ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

ಉಡುಪಿ, ಜೂ.೧೨: ಕಾಪು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಶನಿವಾರ ಮಧ್ಯ ರಾತ್ರಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಕಾಪು ಪೊಲೀಸರ ಸಹಾಯದಿಂದ ರಕ್ಷಿಸಿ ಉಡುಪಿಯ ಸಖಿ ಒನ್ ಸ್ಟಾಪ್ ಸೆಂಟರಿಗೆ ದಾಖಲಿಸಿದ್ದಾರೆ.
ಮೂಲತಃ ಬಿಹಾರದ ಈ ಮಹಿಳೆಯನ್ನು ಫುಲ ಕುಮಾರಿ(೩೫) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದ ತಾನು ಬೀದಿ ಪಾಲಾಗಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಮಹಿಳೆಯ ಅಸಹಾಯಕತೆಯ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಮಧ್ಯರಾತ್ರಿ ತನ್ನ ವಾಹನದಲ್ಲಿ ಕಾಪುಗೆ ತೆರಳಿ ಮಹಿಳೆಯನ್ನು ರಕ್ಷಿಸಿದರು. ಮಹಿಳೆಯ ಸಂಬಂಧಿಕರು ಅಥವಾ ಸಂಬಂಧಪಟ್ಟವರು ಇದ್ದಲ್ಲಿ ಕಾಪು ಪೊಲೀಸ್ ಠಾಣೆ ಅಥವಾ ಸಖಿ ಒನ್ ಸ್ಟಾಪ್ ಸೆಂಟರ್ ಸಂಪರ್ಕಿಸು ವಂತೆ ಕೋರಲಾಗಿದೆ.
Next Story





