ಬೆಂಗಳೂರು | ಸಿಗ್ನಲ್ ಜಂಪ್ ದಂಡ ಪಾವತಿಸಲು ನಿರಾಕರಣೆ; ಬಿಜೆಪಿ ಶಾಸಕನ ಪುತ್ರಿ ಎಂದು ಪೊಲೀಸರೊಂದಿಗೆ ವಾಗ್ವಾದ

ಬೆಂಗಳೂರು, ಜೂ.9: ದಂಡ ಪಾವತಿ ವಿಚಾರಕ್ಕಾಗಿ ತಾನೂ ಬಿಜೆಪಿ ಶಾಸಕನ ಪುತ್ರಿ ಎಂದು ಯುವತಿ ನಗರ ಸಂಚಾರ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಎಂದು ಹೇಳಿಕೊಂಡು ಯುವತಿ ಸಿಗ್ನಲ್ ಜಂಪ್ ದಂಡ ಪಾವತಿಸಲು ನಿರಾಕರಿಸಿದ್ದಾಳೆ ಎನ್ನಲಾಗಿದೆ. ಬಳಿಕ ಪೊಲೀಸರು ಆಕೆಗೆ ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವತಿ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿರಲಿಲ್ಲ ಎಂದು ಹೇಳಲಾಗುತ್ತಿದೆ.
Next Story





