ಬೆಳ್ಳೆ ಗ್ರಾಪಂ ಅಧ್ಯಕ್ಷನಿಂದ ದಲಿತ ಮಹಿಳೆಗೆ ದೌರ್ಜನ್ಯ ಪ್ರಕರಣ: ಸ್ಥಳಕ್ಕೆ ದಸಂಸ ನಿಯೋಗ ಭೇಟಿ

ಉಡುಪಿ : ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ತೋಕೋಳಿ ಬೆಳ್ಳೆಯ ದಲಿತ ವಿಧವೆ ಲಕ್ಷೀ ಅವರಿಗೆ ಎಸಗಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ನಿಯೋಗವು ಇಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು.
ಸುಧಾಕರ್ ಪೂಜಾರಿ ದಲಿತ ಮಹಿಳೆಯ ಖಾಸಗೀ ಪಟ್ಟಾ ಜಾಗಕ್ಕೆ ಹಲವು ಲಾರಿ ಲೋಡುಗಳಷ್ಟು ವಿಷಕಾರ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಕ್ರಮವಾಗಿ ಸುರಿದಿದ್ದು ಈ ಬಗ್ಗೆ ಆರು ತಿಂಗಳಿಂದ ಲಕ್ಷ್ಮಿ ಪಂಚಾಯತ್ ಅಲೆದರೂ ಪರಿಹಾರ ಸಿಕ್ಕಿರಲಿಲ್ಲ. ವಿಧವಾ ಮಹಿಳೆಯನ್ನು ಪಂಚಾಯತ್ ಗೆ ಕರೆಸಿ ಅಲ್ಲೂ ಸಾರ್ವಜನಿಕ ವಾಗಿ ಬೆದರಿಸಿ , ಅವಮಾನಗೊಳಿಸಿ ರುವುದಾಗಿ ದೂರಲಾಗಿತ್ತು.
ಬಳಿಕ ದಲಿತ ಮಹಿಳೆ ಲಕ್ಷೀ ಅವರೊಂದಿಗೆ ದ.ಸಂ.ಸ.ಬೆಳ್ಳೆ ಗ್ರಾಮ ಶಾಖೆಯ ಪಧಾಧಿಕಾರಿಗಳು ಮತ್ತು ಜಿಲ್ಲಾ ಸಮಿತಿ ಯ ಪಧಾಧಿಕಾರಿಗಳು ಸಭೆ ನಡೆಸಿ ಮುಂದಿನ ಕಾರ್ಯ ಯೋಜನೆ ಯ ಬಗ್ಗೆ ಚರ್ಚಿಸಿದರು
ಈ ಪ್ರಕರಣವನ್ನು ಕೂಲಂಕಷವಾಗಿ ಪರೀಶೀಸಿ ಬೆಳ್ಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲು ಒಂದು ವಾರದ ಗಡುವು ನೀಡುವುದು, ಒಂದು ವಾರದೊಳಗೆ ಈ ತ್ಯಾಜ್ಯವನ್ನು ತೆರವುಗೊಸದೇ ಇದ್ದರೆ ಬೆಳ್ಳೆ ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.
ಹಾಗೆಯೇ ಸಾರ್ವಜನಿಕವಾಗಿ ಮಾನಹಾನಿಕರ ಮಾತನಾಡಿ, ಜಾತಿನಿಂದನೆ ಗೈದು, ಜೀವ ಬೆದರಿಕೆಯೊಡ್ಡಿದ ಬೆಳ್ಳೆ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿಯನ್ನು ಈ ಕೂಡಲೇ ಬಂಧಿಸಬೇಕು. ಇಲ್ಲದಿದ್ದಲ್ಲಿ ಶಿರ್ವ ಪೋಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ನಿಯೋಗದದಲ್ಲಿ ದ.ಸಂ.ಸ. ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಜಿಲ್ಲಾ ಉಪ ಪ್ರಧಾನ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಪ್ರವೀಣ್ ಗುಂಡಿಬೈಲು, ಕಾಪು ತಾಲೂಕು ಪ್ರಧಾನ ಸಂಚಾಲಕ ವಿಠಲ್ ಉಚ್ಚಿಲ, ಬೆಳ್ಳೆ ಗ್ರಾಮ ಶಾಖೆಯ ಸಂಚಾಲಕ ರಾಘವ ಕೋಟ್ಯಾನ್ ಬೆಳ್ಳೆ, ಎಮ್.ರಮೇಶ, ಜಯಕರ ಸಾಲಿಯಾನ್, ಪ್ರವೀಣ್, ಕರುಣಾಕರ, ಜಯ ಸಾಲಿಯಾನ್ ಮತ್ತು ಸಂತ್ರಸ್ತ ಮಹಿಳೆ ಲಕ್ಷೀ ಉಪಸ್ಥಿತರಿದ್ದರು.






.jpeg)


