ಖೈರಿಯಾ ಶೆಲ್ಟರ್: ದಾಖಲಾತಿ ಆರಂಭ
ಮಂಗಳೂರು, ಜೂ.12: ತೊಕ್ಜೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಬಬ್ಬುಕಟ್ಟೆ (ಮಂಗಳೂರು ವಿವಿ ರಸ್ತೆ) ಯಲ್ಲಿರುವ ಖೈರಿಯಾ ಟ್ರಸ್ಟ್ ಅನಾಥ, ನಿರ್ಗತಿಕ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಅರ್ಜಿ ಆಹ್ವಾನಿಸಿದೆ.
ಟ್ರಸ್ಟ್ ಅಧೀನದ ಖೈರಿಯಾ ಶೆಲ್ಟರ್‌ನಲ್ಲೇ ಇದ್ದುಕೊಂಡು 6 ರಿಂದ ಪಿಯುಸಿವರೆಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಲಾಗುವುದು. ಊಟ, ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು.
ಆಸಕ್ತರು ಮೊ.ಸಂ; 9740799555/8105150273/0824-2468555ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story