ಫಿಝಾ ನೆಕ್ಸಸ್ ಮಾಲ್‍ನಲ್ಲಿ ಬೃಹತ್ ರಕ್ತದಾನ ಶಿಬಿರ
ಮಂಗಳೂರಿನ ಪಾಂಡೇಶ್ವರದ ಪ್ರತಿಷ್ಠಿತ ಅಂತರ್ ರಾಷ್ಟ್ರೀಯ ಮಟ್ಟದ ಫಿಝಾ ನೆಕ್ಸಸ್ ಮಾಲ್ (ಹಿಂದಿನ ಫೋರಂ) ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.
ಜೂನ್ 14 ರಂದು ಕೆ.ಎಮ್.ಸಿ, ಬ್ಲಡ್ ಬಾಂಕ್ ಮತ್ತು ವೈದ್ಯರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ದಾನಿಗಳು ಬಂದು ರಕ್ತದಾನ ಮಾಡಬೇಕಾಗಿ ಕೋರಲಾಗಿದೆ. ಮಳೆಗಾಲದ ಆರಂಭದಲ್ಲಿ ಹೆಚ್ಚಿನ ರಕ್ತದ ಅವಶ್ಯಕತೆ ಇದ್ದು ಅದರ ಪೂರೈಕೆಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಆಸಕ್ತರು ಬಂದು ಫ್ರಂಟ್ ಆಫೀಸ್ ನಲ್ಲಿ ನೋಂದಯಿಸಿಕ್ಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story