ನಡೂರು: ಮೂರು ಅಂಗನವಾಡಿಗಳ ಮಕ್ಕಳಿಗೆ ಸಮವಸ್ತ್ರ ವಿತರಣೆ

ಬ್ರಹ್ಮಾವರ, ಜೂ.೧೨: ಲಯನ್ಸ್ ಕ್ಲಬ್ ಕುಂಜಿಬೆಟ್ಟು, ೧೪ನೆ ಕಾಡೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಗ್ರಾಪಂ ಉಪಾಧ್ಯಕ್ಷೆ ಅಮಿತಾ ರಾಜೇಶ್ ಮುತು ವರ್ಜಿಯಲ್ಲಿ ದಾನಿಗಳ ಮೂಲಕ ನಡೂರು ಗ್ರಾಮದ ನಡೂರು, ಕಂಡಿಕೆ ಹಾಗೂ ಅಲೆಯ ಗುಡ್ಡೆಯಂಗಡಿಯ ಒಟ್ಟು ಮೂರು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸಮವಸ್ತ್ರ ವಿತರಣೆ ಸಮಾರಂಭವು ರವಿವಾರ ನಡೂರಿನ ಅಂತಯ್ಯ ಶೆಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಪಾಂಡುರಂಗ ಶೆಟ್ಟಿ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಅಂಜೆಲಿನ್ ಮೆಂಡೋನ್ಸ ಮಕ್ಕಳನ್ನು ಕುರಿತು ಮಾತನಾಡಿದರು. ದಾನಿಗಳಾದ ನಿವೃತ್ತ ಉಪ ನೋಂದಾವಣಾಧಿಕಾರಿ ಜಾನಕಿ, ಮಕ್ಕಳಿಗೆ ಹಾಗೂ ಮಕ್ಕಳ ಪೋಷಕರಿಗೆ ಉತ್ತಮವಾದ ಮಾರ್ಗದರ್ಶನ ನೀಡಿದರು.
ಲಯನ್ಸ್ ಕ್ಲಬ್ ಉಪಾಧ್ಯಕ್ಷೆ ಸಹಾಯ ಮೇರಿ ಮಕ್ಕಳ ಆರೋಗ್ಯ ಹಾಗೂ ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು. ಕಾಡೂರು ಗ್ರಾಪಂ ಉಪಾಧ್ಯಕ್ಷೆ ಅಮಿತಾ ರಾಜೇಶ್ ಮಾತನಾಡಿದರು.
ಲಯನ್ಸ್ ಕ್ಲಬ್ ಖಜಾಂಚಿ ಜಯಶ್ರೀ ಶೆಟ್ಟಿ, ಉಪಾಧ್ಯಕ್ಷೆ ಅನಿತಾ ಸಿಕ್ವೇರಾ, ಗ್ರಾಪಂ ಸದಸ್ಯರಾದ ಜಲಂಧರ್ ಶೆಟ್ಟಿ, ಸತೀಶ್ ಕುಲಾಲ್, ಗಿರಿಜಾ ನಡೂರು, ಅಂಗನವಾಡಿಗಳ ಮೇಲ್ವಿಚಾರಕಿ ಪೂರ್ಣಿಮಾ ಎಂ.ಎಸ್., ದಾನಿ ಡಾ.ವಾಣಿಶ್ರೀ ಐತಾಳ್, ಅಂಗನವಾಡಿಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
