ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಘಟಿಕೋತ್ಸವ

ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನ 12ನೆ ಘಟಿಕೋತ್ಸವ ಲೊಯೊಲಾ ಸಭಾಂಗಣದಲ್ಲಿ ಇಂದು ನಡೆಯಿತು.
ಘಟಿಕೋತ್ಸವದಲ್ಲಿ ೧೦೩೨ ಯುಜಿ, ೪೭೫ ಪಿಜಿ ಮತ್ತು ಓರ್ವ ಪಿಜಿ ಡಿಪ್ಲೋಮಾ ಪದವೀಧರರಿಗೆ ಪದವಿ ಪ್ರಮಾಣ ಪತ್ರಗಳನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ 80 ರ್ಯಾಂಕ್ ವಿಜೇತರು ಮತ್ತು 6 ವಿಶೇಷ ಬಹುಮಾನ ವಿಜೇತರನ್ನು ಗೌರವಿಸಲಾಯಿತು.
ಮಂಗಳೂರು ಜೆಸ್ಯೂಟ್ ಎಜುಕೇಶನ್ ಸೊಸೈಟಿ (ಎಂಜೆಇಎಸ್)ಯ ಅಧ್ಯಕ್ಷ ರೆ.ಫಾ. ಡೈನೇಶಿಯಸ್ ವಾಝ್ ಅಧ್ಯಕ್ಷತೆ ವಹಿಸಿ, ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಮಂಗಳೂರು ವಿವಿಯ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ.ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಡಾ. ಆಲ್ವಿನ್ ಜೋಸಾ ರ್ಯಾಂಕ್ ವಿಜೇತರು ಮತ್ತು ವಿಶೇಷ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದರು. ಘಟಿಕೋತ್ಸವದ ಸಂಚಾಲಕ ಡಾ. ಸಂತೋಷ್ ಜಿ. ಗೋವಿಯಸ್ ವಂದಿಸಿದರು. ಬಿಬಿಎ ವಿಭಾಗದ ಮನೋಜ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.