ಬಿಐಟಿಯಿಂದ ಜೂ.11ರಂದು 'ಟ್ಯಾಲೆಂಟ್ ಹಂಟ್ 2022'

ಮಂಗಳೂರು, ಜೂ.10: ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಪತ್ತೆಹಚ್ಚುವ ಸಲುವಾಗಿ ಬಿಐಟಿ (ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವತಿಯಿಂದ 'ಟ್ಯಾಲೆಂಟ್ ಹಂಟ್ 2022'ನನ್ನು ಆಯೋಜಿಸಲಾಗಿದೆ.
ಈ ಪ್ರವೇಶ ಪರೀಕ್ಷೆಯು ಜೂ.11ರಂದು ಬೆಳಗ್ಗೆ 9:30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಸಮೀಪದ ಇನೋಳಿಯ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಪ್ರತಿಭಾನ್ವಿತ ಮತ್ತು ಅರ್ಹ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಬಿಎಸ್‌ಸಿ (ಹಾನರ್ಸ್) ಆಕಾಂಕ್ಷಿಗಳಿಗೆ ಟ್ಯೂಶನ್ ಶುಲ್ಕದಲ್ಲಿ ಶೇ.100ರಷ್ಟು ವಿದ್ಯಾರ್ಥಿ ವೇತನವನ್ನು ಬಿಐಟಿ ಮತ್ತು ಬ್ಯಾರೀಸ್ ಎನ್ವೀರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್(ಬೀಡ್ಸ್)ನಿಂದ ನೀಡಲಾಗುವುದು. ಶುಲ್ಕದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಶೇ. 10ರಷ್ಟು ಪ್ರಯೋಜನ ದೊರೆಯಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿರುತ್ತಾರೆ
ಆಸಕ್ತ ಅರ್ಹ ವಿದ್ಯಾರ್ಥಿಗಳು ಮೊ.ಸಂ.: 7259661177 ಸಂಖ್ಯೆಗೆ ತಮ್ಮ ಹೆಸರು ಹಾಗೂ ಕಾಲೇಜಿನ ಹೆಸರನ್ನು ಇಂದು(ಜೂ.10) ಸಂಜೆ 5 ಗಂಟೆಯೊಳಗೆ ಎಸ್ಸೆಮ್ಮೆಸ್ ಮಾಡಬೇಕು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.