ನಾರ್ವೆ ಚೆಸ್ ಓಪನ್ ಜಯಿಸಿದ ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ

ಹೊಸದಿಲ್ಲಿ, ಜೂ.11: ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ 9 ಸುತ್ತಿನಲ್ಲಿ 7.5 ಅಂಕವನ್ನು ಗಳಿಸುವುದರೊಂದಿಗೆ ನಾರ್ವೆ ಗ್ರೂಪ್ ‘ಎ’ ಚೆಸ್ ಒಪನ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
16ರ ಹರೆಯದ ಅಗ್ರ ಶ್ರೇಯಾಂಕದ ಗ್ರಾಂಡ್‌ಮಾಸ್ಟರ್ ಪ್ರಜ್ಞಾನಂದ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. 9 ಸುತ್ತಿನಲ್ಲಿ ಅಜೇಯವಾಗುಳಿದಿದ್ದಾರೆ. ಶುಕ್ರವಾರ ಭಾರತದ ವಿ
.ಪ್ರಣೀತ್ ವಿರುದ್ಧ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದರು. ಪ್ರಜ್ಞಾನಂದ ಅವರು 2ನೇ ಸ್ಥಾನಿ ಇಸ್ರೇಲ್‌ನ ಮಾರ್ಸೆಲ್ ಹಾಗೂ ಸ್ವೀಡನ್‌ನ ಜುಂಗ್ ಸೆವೊರನ್ನು ಹಿಂದಿಕ್ಕಿ ಪೂರ್ಣಾಂಕವನ್ನು ಪಡೆದರು. ಆರು ಅಂಕ ಪಡೆದಿರುವ ಪ್ರಣೀತ್ 3ನೇ ಸ್ಥಾನ ಹಂಚಿಕೊಂಡರು.
ಪ್ರಜ್ಞಾನಂದ ಇತ್ತೀಚೆಗೆ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು ಎರಡನೇ ಬಾರಿ ಸೋಲಿಸಿ ಗಮನ ಸೆಳೆದಿದ್ದರು.
Next Story





