ಮಳಲಿ ಮಸೀದಿ ವಿವಾದ; ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ

ಮಂಗಳೂರು, ಜೂ. 9: ಮಳಲಿ ಮಸೀದಿ ವಿವಾದ ಸಂಬಂಧದ ವಿಚಾರಣೆಯನ್ನು ಮೂರನೇ ಸಿವಿಲ್ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.
ಗುರುವಾರ ವಾದ ಮಂಡಿಸಿದ ವಿಶ್ವ ಹಿಂದೂ ಪರಿಷತ್ ಪರ ವಕೀಲರು, ಮಳಲಿ ಮಸೀದಿಯನ್ನು ವಕ್ಫ್ ಆಸ್ತಿ ಎಂದು ಮಸೀದಿಯವರು ಹೇಳಿದರೆ ನಾವು ಒಪ್ಪುವುದಿಲ್ಲ, ನ್ಯಾಯಾಲಯ ತನಿಖೆ ನಡೆಸಿ ಬಳಿಕ ತೀರ್ಪು ನೀಡಿದರೆ ಒಪ್ಪಬಹುದು. ಮಸೀದಿಗೂ ವಕ್ಫ್ ಆಸ್ತಿಗೂ ಸಂಬಂಧವಿಲ್ಲ ಎಂದು ವಾದ ಮಂಡಿಸಿದರು.
ವಿಶ್ವ ಹಿಂದೂ ಪರಿಷತ್ ವಕೀಲರ ವಾದ ಆಲಿಸಿದ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
Next Story





