ಜೂ.11: ಬಿಐಟಿಯಿಂದ 'ಕ್ಯಾಂಪಸ್ ಕನೆಕ್ಟ್ 2022'

ಮಂಗಳೂರು, ಜೂ.10: ಬಿಐಟಿ(ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವತಿಯಿಂದ ಇಂಜಿನಿಯರಿಂಗ್, ಬಿಎಸ್ಸಿ (ಹಾನರ್ಸ್), ಬಿಸಿಎ, ಎಂಟೆಕ್ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ ಸಂಬಂಧಿಸಿದ ಶೈಕ್ಷಣಿಕ ಪ್ರದರ್ಶನ 'ಕ್ಯಾಂಪಸ್ ಕನೆಕ್ಟ್ 2022' ಜೂ.11ರಂದು ಇನೋಳಿಯಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9:30ರಿಂದ ಅಪರಾಹ್ನ 3 ಗಂಟೆಯವರೆಗೆ ಈ ಪ್ರದರ್ಶನ ನಡೆಯಲಿದೆ. ವಿದ್ಯಾರ್ಥಿಗಳ ಆಯ್ಕೆಯ ಅನ್ವೇಷಣೆ, ವಾಕ್‌ಥ್ರೂ ಕ್ಯಾಂಪಸ್ ಮಾರ್ಗದರ್ಶನ, ಉಪನ್ಯಾಸಕರ ಜತೆ ಸಂವಾದ, ವಿದ್ಯಾರ್ಥಿ ವೇತನ ಮತ್ತು ಪ್ಲೇಸ್‌ಮೆಂಟ್ ಬಗ್ಗೆ ಮಾಹಿತಿ, ಬಿಐಟಿ ವಿದ್ಯಾರ್ಥಿಗಳ ಅವಿಷ್ಕಾರದ ಪ್ರದರ್ಶನ ಈ ಕ್ಯಾಂಪಸ್ ಕನೆಕ್ಟ್‌ನ ಉದ್ದೇಶವಾಗಿದೆ.
ಹೆಚ್ಚಿನ ಮಾಹಿತಿಗಾಗಿ 9900066888 ಅಥವಾ www.bitmangalore.edu.in, www.beads.edu.inಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story