ನೆಲಮಂಗಲಕ್ಕೂ ಮೆಟ್ರೋ ವಿಸ್ತರಿಸಿ: ಸಿಎಂಗೆ ಬುಡಕಟ್ಟುಗಳ ಆಯೋಗ ಮನವಿ

ಬೆಂಗಳೂರು, ಜೂ. 12: ನಗರದಿಂದ 28 ಕಿ.ಮೀ.ದೂರದ ಹಾಗೂ 22ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಒಳಗೊಂಡಿರುವ ನೆಲಮಂಗಲಕ್ಕೂ ಮೆಟ್ರೋ ವಿಸ್ತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗದ ಸದಸ್ಯ ಎಚ್.ವೆಂಕಟೇಶ್ ದೊಡ್ಡೇರಿ ಮನವಿ ಮಾಡಿದ್ದಾರೆ.
ಈಗಾಗಲೇ ನಮ್ಮ ಮೆಟ್ರೋ 1ನೆ ಹಂತ ಮಾದವಾರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದವರೆಗೂ ಕಾಮಗಾರಿ ನಡೆಸಲಾಗುತ್ತಿದೆ. ಇಲ್ಲಿಂದ ಕೇವಲ 12 ಕಿ.ಮೀ.ದೂರದಲ್ಲಿರುವ ನೆಲಮಂಗಲಕ್ಕೆ ವಿಸ್ತರಣೆ ಮಾಡುವ ಜತೆಗೆ ಸೋಂಪುರ ಕೈಗಾರಿಕಾ ಕೇಂದ್ರದವರೆಗೂ ವಿಸ್ತರಿಸುವಂತೆ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗದ ಸದಸ್ಯ ಎಚ್.ವೆಂಕಟೇಶ್ ದೊಡ್ಡೇರಿ ಅವರು ಮನವಿ ಮಾಡಿದ್ದಾರೆ.
ತುಮಕೂರು-ಕುಣಿಗಲ್-ಮಾಗಡಿ ಸೇರಿ ಪ್ರತಿನಿತ್ಯ ಕೆಲಸಕ್ಕೆ ಹೋಗುವ ಸಾವಿರಾರು ವಾಹನಗಳು ಈ ಮಾರ್ಗವಾಗಿಯೇ ತೆರವುವುದರಿಂದ ಮೆಟ್ರೋ ನೆಲಮಂಗಲದವರೆಗೆ ವಿಸ್ತರಣೆಯಾದರೆ ವಾಹನದಟ್ಟಣೆ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ.





