ಗ್ಲಿಟ್ಝ್ ಲೈಫ್ ಸ್ಟೈಲ್ ಶೋ; ಜೂ. 11ರಂದು ಕೊನೆಯ ದಿನ

ಮಂಗಳೂರು : ಪ್ರಖ್ಯಾತ ಎಕ್ಸಿಬಿಷನ್ ನಿರೂಪಕಿ ನೀತಾ ಕಾಮತ್ ಇವರ ಗ್ಲಿಟ್ಝ್ ಲೈಫ್‍ಸ್ಟೈಲ್ ಶೋ ಓಶಿಯನ್ ಪರ್ಲ್ ಹೊಟೇಲ್‍ನ ಪೆಸಿಫಿಕ್ 4 ರಲ್ಲಿ ಜೂ. 10 ಮತ್ತು 11 ರಂದು (ಶುಕ್ರವಾರ ಮತ್ತು ಶನಿವಾರ) ಸೇಲ್ ಮತ್ತು ಪ್ರದರ್ಶನವನ್ನು ಏರ್ಪಡಿಸಿದೆ.
ಜೂನ್ ತಿಂಗಳಲ್ಲಿ ಗ್ಲಿಟ್ಝ್ ಪ್ರದರ್ಶನಕ್ಕೆ ಭೇಟಿ ನೀಡಿ ವಾರ್ಡ್‍ರೋಬನ್ನು ವಿಶೇಷ ಸಂಗ್ರಹಗಳೊಂದಿಗೆ ಬದಲಾಯಿಸಲು ನೀತಾ ಕಾಮತ್ ಕರೆ ನೀಡಿದ್ದಾರೆ. ಪ್ರದರ್ಶನವು ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ನಡೆಯಲಿದ್ದು, ಭಾನವಿಯವರ ರೇಷ್ಮೆ ಸೀರೆಗಳು, ಆಧ್ಯ ಇವರ ಹ್ಯಾಂಡ್ ಲೂಮ್ ಕಾಟನ್ಸ್, ನವೀಜ್ ಎಂಟರ್‍ಪ್ರೈಸಸ್‍ನ ಕೂಲ್ ಕಾಟನ್ ಸೂಟ್ಸ್, ಶೋರ್ ಮತ್ತು ಶೆಲ್ಸ್ ರ ಸಂಕೀರ್ಣವಾದ ಆಭರಣಗಳು, ಪ್ರಾಚಿಯ ಬೆಡ್‍ಲಿನೆನ್ಸ್, ಡಿಸೈನರ್ ಕುರ್ತಾಗಳು, ಆಂಚಲ್ ವಿನ್ಯಾಸಗಳಿಂದ ಹೊಲಿಯದ ಸೂಟ್‍ಗಳು, ಸ್ವಸ್ಥ ಕುಕ್‍ವೇರ್, ಅಂತರಿಕ್ಷ್ ಇವರ ಕಲಾಂಕರಿ ಫ್ಯಾಬ್ರಿಕ್, ಆರ್ಟಿಸ್ಟಾದಿಂದ ಟ್ರೆಂಡಿ ಕ್ಲಚಸ್, ಹೋಮ್‍ಮೇಡ್ ಸಾವಯವ ಸಾಬೂನುಗಳು, ಸುಗಂಧ ಮೇಣದ ಬತ್ತಿಗಳು, ಕೇಸರಿ, ಕಾಂಡಿಮೆಂಟ್ಸ್ ಇತ್ಯಾದಿ ಮತ್ತು ಇನ್ನೂ ಹಲವು ಭಾರತದಾದ್ಯಂತದಿಂದ ವಿವಿಧ ವಿಶೇಷ ಶಾಪಿಂಗ್ ಐಟಮ್ಸ್ 2 ದಿನಗಳ ಗ್ಲಿಟ್ಜ್ ಎಕ್ಸಿಬಿಷನ್‍ನಲ್ಲಿ ಪ್ರದರ್ಶನಗೊಳ್ಳಲಿದೆಯೆಂದು ನಿರೂಪಕಿ ತಿಳಿಸಿದ್ದಾರೆ.