ಪ್ರವಾದಿ ನಿಂದನೆ ಖಂಡನಾರ್ಹ : ಸಮಸ್ತ ಜಂ ಇಯ್ಯತುಲ್ ಉಲಮಾ ಪುತ್ತೂರು
ಪುತ್ತೂರು: ಕೆಲದಿನಗಳ ಹಿಂದೆ ಕೇಂದ್ರ ಸರಕಾರದ ವಕ್ತಾರರೊಬ್ಬರು ಪ್ರವಾದಿ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆಯು ಪ್ರತಿಯೊಬ್ಬನಿಗೂ ನೋವು ತರುವ ಸಂಗತಿಯಾಗಿದ್ದು, ಮುಸಲ್ಮಾನರ ಧಾರ್ಮಿಕ ಭಾವನೆಗಳ ಮೇಲೆ ಸಮರ ಸಾರಿರುವುದು ಖಂಡನಾರ್ಹ ಎಂದು ಸಮಸ್ತ ಜಂಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಅಭಿಪ್ರಾಯ ಪಟ್ಟಿದೆ.
ಪ್ರವಾದಿ ಅವರನ್ನು ನಿಂದಿಸಿ ಕೋಟ್ಯಂತರ ಜನರ ಭಾವನೆಗೆ ನೋವುಂಟು ಮಾಡಿದವರಿಗೆ ತಕ್ಕ ಶಿಕ್ಷೆಯಾಗ ಬೇಕು. ಭವಿಷ್ಯದಲ್ಲಿ ಆಳುವವರಿಂದ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಬಾರದಂತೆ ತಡೆಯಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷರಾದ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಹಾಗೂ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story