ಜೂನ್ ತಿಂಗಳಾಂತ್ಯದವರೆಗೆ ಪಡಿತರ ಇ-ಕೆವೈಸಿಗೆ ಅವಕಾಶ
ಮಂಗಳೂರು : ಪಡಿತರ ಚೀಟಿದಾರರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪೋರ್ಟೆಬಿಲಿಟಿ ಮೂಲಕ ಜೀವಮಾಪನ ನೀಡಿ ಬೆಳಗ್ಗೆ ೮ ರಿಂದ ರಾತ್ರಿ ೮ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರ ವಿವರಗಳೊಂದಿಗೆ ಇ-ಕೆವೈಸಿ ಮಾಡಿಸಲು ಜೂ.೩೦ರವರೆಗೆ ಅವಕಾಶ ಕಲ್ಪಿಸಲಾಗಿದೆ.
ವಲಸೆ ಹೋದವರು ಅಥವಾ ಬೇರೆ ಜಿಲ್ಲೆಗಳಿಗೆ ಕೆಲಸ ನಿುತ್ತ ತೆರಳಿರುವ ವ್ಯಕ್ತಿಗಳು ಕೂಡ ಇದಕ್ಕೆ ಅರ್ಹರಾಗಿರು ತ್ತಾರೆ. ಪಡಿತರ ಚೀಟಿದಾರರ ಎಲ್ಲಾ ಸದಸ್ಯರ ಬಯೋದೃಢೀಕರಣ ಮಾಡಿಸಬೇಕು, ವಿಶೇಷ ವರ್ಗಕ್ಕೆ ಸೇರಿದ ವರಾಗಿದ್ದಲ್ಲಿ ಆ ಬಗ್ಗೆ ಧೃಢಪತ್ರ,ಆಧಾರ್ ಸಂಖ್ಯೆ, ಫೋನ್ ನಂಬರ್, ಅಡುಗೆ ಅನಿಲದ ಮಾಹಿತಿ ಹಾಗೂ ಕುಟುಂಬದ ಸದಸ್ಯರ ಸಂಬಂಧವನ್ನು ಸಹ ಇ-ಕೆವೈಸಿಯಲ್ಲಿ ನಮೂದಿಸಬೇಕು.
ಇದು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಪಡಿತರ ಚೀಟಿದಾರರಿಗೆ ಅಂತಿಮ ಅವಕಾಶವಾಗಿದೆ ಎಂದು ಜಿಲ್ಲಾಧಿ ಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.
Next Story