ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಉತ್ತಮ ಮಳೆಯಾಗಿದ್ದು, ರವಿವಾರ ಹಲವೆಡೆ ಭಾರೀ ಮಳೆಯಾಗಿರುವ ಬಗ್ಗೆಯೂ ವರದಿಯಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಉಡುಪಿ- ೨೦.೧ಮಿ.ಮೀ., ಬ್ರಹ್ಮಾವರ- ೬.೦ಮಿ.ಮೀ., ಕಾಪು- ೧೦.೨ಮಿ.ಮೀ., ಕುಂದಾಪುರ-೧೭.೪ಮಿ.ಮೀ., ಬೈಂದೂರು-೩೬.೨ಮಿ.ಮೀ., ಕಾರ್ಕಳ-೧೦.೭ಮಿ.ಮೀ., ಹೆಬ್ರಿ-೨೨.೮ಮಿ.ಮೀ. ಆಗಿದ್ದು, ಜಿಲ್ಲೆಯಲ್ಲಿ ಸರಾಸರಿ ೧೮.೨ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಜೂ.11ರಂದು ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಪಾರ್ವತಿ ಬಾಯಿ ಎಂಬವರ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಭಾಗಶಃ ಹಾನಿಯಾಗಿದ್ದು, ಇದರಿಂದ ಸುಮಾರು ೧೦,೦೦೦ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸ ಲಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
Next Story





