ಯೆಯ ಮುಂದಿನ ಬಲಿಪಶು ಟೊಮಟೊ ಕೆಚಪ್ ಆಗಲಿದೆ ಎಂದು ಡೆನ್ಮಾರ್ಕ್ನ ಅಧ್ಯಯನ ವರದಿಯೊಂದು ಹೇಳಿದೆ.
ಹವಾಮಾನ ಬದಲಾವಣೆಯ ಸಮಸ್ಯೆಯು ಮುಂದಿನ ದಿನದಲ್ಲಿ ಬೀರಲಿದ್ದು ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಂಠಿತಗೊಳ್ಳಲಿದೆ. ಇದರಿಂದ ಕೆಚಪ್ ಪೂರೈಕೆ ಮೊಟಕುಗೊಳ್ಳಲಿದೆ ಎಂದು ಡೆನ್ಮಾರ್ಕ್ನ ಆರ್ಹಸ್ ವಿವಿಯ ಸಂಶೋಧಕರ ತಂಡದ ಅಧ್ಯಯನ ವರದಿ ಹೇಳಿದೆ.
ಚೆನ್ನಾಗಿ ಬಲಿತು ಹಣ್ಣಾದ, ಕೆಂಪು ಬಣ್ಣದ, ಸಿಹಿ ಮತ್ತು ರಸಭರಿತ ಟೊಮೆಟೊದಿಂದ ತಯಾರಿಸುವ ಕೆಚಪ್ಗೆ ವಿಶ್ವದೆಲ್ಲೆಡೆ ಭಾರೀ ಬೇಡಿಕೆಯಿದೆ. ಗರಿಷ್ಟ ಟೊಮೆಟೊ ಬೆಳೆಯುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಟಲಿ, ಚೀನಾ ಮತ್ತು ಕ್ಯಾಲಿಫೋರ್ನಿಯಾಗಳು ಜಾಗತಿಕ ತಾಪಮಾನದ ಅಪಾಯ ಹೆಚ್ಚಿರುವ ಪಟ್ಟಿಯಲ್ಲಿ ಗುರುತಿಸಿಕೊಂಡಿರುವುದು ಇದಕ್ಕೆ ಕಾರಣವಾಗಲಿದೆ ಎಂದು ವರದಿ ಹೇಳಿದೆ.
Next Story