ಬಂಟಕಲ್ಲು: ಉಚಿತ ಪುಸ್ತಕ, ಬ್ಯಾಗ್ ಶೈಕ್ಷಣಿಕ ಪರಿಕರ ವಿತರಣೆ

ಶಿರ್ವ : ಹಳೆವಿದ್ಯಾರ್ಥಿ, ಅನಿವಾಸಿ ಭಾರತೀಯ ಉಮೇಶ್ ಪಾಟ್ಕರ್, ತಮ್ಮ ಮಾತಾಪಿತರ ಉಪಸ್ಥಿತಿಯಲ್ಲಿ ಬಂಟಕಲ್ಲು ಶ್ರೀದುರ್ಗಾಪರ ಮೇಶ್ವರೀ ಹಿರಿಯ ಪ್ರಾಥಮಿಕ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಸ್ಕೂಲ್ ಬ್ಯಾಗ್, ಶೈಕ್ಷಣಿಕ ಪರಿಕರಗಳನ್ನು ವಿತರಿಸಿದರು.
ಶಾಲಾ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಗಂಪದಬೈಲು ಜಯರಾಮ್ ಪ್ರಭು ವಹಿಸಿದ್ದರು. ಸುಂದರ ಪಾಟ್ಕರ್ ದಂಪತಿ ಮತ್ತು ಉಮೇಶ್ ಪಾಟ್ಕರ್‌ರ ಸಹೋದರಿ ವನಿತಾ ಪರಿಕರಗಳನ್ನು ವಿತರಿಸಿದರು.
ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ್ ಪ್ರಭು, ಎಸ್‌ಎಲ್‌ಎಫ್ ಸಂಸ್ಥೆಯ ಪ್ರತಿನಿಧಿ ಡಾ.ಕೇಶವ ಎಲ್.ಪಾಟ್ಕರ್, ನಿವೃತ್ತ ಶಿಕ್ಷಕಿ ಲೀಲಾವತಿ ಎಲ್ ಪಾಟ್ಕರ್, ನಿವೃತ್ತ ಮುಖ್ಯ ಶಿಕ್ಷಕಿ ಲಾವಣ್ಯವತಿ ಬಾಯಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನವೀನ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ಸ್ವಾಗತಿಸಿದರು. ಸಹಶಿಕ್ಷಕಿ ವಿನುತಾ ನಿರೂಪಿಸಿದರು. ಸಹಶಿಕ್ಷಕಿ ಶಾಲಿನಿ ವಂದಿಸಿದರು.