ಡಾ. ರಮಾನಂದ ಬನಾರಿಗೆ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ

ಮಂಗಳೂರು : ಕಲ್ಕೂರ ಪ್ರತಿಷ್ಠಾನ (ರಿ) ಮಂಗಳೂರು ಹಾಗೂ ಜೆ.ಕೆ.ವಿ ಸಂಘ, ಜೊಡುಕಲ್ಲು ಇದರ ಸಹಯೋಗದೊಂದಿಗೆ ಖ್ಯಾತ ವೈದ್ಯ, ಹಿರಿಯ ಸಾಹಿತಿ, ಗಡಿನಾಡಿನ ಕನ್ನಡ ಹೊರಾಟಗಾರ ಡಾ. ರಮಾನಂದ ಬನಾರಿ ಅವರಿಗೆ ಜೂ.೧೧ರಂದು ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಕಯ್ಯಾರರ ೧೦೭ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಹುಟ್ಟೂರಿನ ಜೊಡುಕಲ್ಲು ಎಂಬಲ್ಲಿರುವ ಜೆ.ವಿ.ಕೆ. ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೊಮಶೇಖರ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮುತ್ತಿನಹಳ್ಳಿ, ಕಿಞ್ಞಣ್ಣ ರೈಯ ಪುತ್ರ ಪ್ರಸನ್ನ ರೈ ಅತಿಥಿಗಳಾಗೊ ಪಾಲ್ಗೊಳ್ಳಲಿದ್ದಾರೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
Next Story





