ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ 'ತಿಥಿ' ಆಹ್ವಾನ ಪತ್ರಿಕೆ ವೈರಲ್..!

ಬೆಂಗಳೂರು, ಜೂ. 12: ಜೆಡಿಎಸ್ ಹಾಗೂ ಅಡ್ಡಮತದಾನ ಮಾಡಿದ ಶಾಸಕರ ಬೆಂಬಲಿಗರ ಟೀಕೆ, ಪ್ರತಿರೋಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದರ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತಿಥಿ ಆಹ್ವಾನ ಪತ್ರಿಕೆ ವೈರಲ್ ಮಾಡಲಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಪರಿಣಾಮ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ತಿಥಿ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ, ಕೆಲವರು ವಿಕೃತಿ ಮೆರೆದಿದ್ದರು.
ಈಗ ಇದಕ್ಕೆ ಪ್ರತಿಯಾಗಿ ಮಾಜಿ ಎಚ್.ಡಿ.ಕುಮಾರಸ್ವಾಮಿ ಅವರ ಕೈಲಾಸ ಸಮಾರಾಧನೆಯ ಆಹ್ವಾನ ಪತ್ರಿಕೆ ಎಲ್ಲೆಡೆ ವೈರಲ್ ಆಗಿದೆ. ಜೂನ್ 22ರಂದು ಬಿಡದಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರ ತಿಥಿ ಕಾರ್ಯ ನೆರವೇರಲಿದೆ. ರಾಧಿಕಾ ಕುಮಾರಸ್ವಾಮಿ ಅವರನ್ನು ದುಃಖತಪ್ತರು ಎಂದು ಉಲ್ಲೇಖಿಸಿ ಹಂಚಿಕೆ ಮಾಡಲಾಗಿದೆ.
Next Story





